Monday, November 9, 2026
spot_img
More
    spot_img
    HomeLatest newsಹಾಗಲಕಾಯಿ ಫ್ರೈ ಪಕೋಡ: ಕಹಿಯಿಲ್ಲದ ರುಚಿ, ಮಕ್ಕಳಿಗೂ ಇಷ್ಟವಾಗುವ ಆರೋಗ್ಯಕರ ಸ್ನ್ಯಾಕ್!

    ಹಾಗಲಕಾಯಿ ಫ್ರೈ ಪಕೋಡ: ಕಹಿಯಿಲ್ಲದ ರುಚಿ, ಮಕ್ಕಳಿಗೂ ಇಷ್ಟವಾಗುವ ಆರೋಗ್ಯಕರ ಸ್ನ್ಯಾಕ್!

    ಹಾಗಲಕಾಯಿ ಎಂದರೆ ಕೆಲವರಿಗೆ ತುಂಬಾ ಇಷ್ಟವಾಗುವ ತರಕಾರಿ, ಆದರೆ ಕೆಲವರಿಗೆ ಅದರ ಸ್ವಲ್ಪ ಕಹಿಯಾದ ರುಚಿಯಿಂದ ಅಷ್ಟು ಮೆಚ್ಚುಗೆಯಾಗದು. ಹಾಗಲಕಾಯಿ ಪಲ್ಯ ಅಥವಾ ಫ್ರೈ ಮಾಡಿದರೆ, ಅದರ ಕಹಿತನದಿಂದಾಗಿ ಮಕ್ಕಳು ಹೆಚ್ಚಾಗಿ ತಿನ್ನಲು ಇಚ್ಛಿಸದುದು ಸಹಜ. ಆದರೆ ಇತ್ತೀಚೆಗೆ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವವರು ಹಾಗಲಕಾಯಿ ಸೇರ್ಪಡೆಯನ್ನೂ ಪ್ರಮುಖವಾಗಿ ನೋಡುತ್ತಿದ್ದಾರೆ.ಕೆಲವರು ಹಸಿ ಹಾಗಲಕಾಯಿಯನ್ನೇ ರುಚಿಯಾಗಿ ತಿನ್ನುತ್ತಾರೆ. ಇದರ ಹಿಂದೆ ಕಾರಣವಿದೆ: ಹಾಗಲಕಾಯಿ ಕೇವಲ ತಿನ್ನಲು ಮಾತ್ರವಲ್ಲ, ಆರೋಗ್ಯ ಲಾಭಗಳ ಶಕ್ತಿ ಕೇಂದ್ರವೂ ಆಗಿದೆ. ಮಧುಮೇಹ ನಿಯಂತ್ರಣದಿಂದ ಹಿಡಿದು ಜೀರ್ಣಕ್ರಿಯೆ ಸುಧಾರಣೆಯವರೆಗೆ, ಹಲವಾರು ಆರೋಗ್ಯ ಫೈದಾಗಳನ್ನು ಇದು ನೀಡುತ್ತದೆ.ಹಾಗಲಕಾಯಿ ಎಂಬುದರ ಹೆಸರು ಕೇಳಿದರೆ ಅನೇಕರು ತಕ್ಷಣವೇ ಮುಖ ತಿರುಗಿಸುತ್ತಾರೆ. ಮಕ್ಕಳಂತೂ ಇದನ್ನು ನೋಡಿದರೆ ಸಾಕು ಬೇಡ ಅನ್ನೋದೇ ಮೊದಲ ಪ್ರತಿಕ್ರಿಯೆ, ಈ ಮಳೆಗಾಲದಲ್ಲಿ ಒಂದು ಕಪ್ ಚಹಾ ಜೊತೆ ಬಿಸಿ ಬಿಸಿ ಹಾಗಲಕಾಯಿ ಪಕೋಡ ಟ್ರೈ ಮಾಡಿ. ಇದು ಆರೋಗ್ಯದ ಜತೆಗೆ ರುಚಿಯಲ್ಲೂ ಆರೋಗ್ಯಕರ ತಿಂಡಿ!

    ಹಾಗಲಕಾಯಿ ಫ್ರೈ ಮಾಡಲು ಬೇಕಾಗುವ ಪದಾರ್ಥಗಳು

    ಹಾಗಲಕಾಯಿ – 400 ಗ್ರಾಂ

    ಉಪ್ಪು

    ಅರಿಶಿನ ಪುಡಿ – 1/4 ಟೀಸ್ಪೂನ್

    ಮೆಣಸಿನ ಪುಡಿ ಚಿಲ್ಲಿ ಪೌಡರ್

    ಜೀರಿಗೆ ಪುಡಿ

    ಸೋಂಪು ಪುಡಿ

    ಗರಂ ಮಸಾಲಾ

    ಹುಣಸೆ ಹುಳಿ

    ರವೆ – 2 ಟೇಬಲ್ ಚಮಚ

    ಎಣ್ಣೆ – ಕರಿಯಲು ಬೇಕಾದ ಪ್ರಮಾಣ

    ಹಾಗಲಕಾಯಿ ಫ್ರೈ ಪಕೋಡ ಮಾಡುವ ವಿಧಾನ

    ಮೊದಲಿಗೆ ಹಾಗಲಕಾಯಿಯನ್ನು ಚೆನ್ನಾಗಿ ತೊಳೆದು, ಉದ್ದವಾಗಿ ಅಥವಾ ವೃತ್ತಾಕಾರವಾಗಿ (ಚಿಪ್ಸ್ ಶೈಲಿಯಲ್ಲಿ) ಕತ್ತರಿಸಿ.

    ಬೀಜಗಳನ್ನು ತೆಗೆದು ಹಾಕಿ ಇದರಿಂದ ಹೆಚ್ಚಾದ ಕಹಿತನ ತಪ್ಪಿಸಬಹುದು.

    ಈ ತುಂಡುಗಳನ್ನು ಒಂದು ದೊಡ್ಡ ಬೌಲ್ ಅಥವಾ ಪ್ಲೇಟ್‌ನಲ್ಲಿ ಇಡಿ.

    ಈಗ ಈ ಹಾಗಲಕಾಯಿ ತುಂಡುಗಳಿಗೆ ಸ್ವಲ್ಪ ಉಪ್ಪು, ಖಾರ, ಅರಿಶಿನ ಪುಡಿ ಸೇರಿಸಿ ಚೆನ್ನಾಗಿ ಕಲಸಿ.

    ಸ್ವಲ್ಪ ನೀರು ಸೇರಿಸಿ ಮಸಾಲೆ ಎಲ್ಲಾ ತುಂಡುಗಳಿಗೆ ಚೆನ್ನಾಗಿ ಸಿಗುವಂತೆ ಮಿಶ್ರಣ ಮಾಡಿ.

    ಇದನ್ನು ಸುಮಾರು ಅರ್ಧ ಗಂಟೆ ನೆನೆಸಿಡಿ. ಈ ಸಮಯದಲ್ಲಿ ಹಾಗಲಕಾಯಿ ಸ್ವಲ್ಪ ನೀರು ಬಿಡುತ್ತದೆ.

    ನಂತರ ಈ ನೀರನ್ನು ತೆಗೆದು, ಹಾಗಲಕಾಯಿಯನ್ನು ಸ್ವಲ್ಪ ಹಿಂಡಿಕೊಂಡು ಬಿಡಿ.

    ಈಗ ಈ ನೆನೆಸಿಟ್ಟ ಹಾಗಲಕಾಯಿಗೆ: ಮೆಣಸು, ಧನಿಯಾ, ಜೀರಿಗೆ, ಸೋಂಪು ಪುಡಿ, ಗರಂ ಮಸಾಲಾ, ಏಳಕ್ಕಿ ಪುಡಿ ಹಾಗೂ ರವೆ ಸೇರಿಸಿ.

    ಸ್ವಲ್ಪ ನೀರು ಹಾಕಿ ಮಸಾಲೆ ಎಲ್ಲಾ ತುಂಡುಗಳಿಗೆ ಸರಿ ಕಲಸಿ.ಮತ್ತೊಮ್ಮೆ 10–15 ನಿಮಿಷ ಹಾಗೆಯೇ ಬಿಟ್ಟು ಬಿಡಿ.

    ಒಂದು ಬಾಣಲೆಗೆ ಎಣ್ಣೆ ಹಾಕಿ ಚೆನ್ನಾಗಿ ಕಾದಮೇಲೆ, ಮಸಾಲೆಯಲ್ಲಿ ಮರೆಸಿರುವ ಹಾಗಲಕಾಯಿ ತುಂಡುಗಳನ್ನು ಎಣ್ಣೆಗೆ ಹಾಕಿ.

    ನಂತರ ತುಂಡುಗಳನ್ನು ತಿರುಗಿಸಿ, ಎಲ್ಲ ಬದಿಯೂ ಸುಂದರವಾಗಿ ರೋಸ್ಟ್ ಆಗುವಂತೆ ಒಣಗಿಸಿ.

    ಪರ್ಫೆಕ್ಟ್ ಸೋರೆಕಾಯಿ ಬರ್ಫಿ, ಹದವಾಗಿ ರುಚಿಯಾಗಿ ಬಾಯಲ್ಲಿಟ್ಟರೆ ಕರಗುವಂತ ಬರ್ಫಿ ಮಾಡುವ ವಿಧಾನ ಇಲ್ಲಿದೆ

    ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search