ಬೆಂಗಳೂರು: ನಿನ್ನೆ ( ಜೂನ್ 2 ) ಚಿಕ್ಕಬಳ್ಳಾಪುರದ ನಂದಿ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಬದಲಾವಣೆಗಳ ತೀರ್ಮಾನವನ್ನು ಕೈಗೊಳ್ಳಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು, ಬಾಗೇಪಲ್ಲಿ ಪಟ್ಟಣದ ಹೆಸರನ್ನು ಭಾಗ್ಯನಗರ ಎಂದು ಬದಲಾಯಿಸಲು ಸಚಿವ ಸಂಪುಟ ಸಭೆ ಅಸ್ತು ಎಂದಿದೆ. ಹಾಗೆಯೇ ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಮನಮೋಹನ್ ಸಿಂಗ್ ಎಂದು ನಾಮಕರಣ ಮಾಡುವುದಾಗಿ ಘೋಷಣೆ ಮಾಡಲಾಯಿತು.
ರಾಜ್ಯ ಸರ್ಕಾರದ ಈ ನಿರ್ಧಾರ ಸದ್ಯ ಕನ್ನಡಿಗರನ್ನು ಕೆರಳಿಸಿದೆ. ಎಕ್ಸ್ ವೇದಿಕೆಯಲ್ಲಿ ಸರ್ಕಾರದ ಈ ನಿರ್ಧಾರವನ್ನು ಈಗಾಗಲೇ ಕನ್ನಡಿಗರು ವಿರೋಧಿಸಲು ಆರಂಭಿಸಿದ್ದು, ಸುಷ್ಮಾ ಅಯ್ಯಂಗಾರ್ ಎಂಬುವರು ʼನೀವು ನಾಮಕರಣ ಮಾಡಿ ನಾವು ಮಸಿ, ಕಲ್ಲು, ಮೊಟ್ಟೆ, ಟೊಮ್ಯಾಟೊ ಹಿಡಿದು ರೆಡಿ ಇರುತ್ತೇವೆ. ಮಾನ ಮರ್ಯಾದೆಯನ್ನು ಮನೆಯಲ್ಲಿ ಹೊದಿಸಿ ಮಲಗಿಸಿ ಬಂದಿದ್ದೀರಾ?ʼ ಎಂದು ಎಚ್ಚರಿಕೆ ನೀಡಿದ್ದಾರೆ.
ಶ್ಯಾಮ್ ಪ್ರಸಾದ್ ಎಂಬುವರು ಸಹ ಈ ಕುರಿತು ಬರೆದುಕೊಂಡಿದ್ದು, ʼಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಹಿಂದಿ ನ್ಯಾಷನಲ್ ಕಾಂಗ್ರೆಸ್, ಮನ್ಮೋಹನ್ ಸಿಂಗ್ ಹೆಸರಿಟ್ಟು ಮರುನಾಮಕರಣ ಮಾಡುತ್ತಿರುವುದು ನಾಚಿಕೆಗೇಡಿನ ವಿಷಯ. ಹಿಂದಿ ಹೈಕಮಾಂಡ್ ಪಕ್ಷಗಳನ್ನು ಕರ್ನಾಟಕದಿಂದ ತೋಲಗಿಸುವವರೆಗೂ ಈ ಹೇರಿಕೆ ನಿಲ್ಲೋಲ್ಲ. ನಿಮ್ಮ ಪಕ್ಷದವರೇ ಆದ ಕೆಂಗಲ್ ಹನುಮಂತಯ್ಯ, ಎಸ್ ನಿಜಲಿಂಗಪ್ಪ, ದೇವರಾಜ ಅರಸು ಅವರುಗಳ ಹೆಸರು ಇಡೋಕೆ ಹೈಕಮಾಂಡ್ ಬಿಡೋದಿಲ್ಲ ಅಲ್ವಾ?ʼ ಎಂದು ಕಿಡಿಕಾರಿದ್ದಾರೆ.
ಬ್ಯಾನ್ ಆಗಿದ್ರೂ ರಾಪಿಡೊ ಓಡಿಸುತ್ತಿದ್ದ ಸವಾರ: ಗ್ರಾಹಕನಂತೆ ಬಂದು ಹಿಡಿದ ಸಾರಿಗೆ ಸಚಿವ; ವಿಡಿಯೊ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


