ಕೊಯಮತ್ತೂರು (ತಮಿಳುನಾಡು): ನಗರದ ಏರ್ಪೋರ್ಟ್ ಸಮೀಪ ಭಾನುವಾರ ( ನವೆಂಬರ್ 2 ) ಬಾಯ್ಫ್ರೆಂಡ್ ಜತೆ ಕಾರ್ನಲ್ಲಿದ್ದ ಎಂಬಿಎ ವಿದ್ಯಾರ್ಥಿನಿಯನ್ನು ಎಳೆದೊಯ್ದು ಮೂವರ ಗುಂಪು ಅತ್ಯಾಚಾರವೆಸಗಿರುವ ಘಟನೆ ನಡೆದಿದೆ.
ಪೀಲಮೇಡು ಬಳಿಯ ಖಾಸಗಿ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ರಾತ್ರಿ 11 ಗಂಟೆ ಸುಮಾರಿಗೆ ತನ್ನ ಬಾಯ್ಫ್ರೆಂಡ್ ಜತೆ ಕಾರ್ನಲ್ಲಿ ಕುಳಿತು ಮಾತನಾಡುತ್ತಿದ್ದ ಸಂದರ್ಭದಲ್ಲಿ ಬೈಕ್ನಲ್ಲಿ ಬಂದ ಮೂವರು ಕಾರ್ನಲ್ಲಿದ್ದ ಬಾಯ್ಫ್ರೆಂಡ್ಗೆ ಥಳಿಸಿ ಬಳಿಕ ಯುವತಿಯನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.
ಇನ್ನು ಹಲ್ಲೆಗೊಳಗಾದ ಆಕೆಯ ಸ್ನೇಹಿತ ಪೊಲೀಸರಿಗೆ ವಿಷಯ ತಿಳಿಸಿದ್ದು, ಘಟನಾ ಸ್ಥಳದ ಸುತ್ತಮುತ್ತ ಸಂತ್ರಸ್ತೆಗಾಗಿ ಹುಡುಕಾಟ ನಡೆಸಿದ್ದಾರೆ. ಬಳಿಕ ಬೆಳಗಿನ ಜಾವ 4 ಗಂಟೆ ಸಮಯಕ್ಕೆ ಕೊಯಮತ್ತೂರು ಏರ್ಪೋರ್ಟ್ನ ಒಂದು ಕಿಲೊಮೀಟರ್ ದೂರದಲ್ಲಿ ಯುವತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ವಿವಸ್ತ್ರಳಾಗಿ ಪತ್ತೆಯಾಗಿದ್ದಾಳೆ. ಆಕೆಯನ್ನು ಸಿತ್ರಾ ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಪೊಲೀಸರು ಈ ಕುರಿತು ಮಾತನಾಡಿದ್ದು, ಅತ್ಯಾಚಾರ ಎಸಗಿದ ಮೂವರು ಮೊದಲಿಗೆ ಕೊವಿಲ್ಪಾಳ್ಯಂನಲ್ಲಿ ಬೈಕ್ ಒಂದನ್ನು ಕದ್ದು ಅಲ್ಲಿಂದ ಏರ್ಪೋರ್ಟ್ ಕಡೆ ಪ್ರಯಾಣ ಬೆಳಸಿದ್ದು ಈ ವೇಳೆ ಕಾರ್ನಲ್ಲಿ ಯುವತಿ ಹಾಗೂ ಬಾಯ್ಫ್ರೆಂಡ್ ಇದ್ದದ್ದನ್ನು ಕಂಡು ಈ ಕೃತ್ಯ ಎಸಗಿದ್ದಾರೆ ಎಂದಿದ್ದಾರೆ. ಹಾಗೂ ಏಳು ತಂಡಗಳನ್ನು ಈಗಾಗಲೇ ರಚನೆ ಮಾಡಿದ್ದು ಕೂಡಲೇ ಅತ್ಯಾಚಾರಿಗಳನ್ನು ಬಂಧಿಸುವುದಾಗಿ ತಿಳಿಸಿದ್ದಾರೆ.
ಇನ್ನು ಗಾಯಗೊಂಡ ಯುವತಿಯ ಬಾಯ್ಫ್ರೆಂಡ್ನನ್ನು ಕೊಯಮತ್ತೂರು ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹಿಳಾ ವಿಶ್ವಕಪ್ ಫೈನಲ್: ಭಾರತದ ಎದುರು ʼಸೋತ ಆಫ್ರಿಕಾʼ; ಚೊಚ್ಚಲ ಟ್ರೋಫಿ ಎತ್ತಿಹಿಡಿದ ಟೀಮ್ ಇಂಡಿಯಾ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


