ಬೆಂಗಳೂರು: ಪಕ್ಷನಿಷ್ಠರಾಗಿ ದುಡಿಯುತ್ತಿರುವ ತಮ್ಮ ಸಹೋದರ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ನನಗೂ ಇದೆ. ಆದರೆ ಸದ್ಯಕ್ಕೆ ಆ ಕುರ್ಚಿ ಖಾಲಿಯಿಲ್ಲ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮುಂದಿನ 5 ವರ್ಷ ನಾನೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ನೀಡಿರುವ ಹೇಳಿಕೆಯಲ್ಲಿ ತಪ್ಪೇನೂ ಇಲ್ಲ. ಶಾಸಕಾಂಗ ಪಕ್ಷ ಅವರನ್ನು ಆಯ್ಕೆಮಾಡಿದೆ. ಮೊದಲಿನಿಂದಲೂ ಅವರು ಅದೇ ರೀತಿ ಹೇಳುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಕೂಡ ಬೆಂಬಲಿಸುತ್ತಾ ಬಂದಿದ್ದಾರೆ ಎಂದರು.
ನಂಬಿಕೆ ಎನ್ನುವುದು ಜೀವನ. ಅದು ಇಲ್ಲದೇ ಹೋದರೆ ಕಷ್ಟವಾಗುತ್ತದೆ. ಕೆಲಸಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂಬ ಭರವಸೆ ಇವತ್ತಿಗೂ ಇದೆ, ನಾಳೆಯೂ ಇರಲಿದೆ. ಡಿ.ಕೆ. ಶಿವಕುಮಾರ್ ಅವರು ಅಸಹಾಯಕರಾಗಿ ಹೇಳಿಕೆ ನೀಡಿಲ್ಲ. ಪಕ್ಷದ ನಾಯಕತ್ವಕ್ಕೆ ಗೌರವ ನೀಡಿದ್ದಾರೆ ಎಂದರು.
ಯಾವಾಗ, ಯಾರಿಗೆ, ಯಾವ ಸ್ಥಾನಮಾನ ಎಂದು ಹೈಕಮಾಂಡ್ ನಿರ್ಧರಿಸುತ್ತದೆ. ಬಿಜೆಪಿ ನಾಯಕರು ಬಾಯಿಗೆ ಬಂದಂತೆ ಮಾತನಾಡಿ, ಗೊಂದಲ ಮೂಡಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.
75 ವರ್ಷ ದಾಟಿದವರೂ ಅಧಿಕಾರ ತ್ಯಾಗ ಮಾಡಬೇಕೆಂಬುದನ್ನು ಆಧರಿಸಿ ಕರ್ನಾಟಕದಲ್ಲಿ ಯಡಿಯೂರಪ್ಪ ಅವರ ರಾಜೀನಾಮೆ ಪಡೆದುಕೊಂಡರು. ಈಗ ಅದೇ ನಿಯಮವನ್ನು ಕೇಂದ್ರದಲ್ಲಿ ಅನುಸರಿಸುತ್ತಾರೆಯೇ? ಅನುಕೂಲಕ್ಕೆ ತಕ್ಕ ಹಾಗೆ ರಾಜಕಾರಣ ಮಾಡುವ ಬಿಜೆಪಿ ಅವರು, ತತ್ವ ಸಿದ್ಧಾಂತದ ಬಗ್ಗೆಯಾಗಲಿ ಕಾಂಗ್ರೆಸ್ ಬಗ್ಗೆಯಾಗಲಿ ಮಾತನಾಡುವ ನೈತಿಕತೆ ಹೊಂದಿಲ್ಲ ಎಂದು ತಿರುಗೇಟು ನೀಡಿದರು.
ಕೇರಳದ ಪ್ರಸಿದ್ಧ ಕೊಟ್ಟಿಯೂರ್ ಪವಿತ್ರ ಶಿವ ದೇವಸ್ಥಾನಕ್ಕೆ ನಟ ಜಗ್ಗೇಶ್ ಭೇಟಿ
ಕೃಷಿ ಕನ್ನಡ ಎಐ ವೆಬ್ಸೈಟ್ಗೆ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


