ಬೆಂಗಳೂರು: ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನದ ಕ್ರಿಕೆಟಿಗರು, ಸೋಷಿಯಲ್ ಮೀಡಿಯಾ ಸ್ಟಾರ್ಗಳು, ಸಿನಿಮಾ ಮಂದಿ ಹಾಗೂ ಪ್ರಮುಖವಾಗಿ ಪಾಕ್ ಸುದ್ದಿ ವಾಹಿನಿಗಳನ್ನು ಭಾರತದಲ್ಲಿ ಕೇಂದ್ರ ಸರ್ಕಾರ ರದ್ದು ಮಾಡಿತ್ತು.
ಕೇಂದ್ರದ ಈ ನಡೆಯನ್ನು ಮೋದಿ ಹಾಗೂ ಬಿಜೆಪಿ ಅಭಿಮಾನಿಗಳು ಮಾಸ್ಟರ್ ಸ್ಟ್ರೋಕ್ ಎಂದೇ ಬಣ್ಣಿಸಿದ್ದರು. ಆದರೆ ಇದೀಗ ರದ್ದಾಗಿದ್ದ ಸುದ್ದಿ ವಾಹಿನಿಗಳು, ಯುಟ್ಯೂಬ್ ಚಾನೆಲ್ಗಳು ಹಾಗೂ ಸಾಮಾಜಿಕ ಜಾಲತಾಣದ ಖಾತೆಗಳು ಮರಳಿ ಭಾರತದಲ್ಲಿ ವೀಕ್ಷಿಸಲು ಲಭ್ಯವಾಗಿದ್ದು, ಇದನ್ನು ಕಂಡ ಮೋದಿ ಹಾಗೂ ಬಿಜೆಪಿ ಅಭಿಮಾನಿಗಳು ನಾಚಿಕೆಗೇಡು ಎಂದು ಬೇಸರ ಹೊರಹಾಕಿದ್ದಾರೆ.
ಈ ಕುರಿತು ಎಕ್ಸ್ ವೇದಿಕೆಯಲ್ಲಿ ಹಲವಾರು ಮಂದಿ ಬರೆದುಕೊಂಡಿದ್ದು, ನಿಷೇಧವನ್ನು ಮುಂದುವರಿಸಬೇಕಿತ್ತು. ಹೀಗೆ ನಿಷೇಧ ಹೇರಿ ಮತ್ತೆ ಹಿಂಪಡೆಯುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ಇನ್ನು ಇದೇ ವೇಳೆ ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರಿದಿ ಹೆಸರಿನಲ್ಲಿ ನಕಲಿ ಪೋಸ್ಟ್ ಒಂದು ಹರಿದಾಡುತ್ತಿದ್ದು, ಇದರಲ್ಲಿ ಮೋದಿಯನ್ನು ಹೀಯಾಳಿಸಿರುವ ಹಾಗೆ ಬರೆಯಲಾಗಿದೆ. ಅಫ್ರಿದಿ ಮೋದಿಯನ್ನು ಚೈಲ್ಡ್ ಎಂದಿದ್ದು, ಪಹಲ್ಗಾಮ್ ದಾಳಿ ಮಾಡಿದ್ದು ಭಾರತೀಯರು ಎಂದು ಇದರಲ್ಲಿ ಬರೆಯಲಾಗಿದೆ. ಈ ನಕಲಿ ಪೋಸ್ಟ್ ಅನ್ನು ಹಂಚಿಕೊಂಡಿರುವ ಮೋದಿ ಅಭಿಮಾನಿಗಳು ಮತ್ತೆ ಎಲ್ಲ ಖಾತೆಗಳನ್ನು ಬ್ಯಾನ್ ಮಾಡಿ ಎಂದು ಮನವಿ ಇಟ್ಟಿದ್ದಾರೆ.
Fact Check: ಪಹಲ್ಗಾಮ್ ದಾಳಿಯನ್ನು ಭಾರತದವರೇ ಮಾಡಿದ್ದು, ಮೋದಿ ಎಂಥ ಚೈಲ್ಡ್ ಎಂದ ಅಫ್ರಿದಿ!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


