ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರ ಬಿಡುಗಡೆಯಾಗುತ್ತಿದೆ ಎಂದರೆ ಸಾಕು, ಆ ಚಿತ್ರದ ಕ್ರೇಜ್‌ನಿಂದಲೇ ಪ್ರಚಾರವಾಗಿಬಿಡುತ್ತಿತ್ತು. ದರ್ಶನ್ ಸಿನಿಮಾಗೆ ಯಾಕೆ ಇತರರ ಬೆಂಬಲ ಹಾಗೂ ಪ್ರಚಾರ ಎನ್ನುವಂತಿತ್ತು.
ಈಗಲೂ ಸಹ ಡೆವಿಲ್ ಚಿತ್ರ ಅದೇ ಹಾದಿಯಲ್ಲಿದೆ. ಒಂದೆಡೆ ದರ್ಶನ್ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದು, ಜಾಮೀನಿನ ಮೇಲೆ ಹೊರಬಂದಾಗ ಚಿತ್ರೀಕರಣ ಮುಗಿಸಿಕೊಂಡಿರುವ ಡೆವಿಲ್ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ.
ಇದೇ 5ರಂದು ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದ್ದು, 11ರಂದು ಚಿತ್ರ ಬಿಡುಗಡೆಯಾಗಲಿದೆ. ಚಿತ್ರತಂಡ ಹಾಡು ಹಾಗೂ ಟೀಸರ್‌ಗಳನ್ನು ಬಿಡುಗಡೆ ಮಾಡಿ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವ ಕೆಲಸವನ್ನು ಮಾಡಿದ್ದು, ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಟಿಯನ್ನೂ ಸಹ ನಡೆಸಿದೆ. ನಟ ಜೈಲಿನಲ್ಲಿದ್ದರೂ ಬಿಡುಗಡೆಗೆ ಬೇಕಾದ ಕಾರ್ಯಗಳಲ್ಲಿ ಚಿತ್ರದ ನಿರ್ದೇಶಕರು ಹಾಗೂ ಕಲಾವಿದರು ಕೈಜೋಡಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ನಿರ್ದೇಶಕ ಪ್ರಕಾಶ್ ವೀರ್‌ಗೆ ಚಿತ್ರಕ್ಕೆ ಇಂತಹ ಕಠಿಣ ಪರಿಸ್ಥಿತಿಯಲ್ಲಿ ಇಂಡಸ್ಟ್ರಿಯ ಬೆಂಬಲ ಹೇಗಿದೆ ಎಂಬ ಪ್ರಶ್ನೆ ಎದುರಾಯಿತು. ಇತರೆ ಸ್ಟಾರ್‌ಗಳು ಡೆವಿಲ್‌ಗೆ ಬೆಂಬಲ ನೀಡುತ್ತಿಲ್ಲ ಎಂಬ ವಿಚಾರವನ್ನು ಕೇಳಲಾಯಿತು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರಕಾಶ್ ನಾವು ಕೇಳಿದರೆ ಅಥವಾ ಚರ್ಚಿಸಿದರೆ ಎಲ್ಲರೂ ನಮ್ಮ ಜತೆ ನಿಲ್ಲುತ್ತಾರೆ, ನಾವು ನಮ್ಮದೇ ಆದ ದೊಡ್ಡ ಕೆಲಸಗಳನ್ನು ಮುಗಿಸುವುದರಲ್ಲಿ ನಿರತರಾಗಿದ್ದೇವೆ, ಹಾಗಾಗಿ ನಾವು ಯಾರನ್ನೂ ಸಹ ಕೇಳಲು ಹೋಗಿಲ್ಲ, ನಾವು ಯಾರನ್ನಾದರೂ ಕೇಳಿದರೆ ಖಂಡಿತ ಅವರು ನಮಗೆ ಬೆಂಬಲವನ್ನು ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಕೇಳದೆಯೇ ಸ್ವತಃ ತಾವೇ ಬೆಂಬಲವನ್ನು ನೀಡಬಹುದಿತ್ತಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಕಾಶ್ ಮೊದಲಿಗೆ ನಾವು ಬೆಂಬಲ ಕೇಳಿಲ್ಲ ಹಾಗೂ ನನಗೆ ಇಂಡಸ್ಟ್ರಿಯವರ ಜತೆ ಅಷ್ಟು ಸಂಪರ್ಕ ಇಲ್ಲ ಎಂದು ತಿಳಿಸಿದರು. ಹಾಗೆಯೇ ಚಿತ್ರ ಬಿಡುಗಡೆಯಾದ ಮೇಲೆ ಖಂಡಿತ ಬೆಂಬಲ ನೀಡುತ್ತಾರೆ ಎನ್ನುವ ನಿರೀಕ್ಷೆ ಇದೆ, ಅಲ್ಲದೇ ಹಾಡುಗಳು ಹಾಗೂ ಟೀಸರ್ ಬಿಡುಗಡೆಯಾದಾಗ ಇಂಡಸ್ಟ್ರಿಯ ಕೆಲವರು ಸಂದೇಶ ಕಳುಹಿಸಿ ಹೊಗಳಿದ್ದಾರೆ ಎಂದೂ ಸಹ ಹೇಳಿದರು.
ಯುವಕನಿಂದ ಲೈಂಗಿಕ ಕಿರುಕುಳ: ನಟಿ ಆಶಿಕಾ ರಂಗನಾಥ್ ಮಾವನ ಮಗಳು ಆತ್ಮಹತ್ಯೆ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


