ಅಹ್ಮದಾಬಾದ್: ನರೇಂದ್ರ ಮೋದಿ ಕ್ರೀಡಾಂಗಣದ ಬಿ ಗ್ರೌಂಡ್‌ನಲ್ಲಿ ನಡೆದ ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಲೀಗ್ ಹಂತದ ಪಂದ್ಯದಲ್ಲಿ ಕರ್ನಾಟಕ 145 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ದೇವದತ್ ಪಡಿಕ್ಕಲ್ ಅಬ್ಬರದ ಶತಕದ ನೆರವಿನಿಂದ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 245 ರನ್ ಕಲೆಹಾಕಿ ತಮಿಳುನಾಡಿಗೆ 246 ರನ್‌ಗಳ ಕಠಿಣ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ತಮಿಳುನಾಡು 14.2 ಓವರ್‌ಗಳಲ್ಲಿ ಕೇವಲ 100 ರನ್‌ಗಳಿಗೆ ಆಲ್‌ಔಟ್ ಆಗಿದೆ.
ಕರ್ನಾಟಕ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಬಿಆರ್ ಶರತ್ 53 (23) ಹಾಗೂ ನಾಯಕ ಮಯಾಂಕ್ ಅಗರ್ವಾಲ್ 24 (15) ರನ್ ಬಾರಿಸಿದರು. ಕರುಣ್ ನಾಯರ್ 4 ರನ್‌ಗೆ ಔಟ್ ಆದರೆ, ದೇವದತ್ ಪಡಿಕ್ಕಲ್ 46 ಎಸೆತಗಳಲ್ಲಿ 10 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ ಅಜೇಯ 102 ರನ್ ಚಚ್ಚಿದರೆ, ಸ್ಮರಣ್ ರವಿಚಂದ್ರನ್ 29 ಎಸೆತಗಳಲ್ಲಿ ಅಜೇಯ 46 ರನ್ ಬಾರಿಸಿದರು.
ತಮಿಳುನಾಡು ಪರ ಸೋನು ಯಾದವ್ ಎರಡು ವಿಕೆಟ್ ಹಾಗೂ ಟಿ ನಟರಾಜನ್ ಒಂದು ವಿಕೆಟ್ ಪಡೆದರು.
ತಮಿಳುನಾಡು ಇನ್ನಿಂಗ್ಸ್: ಪಂದ್ಯದಲ್ಲಿ ತಮಿಳುನಾಡು ಬೌಲಿಂಗ್ ವಿಭಾಗದ ಹಾಗೆ ಬ್ಯಾಟಿಂಗ್ ವಿಭಾಗ ಸಹ ಮಕಾಡೆ ಮಲಗಿತು. ತಂಡದ ಪರ ಅಮಿತ್ ಸಾತ್ವಿಕ್ 15, ತುಷಾರ್ ರಹೇಜಾ 29, ಸಾಯಿ ಸುದರ್ಶನ್ 8, ಎನ್ ಜಗದೀಶನ್ 21, ಆರ್ ರಾಜ್‌ಕುಮಾರ್ 16, ಶಾರುಖ್ ಖಾನ್ 2, ರವಿಶ್ರೀನಿವಾಸನ್ ಸಾಯಿ ಕಿಶೋರ್ 2, ಸೋನು ಯಾದವ್ 3, ನಾಯಕ ವರುಣ್ ಚಕ್ರವರ್ತಿ ಡಕ್‌ಔಟ್ ಹಾಗೂ ಟಿ ನಟರಾಜನ್ 1 ರನ್ ಕಲೆಹಾಕಿದರು. ಯಾವುದೇ ರನ್ ಗಳಿಸದ ಗುರ್ಜಪ್‌ನೀತ್ ಸಿಂಗ್ ಅಜೇಯರಾಗಿ ಉಳಿದರು.
ಕರ್ನಾಟಕದ ಪರ ಶ್ರೇಯಸ್ ಗೋಪಾಲ್ ಹಾಗೂ ಪ್ರವೀಣ್ ದುಬೆ ತಲಾ ಮೂರು ವಿಕೆಟ್ ಪಡೆದರೆ, ವಿಜಯ್‌ಕುಮಾರ್ ವೈಶಾಖ್ ಹಾಗೂ ಶುಭಾಂಗ್ ಹೆಗ್ಡೆ ತಲಾ ಎರಡು ವಿಕೆಟ್ ಪಡೆದರು.
ಯುವಕನಿಂದ ಲೈಂಗಿಕ ಕಿರುಕುಳ: ನಟಿ ಆಶಿಕಾ ರಂಗನಾಥ್ ಮಾವನ ಮಗಳು ಆತ್ಮಹತ್ಯೆ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


