ರೈಲ್ವೆ ಇಲಾಖೆ ಕಲಬುರಗಿ ಮತ್ತು ಬೆಂಗಳೂರು ನಡುವಿನ ವಂದೇ ಭಾರತ್ ರೈಲು ವೇಳಾಪಟ್ಟಿ ಬದಲಾವಣೆ ಮಾಡಿದೆ. ರೈಲಿಗೆ ಒಂದು ಹೊಸ ನಿಲ್ದಾಣವನ್ನು ನೀಡಲಾಗಿದ್ದು, ಹೊಸ ವೇಳಾಪಟ್ಟಿ ಜನವರಿ 1, 2026 ರಿಂದ ಜಾರಿಗೆ ಬರಲಿದೆ ಎಂದು ಹೇಳಿದೆ.
ಕಲಬುರಗಿ ಮತ್ತು ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿರುವ ಸರ್.ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ನಡುವೆ ಕೇಸರಿ ಬಣ್ಣದ 8 ಬೋಗಿಯ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ನಡೆಸುತ್ತದೆ.
ಈ ರೈಲಿನ ವೇಳಾಪಟ್ಟಿಯನ್ನು ಬದಲಾವಣೆ ಮಾಡಬೇಕು ಎಂಬ ಬೇಡಿಕೆ ಇತ್ತು. ಬೆಂಗಳೂರು ನಗರದಿಂದ ಮಂತ್ರಾಲಯಕ್ಕೆ ಹೋಗುವ ಭಕ್ತರಿಗೆ ಸಹ ಅನುಕೂಲ ಮಾಡಿಕೊಡುವ ವಂದೇ ಭಾರತ್ ರೈಲು ಸೇವೆ ಇದಾಗಿದೆ.
ಪರಿಷ್ಕೃತ ವೇಳಾಪಟ್ಟಿ: ಕಲಬುರಗಿ ಮತ್ತು ಬೆಂಗಳೂರು ನಡುವಿನ ವಂದೇ ಭಾರತ್ ರೈಲು ವೇಳಾಪಟ್ಟಿ ಬದಲಾವಣೆ ಆಗಿದೆ. ಕಲಬುರಗಿ-ಬೆಂಗಳೂರು ನಡುವಿನ ರೈಲು ನಂಬರ್ 22231 ಸದ್ಯ ಬೆಳಗ್ಗೆ 5.15ಕ್ಕೆ ಕಲಬುರಗಿಯಿಂದ ಹೊರಡುತ್ತದೆ. ಆದರೆ ಪರಿಷ್ಕೃತ ವೇಳಾಪಟ್ಟಿಯಂತೆ ರೈಲು ಬೆಳಗ್ಗೆ 6.10ಕ್ಕೆ ಹೊರಡಲಿದೆ, ಬೆಂಗಳೂರು ನಗರಕ್ಕೆ 14.10ಕ್ಕೆ ತಲುಪಲಿದೆ.
ಕಲಬುರಗಿ ಮತ್ತು ಬೆಂಗಳೂರು ನಡುವಿನ ವಂದೇ ಭಾರತ್ ರೈಲು ಸೇವೆಗೆ ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಯಲಂ (ಎಸ್‌ಎಸ್‌ಪಿಎನ್) ಹೊಸ ನಿಲುಗಡೆ ನೀಡಲಾಗಿದೆ. ಎರಡು ನಿಮಿಷಗಳ ಕಾಲ ರೈಲು ಇಲ್ಲಿ ನಿಲುಗಡೆಗೊಳ್ಳಲಿದೆ.
ಕಲಬುರಗಿ-ಬೆಂಗಳೂರು ನಡುವಿನ ರೈಲು ನಂಬರ್ 22231 ಕಲಬುರಗಿಯಿಂದ ಬೆಳಗ್ಗೆ 6.10ಕ್ಕೆ ಹೊರಟು 6.40ಕ್ಕೆ ವಾಡಿಗೆ ತಲುಪಲಿದೆ. 6.48/ 6.50 ಯಾದಗಿರಿ, 7.38/ 7.40 ರಾಯಚೂರು, 7.58/ 8 ಗಂಟೆ ಮಂತ್ರಾಲಯ ರೋಡ್, 9/ 9.05 ಗುಂತಕಲ್, 10.03/ 10.05 ಅನಂತಪುರ, 11/ 11.02 ಶ್ರೀ ಸತ್ಯಸಾಯಿ ಪ್ರಶಾಂತಿ ನಿಯಲಂ, ಧರ್ಮಾವರಂ 11.10, 12.28/ 12.30 ಯಲಹಂಕ, 14.10ಕ್ಕೆ ಸರ್.ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ತಲುಪಲಿದೆ.
ಬೈಯಪ್ಪನಹಳ್ಳಿಯಲ್ಲಿರುವ ಸರ್.ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್‌ನಿಂದ ಕಲಬುರಗಿಗೆ ರೈಲು ನಂಬರ್ 22232 ಸಂಚಾರವನ್ನು ನಡೆಸಲಿದೆ. ಈ ರೈಲು 14.40ಕ್ಕೆ ಹೊರಡಲಿದೆ.
15.05/ 15.07 ಯಲಹಂಕ, 16.23/16.25 ಶ್ರೀ ಸತ್ಯಸಾಯಿ ಪ್ರಶಾಂತಿ ನಿಯಲಂ, 17.40 ಧರ್ಮಾವರಂ, 17.33/ 17.35 ಅನಂತಪುರ, 18.37/ 18.42 ಗುಂತಕಲ್, 19.48/ 19.50 ಮಂತ್ರಾಲಯ ರೋಡ್, 20.18/ 20.20 ರಾಯಚೂರು, 21.03/ 21.05 ಯಾದಗಿರಿ, ವಾಡಿ 22.15 ಮತ್ತು 22.45ಕ್ಕೆ ಕಲಬುರಗಿ ತಲುಪಲಿದೆ.
ಕಲಬುರಗಿ ಭಾಗದ ಜನರ ಬಹು ದಿನಗಳ ಬೇಡಿಕೆಯಾಗಿತ್ತು ಕಲಬುರಗಿ–ಬೆಂಗಳೂರು ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು. ಮಾರ್ಚ್ 12, 2024ರಂದು ಈ ರೈಲು ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು.
ರೈಲಿಗೆ ವಾಡಿ, ಯಾದಗಿರಿ, ರಾಯಚೂರು, ಮಂತ್ರಾಲಯ ರೋಡ್, ಗುಂತಕಲ್, ಅನಂತಪುರ, ಧರ್ಮಾವರಂ, ಯಲಹಂಕ ಮತ್ತು ಬೆಂಗಳೂರು ಬೈಯಪ್ಪನಹಳ್ಳಿ ನಿಲುಗಡೆ ಇತ್ತು. ಈಗ ಹೊಸ ನಿಲುಗಡೆಯೊಂದನ್ನು ಸೇರಿಸಲಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


