ಉತ್ತರಪ್ರದೇಶ: ಮಹೋಬಾ ಜಿಲ್ಲೆಯ ಶಕ್ತಿನಗರ ಪ್ರದೇಶದಲ್ಲಿ ವಿದ್ಯಾರ್ಥಿನಿಯರಿಬ್ಬರು ಯುವಕನೋರ್ವನಿಗೆ ನಡು ರಸ್ತೆಯಲ್ಲಿ ಕಪಾಳಕ್ಕೆ ಹೊಡೆದು, ಕಾಲಿನಿಂದ ಒದ್ದು, ಚಪ್ಪಲಿಯಲ್ಲಿ ಥಳಿಸಿದ ಘಟನೆ ನಡೆದಿದೆ.
ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿದ್ಯಾರ್ಥಿನಿಯರ ಹೊಡೆತ ಹಾಗೂ ಅವಮಾನ ತಾಳಲಾರದೇ ಹಲ್ಲೆಗೊಳಗಾದ ಯುವಕ ಘಟನಾ ಸಂದರ್ಭದಲ್ಲೇ ಮುಖ ಮುಚ್ಚಿಕೊಂಡಿದ್ದಾನೆ.
ಇನ್ನು ಮಾಹಿತಿಯ ಪ್ರಕಾರ ಕೋಚಿಂಗ್ ತರಗತಿಗಳನ್ನು ಮುಗಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದ ವಿದ್ಯಾರ್ಥಿನಿಯರನ್ನು ಯುವಕ ಕೆಟ್ಟ ಕಾಮೆಂಟ್ ಹಾಗೂ ಸನ್ನೆಗಳಿಂದ ಚುಡಾಯಿಸಿದ್ದಾನೆ ಎನ್ನಲಾಗಿದೆ. ಕೋಚಿಂಗ್ ತರಗತಿಯಿಂದ ವಿದ್ಯಾರ್ಥಿನಿಯರು ಬರುವ ಮಾರ್ಗದಲ್ಲಿ ಪ್ರತಿದಿನ ಈತನದ್ದು ಇದೇ ಕಾಯಕ ಎನ್ನಲಾಗಿದ್ದು, ಹಲವು ದಿನಗಳಿಂದ ತಮ್ಮನ್ನು ಕೆಣಕುತ್ತಿದ್ದ ಯುವಕನಿಗೆ ವಿದ್ಯಾರ್ಥಿನಿಯರು ತಕ್ಕ ಪಾಠ ಕಲಿಸಬೇಕೆಂದು ನಡು ರಸ್ತೆಯಲ್ಲೇ ಹಲ್ಲೆ ಮಾಡಿದ್ದಾರೆ.
ಯುವಕನ ವಿರುದ್ಧ ಈ ಆರೋಪ ಕೇಳಿಬಂದಿದ್ದು, ಘಟನಾಸ್ಥಳದಲ್ಲಿ ಹಲವಾರು ಮಂದಿ ಹಾಜರಿದ್ದರೂ ಯಾರೊಬ್ಬರೂ ಹಲ್ಲೆ ನಿಲ್ಲಿಸಿ ಘಟನೆಯ ಬಗ್ಗೆ ವಿಚಾರಿಸುವುದಾಗಲಿ ಅಥವಾ ಪೊಲೀಸರಿಗೆ ಮಾಹಿತಿ ನೀಡುವ ಕೆಲಸಕ್ಕೆ ಕೈಹಾಕಿಲ್ಲ. ಅಲ್ಲದೇ ಈ ಘಟನೆ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲೂ ಸಹ ಯಾವುದೇ ಪ್ರಕರಣ ದಾಖಲಾಗಿಲ್ಲ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


