ಕಿಚ್ಚ ಸುದೀಪ್ ತಮ್ಮ 52ನೇ ವರ್ಷದ ಜನ್ಮದಿನ ಆಚರಿಸಿಕೊಂಡಿದ್ದಾರೆ.ಈ ಬಾರಿ ಸೆಲೆಬ್ರೇಷನ್ ಜೋರಾಗಿದೆ. ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ʼಬಿಲ್ಲ ರಂಗ ಬಾಷಾʼ ಚಿತ್ರದಿಂದ ಸ್ಪೆಷೆಲ್ ಅಪ್ಡೇಟ್ ಹೊರಬಿದ್ದಿದೆ. ಹಾಗೂ K-47 ಚಿತ್ರದ ಟೈಟಲ್ ಘೋಷಣೆ ಮತ್ತು ಪವರ್-ಪ್ಯಾಕ್ಡ್ ಟೀಸರ್ ಅನಾವರಣ ಮಾಡಲಾಗಿದೆ. ಹುಟ್ಟುಹಬ್ಬದ ಮುನ್ನಾ ದಿನ ಚಿತ್ರದ ಶೀರ್ಷಿಕೆಯನ್ನು ”ಮಾರ್ಕ್” ಎಂದು ಅನಾವರಣಗೊಳಿಸಲಾಗಿದೆ. ಹಗಲು ರಾತ್ರಿ ಎನ್ನದೆ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.
ಈಗ ಕಿಚ್ಚನ ಭವಿಷ್ಯದ ಬಗ್ಗೆ ಜ್ಯೋತಿಷಿಯೊಬ್ಬರು ತಿಳಿಸಿದ ಭವಿಷ್ಯವಾಣಿ ವೈರಲ್ ಆಗುತ್ತಿದೆ. ಜ್ಯೋತಿಷಿ ಪ್ರಶಾಂತ್ ಕಿಣಿ (@AstroPrashanth9) ಕಿಚ್ಚ ಸುದೀಪ್ ಅವರ ಬಗ್ಗೆ ಭಾರೀ ಭವಿಷ್ಯ ನುಡಿದಿದ್ದಾರೆ.
ಪ್ರಶಾಂತ್ ಕಿಣಿ ಆಗಸ್ಟ್ 31 ರಂದು ಮಾಡಿರುವ ಪೋಸ್ಟ್ ಹೀಗಿದೆ:
ಕನ್ನಡ ಚಲನಚಿತ್ರ ನಟ ಕಿಚ್ಚ ಸುದೀಪ್ 2032 ರವರೆಗೆ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ.ವೈಫಲ್ಯಗಳು ಗಾಯಗಳು ಆರ್ಥಿಕ ನಷ್ಟಗಳು ಮಾತ್ರವಲ್ಲದೆ, ನಂಬಿದವರಿಂದಲೇ ಅವರಿಗೆ ದ್ರೋಹವಾಗಲಿದೆ. ಅದರೊಂದಿಗೆ ಆರೋಗ್ಯ ಸಮಸ್ಯೆಗಳು ಕೂಡ ಕಾಡಲಿದೆ. ಏಪ್ರಿಲ್ 2028 ರಿಂದ ಏಪ್ರಿಲ್ 2029 ರ ನಡುವೆ ಅವರು ಬಹಳ ಜಾಗರೂಕರಾಗಿರಬೇಕು. ಮತ್ತು ಏಪ್ರಿಲ್ 2030 ರಿಂದ ಮೇ 2031 ರವರೆಗೆ ಕೂಡ ಎಚ್ಚರಿಕೆಯಲ್ಲಿರಬೇಕು.
ನಟ ದರ್ಶನ್ ತೂಗುದೀಪ ಮತ್ತು ಕಿಚ್ಚ ಸುದೀಪ್ ವಿಚಾರವನ್ನು ಪ್ರಸ್ತಾಪಿಸಿರುವ ಜ್ಯೋತಿಷಿ, ಇವರು ಮುಂದೆ ಒಂದಾಗುತ್ತಾರೆ ಎಂದು ದಿನಾಂಕ ತಿಳಿಸಿ ಪೋಸ್ಟ್ ಮಾಡಿದ್ದಾರೆ. ಜುಲೈ 2026 ರ ನಂತರ ಇವರಿಬ್ಬರು ಒಂದಾಗುತ್ತಾರೆ ಎಂದಿದ್ದಾರೆ. ಈ ಬಗ್ಗೆ 2024ರಲ್ಲಿ ನುಡಿದಿದ್ದ ಭವಿಷ್ಯದ ಪೋಸ್ಟ್ ಮರು ಪೋಸ್ಟ್ ಮಾಡಿ ಬರೆದುಕೊಂಡಿದ್ದಾರೆ. ಜ್ಯೋತಿಷಿ ಭವಿಷ್ಯವಾಣಿ ಪೋಸ್ಟ್ಗಳು ವೈರಲ್ ಆಗುತ್ತಿವೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


