ಕಾಂತಾರ ಎ ಲೆಜೆಂಡ್ ಚಾಪ್ಟರ್ 1 ಕನ್ನಡದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ನಿನ್ನೆ ( ಅಕ್ಟೋಬರ್ 2 ) ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಿದೆ.
ಬೆಂಗಳೂರಿನಲ್ಲಿ ಕೂಲಿ ಚಿತ್ರಕ್ಕಿಂತ ಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡು ನಗರದಲ್ಲಿ ಮೊದಲ ದಿನ ಅತಿ ಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡ ಸಿನಿಮಾ ಎನಿಸಿಕೊಂಡಿದೆ.
ಇನ್ನು ಚಿತ್ರಕ್ಕೆ ಮೊದಲ ದಿನ ಒಳ್ಳೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಪರಿಣಾಮ ಅದ್ಭುತ ಬುಕಿಂಗ್ಸ್ ನಡೆದಿದೆ. ಪ್ರೇಕ್ಷಕ ಮಹಾಪ್ರಭುವಿಗೆ ಚಿತ್ರ ಇಷ್ಟವಾಗಿದ್ದು, ಚಿತ್ರಕ್ಕಿದ್ದ ಹೈಪ್ ದೊಡ್ಡ ಮಟ್ಟದಲ್ಲಿ ಮೊದಲ ದಿನವೇ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಬರುವಂತೆ ಮಾಡಿದೆ.
ಹೀಗೆ ನಾವೂ ಯಾರಿಗೂ ಕಮ್ಮಿ ಇಲ್ಲ ಎನ್ನುವಂತೆ ಬಿಡುಗಡೆಯಾದ ಕಾಂತಾರ ಚಿತ್ರದ 1.28 ಮಿಲಿಯನ್ ಟಿಕೆಟ್ ಬುಕ್ ಮೈ ಶೋನಲ್ಲಿ ಮಾರಾಟಗೊಂಡಿದೆ. ಈ ಮೂಲಕ ಕಾಂತಾರ ಮೊದಲ ದಿನ ಬುಕ್ ಮೈ ಶೋನಲ್ಲಿ ಅತಿ ಹೆಚ್ಚು ಟಿಕೆಟ್ ಮಾರಾಟಗೊಂಡ ಭಾರತದ ಎರಡನೇ ಚಿತ್ರ ಎನಿಸಿಕೊಂಡಿದೆ.
ನಿರ್ದೇಶಕ ಸುಕುಮಾರ್ ಹಾಗೂ ಅಲ್ಲು ಅರ್ಜುನ್ ಜೋಡಿಯ ಪುಷ್ಪ 2 ಚಿತ್ರ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ. ಪುಷ್ಪ 2 ಚಿತ್ರದ 1.7 ಮಿಲಿಯನ್ ಟಿಕೆಟ್ ಮೊದಲ ದಿನ ಬುಕ್ ಮೈ ಶೋನಲ್ಲಿ ಮಾರಾಟವಾಗಿದ್ದವು.
ಬುಕ್ ಮೈ ಶೋನಲ್ಲಿ ಮೊದಲ ದಿನ ಅತಿಹೆಚ್ಚು ಟಿಕೆಟ್ ಮಾರಾಟವಾದ ಟಾಪ್ 5 ಚಿತ್ರಗಳ ಪಟ್ಟಿ ಇಲ್ಲಿದೆ.
ಪುಷ್ಪ 2 – 1.7 ಮಿಲಿಯನ್
ಕಾಂತಾರ ಚಾಪ್ಟರ್ 1 – 1.28 ಮಿಲಿಯನ್
ಜವಾನ್ – 1.14 ಮಿಲಿಯನ್
ಕಲ್ಕಿ – 1.12 ಮಿಲಿಯನ್
ಸಲಾರ್ – 0.9 ಮಿಲಿಯನ್
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


