Tuesday, November 3, 2026
spot_img
More
    spot_img
    HomeEntertainmentಸಂಜು ವೆಡ್ಸ್‌ ಗೀತಾ 2 ಸಕ್ಸಸ್‌ ಮೀಟ್: 3 ದಿನ ಓಡಿದ್ರೆ ಸಕ್ಸಸ್‌ ಮೀಟ್‌ ಎಂದ...

    ಸಂಜು ವೆಡ್ಸ್‌ ಗೀತಾ 2 ಸಕ್ಸಸ್‌ ಮೀಟ್: 3 ದಿನ ಓಡಿದ್ರೆ ಸಕ್ಸಸ್‌ ಮೀಟ್‌ ಎಂದ ಕವಿರಾಜ್‌!

    ಬೆಂಗಳೂರು: ನಿರ್ದೇಶಕ ನಾಗಶೇಖರ್‌ ನಿರ್ದೇಶನದ ಸಂಜು ವೆಡ್ಸ್‌ ಗೀತಾ 2 ಚಿತ್ರದ ಸಕ್ಸಸ್‌ ಮೀಟ್‌ ಕಾರ್ಯಕ್ರಮವನ್ನು ನಿನ್ನೆ ( ಜುಲೈ 2 ) ಆಚರಿಸಲಾಯಿತು.

    ಮೊದಲಿಗೆ ಜನವರಿ 17ರಂದು ಬಿಡುಗಡೆಯಾದ ಚಿತ್ರ ಮತ್ತೆ ಜುಲೈ 6ರಂದು ಬಿಡುಗಡೆಯಾಯಿತು. ಹೀಗೆ ಎರಡೆರಡು ಬಾರಿ ಬಿಡುಗಡೆಯಾದ ಚಿತ್ರ ಈ ಬಾರಿ 25 ದಿನಗಳನ್ನು ಪೂರೈಸಿದ್ದನ್ನು ಚಿತ್ರತಂಡ ಆಚರಿಸಿತು.

    ಇನ್ನು ಈ ಕಾರ್ಯಕ್ರಮಕ್ಕೆ ನಿರೀಕ್ಷೆಯಂತೆ ನಾಯಕಿ ರಚಿತಾ ರಾಮ್‌ ಗೈರಾಗಿದ್ದರು. ಸಕ್ಸಸ್‌ ಮೀಟ್‌ಗೆ ವಿಶೇಷ ಅತಿಥಿಯನ್ನಾಗಿ ರಿಯಲ್‌ ಸ್ಟಾರ್‌ ಉಪೇಂದ್ರ ಅವರನ್ನು ಚಿತ್ರತಂಡ ಕರೆಸಿತ್ತು.

    ಕಾರ್ಯಕ್ರಮದಲ್ಲಿ ಚಿತ್ರಕ್ಕೆ ಸಾಹಿತ್ಯ ಬರೆದಿರುವ ಕವಿರಾಜ್‌ ನೆನಪಿನ ಕಾಣಿಕೆ ಪಡೆದ ನಂತರ ಮಾತನಾಡಿ ʼನಾಗಶೇಖರ್‌ ಅಂದರೆ ಸಿನಿಮಾ ಮೇಲಿನ ಹುಚ್ಚು ಪ್ರೀತಿ ಉಳ್ಳವರು. ಚಿತ್ರವೆಂದರೆ ನಿರ್ದೇಶಕನಿಗೆ ಒಂದು ಮಗು ಇದ್ದಂತೆ. ಅದು ಬಿದ್ದಾಗ ಅದನ್ನು ಎತ್ತಿಕೊಂದು ಗುರಿ ತಲುಪಿಸುತ್ತೇವೆ. ಆ ಪ್ರೀತಿ ನನಗೆ ಇಲ್ಲಿ ನಿರ್ದೇಶಕ ನಾಗಶೇಖರ್‌ ಹಾಗೂ ನಿರ್ಮಾಪಕ ಛಲವಾದಿ ಕುಮಾರ್‌ ಅವರಲ್ಲಿ ಕಾಣಿಸಿತು. ಹಾಗಾಗಿ ಇದು ಸಕ್ಸಸ್‌ಗಿಂತ ಹುಚ್ಚು ಪ್ರೀತಿಯ ಸೆಲೆಬ್ರೇಷನ್‌, ಸಿನಿಮಾ ಮೇಲಿನ ಪ್ಯಾಷನ್‌ ಮೇಲಿನ ಸೆಲೆಬ್ರೇಷನ್‌. ಮೊದಲೆಲ್ಲ 100 ದಿನ ಓಡಿದ್ರೆ ಸಕ್ಸಸ್, ಈಗ ಮೊದಲ 3 ದಿನ ಓಡಿದ್ರೆ ಸಕ್ಸಸ್.‌ ಅಂಥದ್ದರಲ್ಲಿ 25 ದಿನ ತುಂಬಾ ದೊಡ್ಡ ವಿಷಯʼ ಎಂದರು.

    ಬ್ಯಾನ್‌ ಆಗಿದ್ರೂ ರಾಪಿಡೊ ಓಡಿಸುತ್ತಿದ್ದ ಸವಾರ: ಗ್ರಾಹಕನಂತೆ ಬಂದು ಹಿಡಿದ ಸಾರಿಗೆ ಸಚಿವ; ವಿಡಿಯೊ

    ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search