ರಿಷಬ್ ಶೆಟ್ಟಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಕಾಂತಾರ ಚಾಪ್ಟರ್ 1 ನಿನ್ನೆ ( ಅಕ್ಟೋಬರ್ 2 ) ಬಿಡುಗಡೆಯಾಗಿದೆ.
2022ರಲ್ಲಿ ತೆರೆಗೆ ಬಂದಿದ್ದ ಕಾಂತಾರ ಚಿತ್ರದ ಪ್ರೀಕ್ವೆಲ್ ಆಗಿರುವ ಈ ಚಿತ್ರದ ಮೇಲೆ ಚಿತ್ರ ಘೋಷಣೆಯದಾಗಿನಿಂದಲೂ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಕೊಂಡಿತ್ತು.
ಹೀಗೆ ಬೃಹತ್ ಹೈಪ್ ಜತೆ ಚಿತ್ರಮಂದಿರದ ಅಂಗಳಕ್ಕೆ ಬಂದ ಕಾಂತಾರಕ್ಕೆ ಪ್ರೇಕ್ಷಕ ಮಹಾಪ್ರಭು ದೊಡ್ಡ ಮಟ್ಟದಲ್ಲೇ ಸ್ವಾಗತ ಕೋರಿದ್ದಾನೆ. ಪರಿಣಾಮ ಬಹುತೇಕ ಕಡೆಗಳಲ್ಲಿ ಮೊದಲ ದಿನ ತುಂಬಿದ ಪ್ರದರ್ಶನ ನಡೆದಿದೆ. ಬೆಂಗಳೂರಿನಲ್ಲಂತೂ ಎಲ್ಲ ಪ್ರದರ್ಶನಗಳೂ ಹೌಸ್ ಫುಲ್ ಆಗಿದ್ದು, ಕೂಲಿ ಚಿತ್ರಕ್ಕಿಂತ ನಗರದಲ್ಲಿ ಮೊದಲ ದಿನ ಅತಿಹೆಚ್ಚು ಹೌಸ್ ಫುಲ್ ಪ್ರದರ್ಶನ ಕಂಡ ಸಿನಿಮಾ ಎನಿಸಿಕೊಂಡಿತು.
ಹೀಗೆ ಎಲ್ಲೆಡೆ ಅಬ್ಬರಿಸಿರುವ ಕಾಂತಾರ ಮೊದಲ ದಿನ ಎಷ್ಟು ಗಳಿಕೆ ಮಾಡಬಹುದು ಎಂಬ ಕುತೂಹಲ ಸಿನಿ ರಸಿಕರಲ್ಲಿ ಮೂಡಿತ್ತು. ಬುಕ್ ಮೈ ಶೋ ಒಂದರಲ್ಲೇ ಮೊದಲ ದಿನ 12 ಲಕ್ಷಕ್ಕೂ ಅಧಿಕ ಟಿಕೆಟ್ ಮಾರಾಟವಾಗಿದ್ದನ್ನು ಕಂಡು 100 ಕೋಟಿ ಓಪನಿಂಗ್ ಪಕ್ಕಾ ಎಂದೇ ಸಿನಿ ರಸಿಕರು ಎಣಿಸಿದ್ದರು.
ಇದೀಗ ಸ್ಯಾಕ್ ನಿಕ್ ವೆಬ್ ತಾಣ ಚಿತ್ರದ ಮೊದಲ ದಿನದ ಕಲೆಕ್ಷನ್ ಅನ್ನು ಹಂಚಿಕೊಂಡಿದೆ. ಚಿತ್ರ ಅಂದಾಜು 60 ಕೋಟಿ ನೆಟ್ ಕಲೆಕ್ಷನ್ ಮಾಡಿದೆ ಎಂದು ಸ್ಯಾಕ್ ನಿಕ್ ತಿಳಿಸಿದ್ದು, ಇದು ಗ್ರಾಸ್ ಲೆಕ್ಕಾಚಾರದಲ್ಲಿ 80ರಿಂದ 90 ಕೋಟಿ ರೂಪಾಯಿಗಳಾಗಲಿದೆ.
ಆಂಧ್ರ ಬಾಕ್ಸ್ ಆಫೀಸ್ ಡಾಟ್ ಕಾಂ ಪ್ರಕಾರ ಚಿತ್ರ ಮೊದಲ ದಿನ 87 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಈ ಎರಡೂ ರಿಪೋರ್ಟ್ ಪ್ರಕಾರ ಕಾಂತಾರ ಮೊದಲ ದಿನ 100 ಕೋಟಿ ಗ್ರಾಸ್ ಕಲೆಕ್ಷನ್ ಮಾಡುವುದು ಅನುಮಾನವೆನಿಸಿದೆ. ಮಾರಾಟವಾದ ಟಿಕೆಟ್ ಲೆಕ್ಕಕ್ಕೂ ಈ ವರದಿಗಳಿಗೂ ಸರಿಯಾದ ಹೊಂದಾಣಿಕೆ ಕಂಡುಬರದೇ ಇರುವ ಕಾರಣ ಚಿತ್ರ ತಂಡ ಅಧಿಕೃತವಾಗಿ ಕಲೆಕ್ಷನ್ ಎಷ್ಟು ಎಂಬುದನ್ನು ಘೋಷಿಸಬೇಕಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


