ರುದ್ರಪ್ರಯಾಗ್: ಹಠಾತ್ ಭೂ ಕುಸಿತ ಕಾರಣದಿಂದ ತಾತ್ಕಲಿಕವಾಗಿ ಕೇದಾರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.
ಹಿಮಾಲಯ ದೇವಾಲಯಕ್ಕೆ ಹೋಗುವ ಮಾರ್ಗದಲ್ಲಿ ಸೋನ್‍ಪ್ರಯಾಗ್ ಬಳಿಯ ಮುಂಕಟಿಯಾದಲ್ಲಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ ನಂತರ ಕೇದಾರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಮುಂಕಟಿಯಾ ಜಾರು ವಲಯದಲ್ಲಿ ಭೂಕುಸಿತದ ಅವಶೇಷಗಳು ಮತ್ತು ಕಲ್ಲುಗಳಿಂದ ರಸ್ತೆ ಸಂಪೂರ್ಣವಾಗಿ ಮುಚ್ಚಿಹೋಗಿದ್ದು, ಆಡಳಿತವು ಯಾತ್ರೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ಒತ್ತಾಯಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೌರಿಕುಂಡದಿಂದ ಹಿಂತಿರುಗುತ್ತಿದ್ದ ಕೆಲವು ಯಾತ್ರಿಕರು ಜಾರು ವಲಯದಲ್ಲಿ ಸಿಲುಕಿಕೊಂಡಿದ್ದರು. ಆದರೆ ಅವರನ್ನು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ ಸಿಬ್ಬಂದಿ ರಕ್ಷಿಸಿ ಸೋನ್‍ಪ್ರಯಾಗಕ್ಕೆ ಸುರಕ್ಷಿತವಾಗಿ ಕರೆತಂದರು ಎಂದು ಹೇಳಿದರು.
ಮುನ್ನೆಚ್ಚರಿಕೆ ಕ್ರಮವಾಗಿ ಕೇದಾರನಾಥ ಯಾತ್ರೆಯನ್ನು ಸದ್ಯಕ್ಕೆ ನಿಲ್ಲಿಸಲಾಗಿದ್ದು, ರಸ್ತೆ ದುರಸ್ತಿಯಾದ ಬಳಿಕ ಯಾತ್ರೆಯನ್ನು ಮತ್ತೆ ಆರಂಭಿಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.
ಇಂದಿನಿಂದ ಆರಂಭವಾದ ವಾರ್ಷಿಕ ಅಮರನಾಥ ಯಾತ್ರೆ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


