ಗದಗ: ರಾಜ್ಯ ಬಿಜೆಪಿ ಮನೆಯೊಂದು ಹತ್ತು ಬಾಗಿಲಂತಾಗಿದೆ. ಬಿವೈ ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನಕ್ಕೇರಿದಾಗಿನಿಂದ ಸಾಕಷ್ಟು ದೊಡ್ಡ ಮಟ್ಟದಲ್ಲಿ ಆಂತರಿಕ ಕಿತ್ತಾಟಗಳಿಗೆ ರಾಜ್ಯ ಬಿಜೆಪಿ ಪದೇ ಪದೇ ವೇದಿಕೆಯಾಗುತ್ತಿದ್ದು, ಇದೀಗ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಸಲುವಾಗಿ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆ ನಡೆಸಲು ವಿಜಯೇಂದ್ರ ವಿರೋಧಿಗಳು ಪಣತೊಟ್ಟಿದ್ದಾರೆ.
ಅದರಂತೆ ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ಚುನಾವಣೆಗೆ ರಾಜ್ಯ ಬಿಜೆಪಿ ಸಜ್ಜಾಗುತ್ತಿದ್ದು, ಇದರ ನಡುವೆಯೇ ವಿವಿಧ ನಾಯಕರ ನಡುವಿನ ಕಿತ್ತಾಟ ಮುಂದುವರಿದಿದೆ. ಅದರಲ್ಲಿಯೂ ಶ್ರೀರಾಮುಲು ಹಾಗೂ ಬಿವೈ ವಿಜಯೇಂದ್ರ ಅವರ ನಡುವಿನ ಕಿತ್ತಾಟ ದೊಡ್ಡ ಮಟ್ಟದಲ್ಲಿದ್ದು, ಹೈಕಮಾಂಡ್‌ಗೂ ಕೇರ್ ಮಾಡದೇ ಶ್ರೀರಾಮುಲು ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇನ್ನು ರೆಬೆಲ್ ಆಗಿರುವ ಶ್ರೀರಾಮುಲು ಅವರಿಗೆ ಕಾಂಗ್ರೆಸ್‌ನಿಂದ ಆಫರ್ ಎಂದೆಲ್ಲಾ ಟೀಕೆಗಳನ್ನು ಮಾಡಲಾಗಿದ್ದು, ಇದರ ಕುರಿತು ಪ್ರತಿಕ್ರಿಯಿಸಿದ ಶ್ರೀರಾಮುಲು ʼಹೌದ್ರೀ ಕಾಂಗ್ರೆಸ್‌ನವ್ರು ಕರೆದಿದ್ದಾರೆ. ಹೋಗ್ತೀನಿ ಅಂದ್ರೆ ತಡೆಯೋಕಾಗುತ್ತಾ? ಶ್ರೀರಾಮುಲು ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಹೋಗಲ್ಲ ಎಂಬುದು ರಾಜ್ಯದ ಜನತೆಗೆ ಗೊತ್ತಿದೆ. ಆದರೂ ಒಳ್ಳೆತನದಿಂದಾಗಿ ಕರೆದಿರಬಹುದೇನೋ. ಹೋಗುವುದು ನನಗೆ ಬಿಟ್ಟಿದ್ದು. ಇವತ್ತು ಹೋಗ್ತೀನಿ ಅಂದರೆ ಜೈಲಿಗೆ ಹಾಕಿ ತಡೆಯೋಕೆ ಆಗುತ್ತಾ? ಈಗಿನ ಕಾಲದಲ್ಲಿ ಯಾರೂ ಯಾರ ಮಾತನ್ನೂ ಕೇಳಲ್ಲʼ ಎಂದು ಕಿಡಿಕಾರಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


