ಚಿನ್ನಯ್ಯನ ಎಸ್.ಐ.ಟಿ ಕಸ್ಟಡಿ ಅವಧಿ ಬುಧವಾರ ಮುಕ್ತಾಯವಾಗುತ್ತಿದ್ದು, ಕಳೆದ 11 ದಿನಗಳಿಂದ ಎಸ್‌ಐಟಿ ಕಸ್ಟಡಿಯಲ್ಲಿದ್ದು, ಇಂದು ಬುಧವಾರ ಆತನನ್ನು ಬೆಳ್ತಂಗಡಿ ನ್ಯಾಯಾಲಯದ ಮುಂದೆ ಎಸ್.ಐ.ಟಿ ಅಧಿಕಾರಿಗಳು ಹಾಜರು ಪಡಿಸಲಿದ್ದಾರೆ.
ಆ. 23 ರಂದು ಎಸ್.ಐ.ಟಿ ತಂಡ ಚಿನ್ನಯ್ಯನನ್ನು ಬುರುಡೆಯ ವಿಚಾರದಲ್ಲಿ ಬಂಧಿಸಿದ್ದರು. ಅದೇದಿನ ಆತನನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಸೆ.3 ರ ವರೆಗೆ ಚಿನ್ನಯ್ಯನನ್ನು ಎಸ್.ಐ.ಟಿ ವಶಕ್ಕೆ ಒಪ್ಪಿಸಿ ಆದೇಶ ನೀಡಿತ್ತು. ಚಿನ್ನಯ್ಯನನ್ನು ವಶಕ್ಕೆ ಪಡೆದ ಎಸ್.ಐ.ಟಿ ತಂಡ ಮಹೇಶ್ ಶೆಟ್ಟಿ ಮನೆ, ಜಯಂತ್ ಟಿ ಮನೆ ಮತ್ತು ಆತ ಉಳಿದು ಕೊಂಡಿದ್ದ ಲಾಡ್ಜ್ ಗಳಲ್ಲಿಯೂ ಆತನನ್ನು ಕರೆದೊಯ್ದು ಮಹಜರು ಪ್ರಕ್ರಿಯೆ ನಡೆಸಿತ್ತು.
ಬುರುಡೆಯ ಬಗ್ಗೆ ವಿಚಾರಣೆಯ ವೇಳೆ ಹಲವಾರು ವಿಚಾರಗಳನ್ನು ಚಿನ್ನಯ್ಯ ಎಸ್.ಐ.ಟಿ ಗೆ ಹೇಳಿದ್ದಾನೆ. ಚಿನ್ನಯ್ಯನೊಂದಿಗೆ ಈ ಪ್ರಕರಣದಲ್ಲಿ ಭಾಗಿಯಾಗಿರುವ ಹಲವರಿಗೆ ಸಂಕಷ್ಟ ಉಂಟಾಗಿದೆ. ಇನ್ನಷ್ಟು ಜಾಗಗಳಲ್ಲಿ ಮಹಜರು ನಡೆಸಿ ಸಾಕ್ಷ್ಯ ಸಂಗ್ರಹಕ್ಕೆ ಎಸ್ ಐಟಿ ಸಜ್ಜಾಗಲಿದೆ. ಸಹಕಾರ ನೀಡಿದವರ ವಿಚಾರಣೆಯು ನಡೆಯಲಿದೆ.
ಇದೀಗ ಚಿನ್ನಯ್ಯನ ಕಸ್ಟಡಿ ಅವಧಿ ಮುಗಿದಿದ್ದು ಸೆ.3ರಂದು ಸಾಕ್ಷಿ ದೂರುದಾರ ಚಿನ್ನಯ್ಯನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುತ್ತಿದೆ. ಆದರೆ ಅಧಿಕಾರಿಗಳು ಚಿನ್ನಯ್ಯನನ್ನು ಪ್ರತಿದಿನ ಸಂಜೆ 7 ಗಂಟೆಯವರೆಗೆ ಸ್ಥಳ ಮಹಜರು ಮಾಡಿದ್ದರು. ಅಧಿಕಾರಿಗಳು ಚಿನ್ನಯ್ಯನನ್ನು ಮತ್ತಷ್ಟು ತೀವ್ರ ವಿಚಾರಣೆಗೆ ಒಳಪಡಿಸಲಿದ್ದಾರೆ. ಇಂದು ಆತನನ್ನು ಮತ್ತೆ ವಶಕ್ಕೆ ಪಡೆದು ಮಂಡ್ಯ-ತಮಿಳುನಾಡುಗೆ ಕರೆದುಕೊಂಡು ಹೋಗಿ, ಅಲ್ಲಿ ಮಹಜರು ನಡೆಸುವ ಸಾಧ್ಯತೆ ಇದೆ.
ಈಗಾಗಲೇ ಉಜಿರೆ, ಬೆಂಗಳೂರಿನಲ್ಲಿ ಮಹಜರು ಕಾರ್ಯ ಮುಗಿದಿದ್ದು, ಇನ್ನು ಕೂಡ ತಮಿಳುನಾಡು, ಮಂಡ್ಯದಲ್ಲಿ ಮಹಜರು ನಡೆಸಬೇಕಿದೆ. ಹಾಗಾಗಿ ಎಸ್.ಐ.ಟಿ ತಂಡ ಚಿನ್ನಯ್ಯನನ್ನು ಮತ್ತೆ ವಶಕ್ಕೆ ನೀಡುವಂತೆ ನ್ಯಾಯಾಲಯದ ಮುಂದೆ ಬೇಡಿಕೆ ಸಲ್ಲಿಸುವ ಸಾಧ್ಯತೆಯಿದೆ.
ಬುರುಡೆ ಗ್ಯಾಂಗ್‌ನ ಸಂಪರ್ಕಗಳು ದೆಹಲಿ ಮತ್ತು ತಮಿಳುನಾಡಿನವರೆಗೂ ಬೆಸೆದುಕೊಂಡಿವೆ. ಈ ಹಿನ್ನೆಲೆಯಲ್ಲಿ, ಹೆಚ್ಚಿನ ವಿಚಾರಣೆಗಾಗಿ ಚಿನ್ನಯ್ಯನನ್ನು ಇನ್ನಷ್ಟು ದಿನಗಳ ಕಾಲ ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


