Thursday, September 3, 2026
spot_img
More
    spot_img
    HomeTop Story"ಮೊಳಕೆಯೊಡೆದ ಹೆಸರುಕಾಳಿನ ಪೌಷ್ಟಿಕ ಹಾಗೂ ರುಚಿಕರ ಸಲಾಡ್"

    “ಮೊಳಕೆಯೊಡೆದ ಹೆಸರುಕಾಳಿನ ಪೌಷ್ಟಿಕ ಹಾಗೂ ರುಚಿಕರ ಸಲಾಡ್”

    ಹೆಸರುಕಾಳು (Green gram) ಅತ್ಯಂತ ಜನಪ್ರಿಯ ಸಸ್ಯಾಹಾರಿ ಸೂಪರ್‌ಫುಡ್‌ಗಳಲ್ಲಿ ಒಂದು. ಅಷ್ಟೇ ಅಲ್ಲ, ಹೆಸರುಕಾಳು ಉತ್ತಮ ಗುಣಮಟ್ಟದ ಪ್ರೋಟೀನ್ ಮತ್ತು ಇತರ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿದೆ.ನೋಡಲು ಇದು ಚಿಕ್ಕ ಕಾಳಾಗಿದ್ದರೂ ಇದರಲ್ಲಿ ಸಾಕಷ್ಟು ಅದ್ಭುತ ಆರೋಗ್ಯ ಪ್ರಯೋಜನಗಳಿವೆ. ಇದನ್ನು ಹೆಚ್ಚಾಗಿ ಆಹಾರದಲ್ಲಿ ಬಳಸುವುದರಿಂದ ಆರೋಗ್ಯದಲ್ಲಿ ಸಾಕಷ್ಟು ಉತ್ತಮ ಬದಲಾವಣೆಗಳನ್ನು ನೀವು ಕಾಣಬಹುದು. ಸಾಮಾನ್ಯವಾಗಿ ಅಡುಗೆ ಮಾಡಲು ವಿವಿಧ ರೀತಿಯ ಬೇಳೆಕಾಳುಗಳು ಮತ್ತು ಧಾನ್ಯಗಳನ್ನು ಬಳಸಲಾಗುತ್ತದೆ. ನಾವು ಸೇವಿಸುವ ಆಹಾರದಲ್ಲಿ ಬೇಳಕಾಳುಗಳು ಪ್ರಮುಖ ಪಾತ್ರವಹಿಸುತ್ತದೆ. ಅದರಲ್ಲೂ ಹೆಸರು ಕಾಳು ಸೇವನೆ ಆರೋಗ್ಯಕ್ಕೆ ಒಳ್ಳೆಯದು.ಹೆಸರುಕಾಳಿನಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ಅವು ವಿಟಮಿನ್ಸ್ (Vitamins) ಮತ್ತು ಮಿನರಲ್ಸ್‌ನಿಂದ ಸಮೃದ್ಧವಾಗಿವೆ. ಈ ಹೆಸರುಕಾಳು ಸೆಲೆನಿಯಮ್ ಮತ್ತು ಅಗತ್ಯ ಅಮೈನೊ ಆಮ್ಲಗಳಿಂದ ಸಮೃದ್ಧವಾಗಿದೆ,ನಾವಿಂದು ಮೊಳಕೆ ಬರಿಸಿದ ಹೆಸರು ಕಾಳಿನಿಂದ ಅತ್ಯಂತ ಆರೋಗ್ಯಕರ, ಪೌಷ್ಟಿಕ ಮಾತ್ರವಲ್ಲದೇ ರುಚಿಕರ ಸಲಾಡ್ ಅನ್ನು ಮಾಡುವುದು ಹೇಗೆ ಎಂಬುವದನ್ನು ತಿಳಿಯೋಣ.

    Advertisement

    ಬೇಕಾಗುವ ಪಾರ್ಥಗಳು:

    ಮೊಳಕೆಯೊಡೆದ ಹೆಸರುಕಾಳು – 1 ಕಪ್

    ತುರಿದ ಕ್ಯಾರೆಟ್ – ಅರ್ಧ ಕಪ್

    ದಾಳಿಂಬೆ – ಅರ್ಧ ಕಪ್

    ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 2

    ತೆಂಗಿನ ತುರಿ – 2 ಟೀಸ್ಪೂನ್

    ಹೆಚ್ಚಿದ ಕೊತ್ತಂಬರಿ ಸೊಪ್ಪು – ಕಾಲು ಕಪ್

    ನಿಂಬೆ ರಸ – 1 ಟೀಸ್ಪೂನ್

    ಉಪ್ಪು – ರುಚಿಗೆ ತಕ್ಕಷ್ಟು

    ಸಾಸಿವೆ – 1 ಟೀಸ್ಪೂನ್

    ಹಿಂಗ್ – ಚಿಟಿಕೆ

    ಕರಿಬೇವಿನ ಎಲೆ – ಕೆಲವು

    ಮೊಳಕೆಯೊಡೆದ ಹೆಸರುಕಾಳು ಮಾಡುವ ವಿಧಾನ:

    ಸೌತೆಕಾಯಿ, ಈರುಳ್ಳಿ, ಟೊಮೆಟೊ, ಹಸಿಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪುನ್ನು ಸಣ್ಣಗೆ ಹೆಚ್ಚಿಕೊಳ್ಳಿ.

    ಪಾತ್ರೆಯಲ್ಲಿ ಮೊಳಕೆಯೊಡೆದ ಹೆಸರು ಕಾಳು, ತುರಿದ ಕ್ಯಾರೆಟ್, ದಾಳಿಂಬೆ, ಹಸಿರು ಮೆಣಸಿನಕಾಯಿ, ತೆಂಗಿನ ತುರಿ, ಕೊತ್ತಂಬರಿ ಸೊಪ್ಪು ಹಾಗೂ ನಿಂಬೆ ರಸವನ್ನು ಹಾಕಿ ಮಿಶ್ರಣ ಮಾಡಿ.

    ಒಂದು ಚಿಕ್ಕ ಬಾಣಲೆ ತೆಗೆದುಕೊಂಡು, ಅದರಲ್ಲಿ 1 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ, ಬಳಿಕ ಅದಕ್ಕೆ ಸಾಸಿವೆ ಹಾಕಿ ಸಿಡಿಸಿ.

    ನಂತರ ಒಂದು ಬಟ್ಟಲಿಗೆ ನೆನಸಿದ ಹೆಸರುಕಾಳು ಹೆಚ್ಚಿದ ತರಕಾರಿ ಉಪ್ಪು ಚಾಟ್ ಮಸಾಲ ಅಮ್ಚೂರ್ ಪುಡಿ ಮತ್ತು ತೆಂಗಿನ ತುರಿ ಸೇರಿಸಿ

    ಬಳಿಕ ಚಿಟಿಕೆ ಹಿಂಗ್ ಹಾಗೂ ಕರಿಬೇವಿನ ಎಲೆ ಹಾಕಿ, ಕಲಸಿದರೆ ಆರೋಗ್ಯಕರವಾದ ಸಲಾಡ್ ರೆಡಿ.ಹೆಸರುಕಾಳು ಮೊಳಕೆ ಬರಿಸಿ ಕೂಡ ಮಾಡಬಹುದು.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading