Sunday, September 20, 2026
spot_img
More
    spot_img
    HomeLatest newsಇನ್‌ಸ್ಟಾಗ್ರಾಂ ರೀಲ್ಸ್‌ನ್ನು ಉಳಿಸಿಕೊಳ್ಳುವ ಸುಲಭ ವಿಧಾನಗಳು

    ಇನ್‌ಸ್ಟಾಗ್ರಾಂ ರೀಲ್ಸ್‌ನ್ನು ಉಳಿಸಿಕೊಳ್ಳುವ ಸುಲಭ ವಿಧಾನಗಳು

    ಇತ್ತೀಚಿನ ದಿನಗಳಲ್ಲಿ ಇನ್‌ಸ್ಟಾಗ್ರಾಂ ಬಳಸದವರ ಸಂಖ್ಯೆ ನೀರಸವಾಗಿದೆ ಎಂದರೆ ತಪ್ಪಾಗದು. ಜಾಗತಿಕ ಮಟ್ಟದಲ್ಲಿ ಇದನ್ನು ಬಳಕೆಯಲ್ಲಿರಿಸಿಕೊಳ್ಳುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಪ್ಲಾಟ್‌ಫಾರ್ಮ್‌ ಅನ್ನು ಕೇವಲ ಫೋಟೋ ಹಾಗೂ ವಿಡಿಯೋ ಶೇರ್ ಮಾಡಲು ಮಾತ್ರವಲ್ಲದೆ, ಈಗ ಹಲವರು ಇದರ ಮೂಲಕ ಹಣ ಸಂಪಾದನೆ ಮಾಡುತ್ತಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಸೆಲೆಬ್ರಿಟಿಗಳಾಗುತ್ತಿದ್ದಾರೆ.

    Advertisement

    ಫೇಸ್‌ಬುಕ್‌ ಮಾಲಿಕತ್ವದ ಇನ್‌ಸ್ಟಾಗ್ರಾಂ ತನ್ನ ಬಳಕೆದಾರರಿಗೆ ಆಕರ್ಷಕ ಹೊಸ ಫೀಚರ್‌ಗಳನ್ನು ಆಗಾಗ್ಗೆ ಪರಿಚಯಿಸುತ್ತಲೇ ಬಂದಿದೆ. ಈ ಪೈಕಿ, ಟಿಕ್‌ಟಾಕ್‌ಗೆ ತದ್ರೂಪವಾದ ‘ರೀಲ್ಸ್‌’ (Reels) ಎಂಬ ಫೀಚರ್‌ನ್ನು ಪರಿಚಯಿಸಿ ಭರ್ಜರಿ ಯಶಸ್ಸು ಗಳಿಸಿದೆ. ಚಂದದ ಫೋಟೋಗಳು, ಸೃಜನಾತ್ಮಕ ವಿಡಿಯೋಗಳ ಮೂಲಕ ಬಳಕೆದಾರರು ಸಾವಿರಾರು ಫಾಲೋವರ್ಸ್‌ಗಳನ್ನು ಹೊಂದುತ್ತಿದ್ದಾರೆ. ಇನ್ನು ಕೆಲವರು ಫೋಟೋ ಶೂಟ್‌ ನಡೆಸಿಸಿ ಕೇವಲ ಇನ್‌ಸ್ಟಾಗ್ರಾಂ ಅಪ್‌ಲೋಡ್‌ಗಾಗಿ ಫೋಟೋ ಅಥವಾ ವಿಡಿಯೋ ಸಿದ್ಧಪಡಿಸುತ್ತಿದ್ದಾರೆ.ಇದರಲ್ಲಿ ಒಂದು ಮೈನಸ್ ಅಂದರೆ ಟಿಕ್‌ಟಾಕ್‌ನಂತೆ ನೀವು ಇನ್‌ಸ್ಟಾಗ್ರಾಂ ರೀಲ್ಸ್‌ನ್ನು ನೇರವಾಗಿ ಡೌನ್‌ಲೋಡ್ ಮಾಡಿಕೊಳ್ಳಲಾಗದು. ಆದರೆ ಅದಕ್ಕೆ ಪರಿಹಾರವಿದೆ! ಈ ಎಲ್ಲಾ ಹಿನ್ನೆಲೆಯ ನಡುವೆ, ಇಂದಿನ ಲೇಖನದಲ್ಲಿ ನಾವು ನಿಮಗೆ ಇನ್‌ಸ್ಟಾಗ್ರಾಂ ರೀಲ್ಸ್‌ ವಿಡಿಯೋಗಳನ್ನು ಹೇಗೆ ಡೌನ್‌ಲೋಡ್ ಮಾಡಬಹುದು ಎಂಬುದನ್ನು ಸುಲಭವಾಗಿ ವಿವರಿಸುತ್ತೇವೆ.

    ಇನ್‌ಸ್ಟಾಗ್ರಾಂ ವಿಡಿಯೋ ಸ್ಮಾರ್ಟ್‌ಫೋನ್‌ಗೆ ಡೌನ್‌ಲೋಡ್ ಹೇಗೆ?

    ಇಂದು ಜಗತ್ತಿನಾದ್ಯಂತ ಲಕ್ಷಾಂತರ ಜನರು ಪ್ರತಿದಿನವೂ ಇನ್‌ಸ್ಟಾಗ್ರಾಂನಲ್ಲಿ ನೂರಾರು ಫೋಟೋಗಳು ಹಾಗೂ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿದ್ದಾರೆ. ಕೆಲವೊಮ್ಮೆ ನಾವು ನೋಡಿದ ಕೆಲವೊಂದು ವಿಡಿಯೋಗಳು ಇಷ್ಟವಾಗಿ, ಅವುಗಳನ್ನು ಮತ್ತೆ ಮತ್ತೆ ನೋಡುವ ಇಚ್ಛೆ ಉಂಟಾಗುತ್ತದೆ. ಆಗ, ಅವುಗಳನ್ನು ನಮ್ಮ ಸ್ಮಾರ್ಟ್‌ಫೋನ್‌ಗೆ ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂಬ ಆಸೆ ಹುಟ್ಟುತ್ತದೆ.

    ಆದರೆ ಇನ್‌ಸ್ಟಾಗ್ರಾಂ ಸ್ವತಃ ಅಪ್ಲಿಕೇಶನ್‌ನಲ್ಲಿಯೇ ಸ್ಟೋರಿ ಅಥವಾ ನೇರವಾಗಿ ನಿಮ್ಮದೇ ಖಾತೆಯಿಂದ ಅಪ್‌ಲೋಡ್ ಮಾಡಿದ ವಿಡಿಯೋಗಳನ್ನು ಮಾತ್ರ ಡೌನ್‌ಲೋಡ್ ಮಾಡಲು ಅವಕಾಶ ನೀಡುತ್ತದೆ. ಇತರರ ವಿಡಿಯೋಗಳು ಅಥವಾ ರೀಲ್ಸ್‌ಗಳನ್ನು ನೇರವಾಗಿ ಉಳಿಸಿಕೊಳ್ಳಲು ಈ ಪ್ಲಾಟ್‌ಫಾರ್ಮ್ ಅವಕಾಶ ನೀಡುವುದಿಲ್ಲ.

    ಆದರೂ, ನೀವು ಇಷ್ಟಪಟ್ಟ ಇನ್‌ಸ್ಟಾಗ್ರಾಂ ವಿಡಿಯೋ ಅಥವಾ ರೀಲ್ಸ್‌ ಅನ್ನು ಡೌನ್‌ಲೋಡ್ ಮಾಡಲು ಕೆಲವು ಥರ್ಡ್ ಪಾರ್ಟ್ (third-party) ಟೂಲ್ಸ್ ಅಥವಾ ವೆಬ್‌ಸೈಟ್‌ಗಳ ಸಹಾಯದಿಂದ ಇದು ಸಾಧ್ಯವಾಗಬಹುದು. ಮುಂದೆ ನಾವು ಇದನ್ನು ಹೇಗೆ ಮಾಡುವುದು ಎಂಬುದನ್ನು ಸವಿವರವಾಗಿ ತಿಳಿಸುತ್ತೇವೆ.

    ಇನ್‌ಸ್ಟಾಗ್ರಾಂ ರೀಲ್ಸ್‌ ಡೌನ್‌ಲೋಡ್‌ ಮಾಡಲು ಸ್ಟೋರಿ ವಿಧಾನ ಹಂತ ಹಂತವಾಗಿ ಇನ್‌ಸ್ಟಾಗ್ರಾಂ ರೀಲ್ಸ್‌ ಅನ್ನು ನಿಮ್ಮ ಆಂಡ್ರಾಯ್ಡ್ ಅಥವಾ ಐಓಎಸ್ ಸ್ಮಾರ್ಟ್‌ಫೋನ್‌ಗೆ ಡೌನ್‌ಲೋಡ್‌ ಮಾಡಲು ಸ್ಟೋರಿ ಫೀಚರ್ ಬಳಸಿ ಈ ಕೆಳಗಿನ ಹಂತಗಳನ್ನು ಅನುಸರಿಸಿ:

    ಮೊದಲು, ನೀವು ಡೌನ್‌ಲೋಡ್‌ ಮಾಡಲು ಬಯಸುವ ರೀಲ್ಸ್‌ ವೀಡಿಯೋವನ್ನು ತೆರೆಯಿರಿ.

    ರೀಲ್ಸ್‌ ವೀಡಿಯೋದಲ್ಲಿ ಎಡಭಾಗದಲ್ಲಿರುವ ‘Share’ (ಹಂಚಿಕೆ) ಐಕಾನ್ ಮೇಲೆ ಟ್ಯಾಪ್ ಮಾಡಿ.

    ಕೆಳಗೆ ಕಾಣಿಸುವ ಆಯ್ಕೆಯಿಂದ ‘Add to story’ ಆಯ್ಕೆಮಾಡಿ.

    ರೀಲ್ಸ್‌ ವೀಡಿಯೋವನ್ನು ಸ್ಟೋರಿ ವಿನ್ಯಾಸದಲ್ಲಿ ಹೊಂದಿಕೊಳ್ಳುವಂತೆ ಸರಿಹೊಂದಿಸಿ.

    ಮೇಲಿನ ಬಲ ಮೂಲೆಯಲ್ಲಿ ಇರುವ ‘ಮೂರು ಚುಕ್ಕೆ’ (More options) ಬಟನ್ ಮೇಲೆ ಟ್ಯಾಪ್ ಮಾಡಿ.

    ಅಲ್ಲಿ ‘Save’ ಎಂಬ ಆಯ್ಕೆ ಕಾಣಿಸುತ್ತದೆ. ಅದನ್ನು ಟ್ಯಾಪ್ ಮಾಡಿದರೆ, ಆ ರೀಲ್ಸ್‌ ವೀಡಿಯೋ ನಿಮ್ಮ ಫೋನ್‌ನ ಗ್ಯಾಲರಿಯಲ್ಲಿ ಸೇವ್ ಆಗುತ್ತದೆ.

    ನೀವು ಲ್ಯಾಪ್‌ಟಾಪ್ ಅಥವಾ ಸ್ಮಾರ್ಟ್‌ಫೋನ್‌ನಲ್ಲಿ Instagram video downloader ಎಂದು ಗೂಗಲ್‌ನಲ್ಲಿ ಟೈಪ್ ಮಾಡಿದರೆ, ಹಲವಾರು ವೆಬ್‌ಸೈಟ್‌ಗಳು ತೆರೆದುಕೊಳ್ಳುತ್ತವೆ. ಈ ವೆಬ್‌ಸೈಟ್‌ಗಳ ಮೂಲಕ ನೀವು ಯಾವುದೇ ಇನ್‌ಸ್ಟಾಗ್ರಾಂ ರೀಲ್ಸ್ ಅಥವಾ ವಿಡಿಯೋವನ್ನು ಸುಲಭವಾಗಿ ಡೌನ್‌ಲೋಡ್ ಮಾಡಬಹುದು.

    ಮನೆ ಅಥವಾ ಭೂಮಿ ಖರೀದಿಸಲು ಈ ಡಾಕ್ಯುಮೆಂಟ್‌ಗಳು ತಪ್ಪದೇ ಬೇಕು

    ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ




    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading