Sunday, August 30, 2026
spot_img
More
    spot_img
    HomeEntertainmentರಜನಿಕಾಂತ್‌ ಕೂಲಿ ಟ್ರೈಲರ್‌ನಲ್ಲಿ ಮಿಂಚಿದ ಕನ್ನಡ ನಟಿ ರಚಿತಾ ರಾಮ್

    ರಜನಿಕಾಂತ್‌ ಕೂಲಿ ಟ್ರೈಲರ್‌ನಲ್ಲಿ ಮಿಂಚಿದ ಕನ್ನಡ ನಟಿ ರಚಿತಾ ರಾಮ್

    ತಮಿಳು ನಿರ್ದೇಶಕ ಲೋಕೇಶ್‌ ಕನಕರಾಜ್‌ ಅವರ ಮುಂದಿನ ಬಹು ನಿರೀಕ್ಷಿತ ಚಿತ್ರ ಕೂಲಿ ಇದೇ ತಿಂಗಳ 14ರಂದು ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ.

    Advertisement

    ಇದೇ ಮೊದಲ ಬಾರಿಗೆ ಸೂಪರ್‌ ಸ್ಟಾರ್‌ ರಜನಿಕಾಂತ್‌ಗೆ ಆಕ್ಷನ್‌ ಕಟ್‌ ಹೇಳಿರುವ ಲೋಕೇಶ್‌ ಕನಕರಾಜ್‌ ಚಿತ್ರಕ್ಕಾಗಿ ಕಾಲಿವುಡ್‌ನಿಂದ ಬಾಲಿವುಡ್‌ವರೆಗೆ ವಿವಿಧ ಇಂಡಸ್ಟ್ರಿಗಳ ಸ್ಟಾರ್‌ಗಳನ್ನು ಬಳಕೆ ಮಾಡಿದ್ದು, ಚಿತ್ರದ ತಾರಾಗಣ ಬಲು ವಿಶೇಷವೆನಿಸಿದೆ. +

    ಹಾಡುಗಳ ಮೂಲಕವೇ ಸಿಕ್ಕಾಪಟ್ಟೆ ಸದ್ದು ಮಾಡಿರವ ಕೂಲಿ ಚಿತ್ರದ ಟ್ರೈಲರ್‌ ನಿನ್ನೆ ( ಆಗಸ್ಟ್‌ 2 ) ಬಿಡುಗಡೆಯಾಗಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

    ಇನ್ನು ಟ್ರೈಲರ್‌ನಲ್ಲಿ ಚಿತ್ರದಲ್ಲಿರುವ ವಿವಿಧ ಸ್ಟಾರ್‌ಗಳ ದರ್ಶನ ಸಹ ಆಗಿದ್ದು, ಸ್ಯಾಂಡಲ್‌ವುಡ್‌ ನಟಿ ರಚಿತಾ ರಾಮ್‌ ಸಹ ಚಿತ್ರದಲ್ಲಿ ನಟಿಸಿರುವುದು ವಿಶೇಷವೆನಿಸಿದೆ. ಈ ಮೂಲಕ ರಚಿತಾ ರಾಮ್‌ ಕಾಲಿವುಡ್‌ಗೆ ಪದಾರ್ಪಣೆಯನ್ನೂ ಸಹ ಮಾಡಿದ್ದಾರೆ.

    ಹೌದು, ನಿನ್ನೆ ಬಿಡುಗಡೆಯಾದ ಟ್ರೈಲರ್‌ ಒಂದು ದೃಶ್ಯದಲ್ಲಿ ರಚಿತಾ ರಾಮ್‌ ಕಾಣಿಸಿಕೊಂಡಿದ್ದಾರೆ. ಸಿನಿ ಪ್ರೇಮಿಗಳು ಈ ಸುದ್ದಿ ಹಿಂದೆಯೇ ತಿಳಿದಿತ್ತು ಎಂದರೆ ಬಹುತೇಕರು ಈ ಚಿತ್ರದಲ್ಲಿ ರಚಿತಾ ಸಹ ಇದ್ದಾರಾ ಎಂದು ಆಶ್ಚರ್ಯ ಹೊರಹಾಕಿದ್ದಾರೆ. ಇನ್ನು ಚಿತ್ರದಲ್ಲಿ ನಾಯಕಿಯಾಗಿ ಶೃತಿ ಹಾಸನ್‌ ನಟಿಸಿದ್ದು, ರಚಿತಾ ರಾಮ್‌ ಅವರದ್ದು ಪೋಷಕ ಪಾತ್ರವಿರಹುದು ಎಂದು ಊಹಿಸಲಾಗಿದೆ.

    ಪಿಎಂ ಕಿಸಾನ್ 2,000 ರೂ. ಖಾತೆಗೆ ಜಮೆ: 9.7 ಕೋಟಿ ರೈತರಿಗೆ ನೇರ ಲಾಭ, ವಾರಣಾಸಿಯಲ್ಲಿ ಮೋದಿ ಶಂಕುಸ್ಥಾಪನೆ ಕಾರ್ಯಕ್ರಮ

    ಎಐ ಕೃಷಿ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading