ಬಿಗ್ಬಾಸ್ ಕನ್ನಡ ಸೀಸನ್ 12 ದಿನದಿಂದ ದಿನಕ್ಕೆ ಮನರಂಜನೆ ಜತೆಜತೆಗೆ ವಿವಾದಗಳಿಗೂ ಸುದ್ದಿಯಾಗುತ್ತಿದೆ. ಪ್ರತಿ ಬಾರಿಯ ಬಿಗ್ಬಾಸ್ನಂತೆ ಈ ಬಿಗ್ಬಾಸ್ನಲ್ಲೂ ಸಹ ಗುಂಪುಗಾರಿಕೆ, ಸೇಡು, ಕುತಂತ್ರಗಳು ನಡೆಯುತ್ತಿದ್ದು, ಜಗಳಗಳಿಗೇನು ಕಡಿಮೆಯಿಲ್ಲ.
ಸೀಸನ್ ಆರಂಭವಾದ ಕೆಲವೇ ದಿನಗಳಲ್ಲಿ ಮನೆಯಲ್ಲಿ ಕಿತ್ತಾಟಗಳು ನಡೆದಿದ್ದು, ಇದೀಗ ವೈಲ್ಡ್ ಕಾರ್ಟ್ ಸ್ಪರ್ಧಿಗಳ ಆಗಮನದ ಬಳಿಕ ಮತ್ತಷ್ಟು ಜಗಳಗಳು ನಡೆಯತೊಡಗಿವೆ.
ಅದರಲ್ಲೂ ಗಿಲ್ಲಿನಟ ಮಾಡುವ ತಮಾಷೆ ಕೆಲ ಸ್ಪರ್ಧಿಗಳಿಗೆ ಸಹಿಸಲಾರದೇ ತಾಳ್ಮೆ ಕಳೆದುಕೊಳ್ಳುತ್ತಿದ್ದು, ಇದೀಗ ಬಕೆಟ್ ಕೊಡದ ರಿಷಾ ವಿರುದ್ಧ ಸೇಡು ತೀರಿಸಿಕೊಳ್ಳಲು ಗಿಲ್ಲಿ ಮಾಡಿದ ತಂತ್ರ ರಿಷಾಳನ್ನು ತಾಳ್ಮೆ ಕಳೆದುಕೊಳ್ಳುವಂತೆ ಮಾಡಿದೆ.
ಹೌದು, ಇಂದು ( ನವೆಂಬರ್ 3 ) ಬಿಡುಗಡೆಯಾಗಿರುವ ಪ್ರೋಮೊದಲ್ಲಿ ಗಿಲ್ಲಿ ವಿರುದ್ಧ ರಿಷಾ ರೋಷಾವೇಷದಿಂದ ವರ್ತಿಸಿದ್ದು, ಗಿಲ್ಲಿ ಮೇಲೆ ಹಲ್ಲೆಗೂ ಸಹ ಮುಂದಾಗಿದ್ದಾರೆ.
ಗಿಲ್ಲಿ ಸ್ನಾನದ ಮನೆಯಲ್ಲಿದ್ದ ರಿಷಾಗೆ ಬಟ್ಟೆ ಹಾಕಲು ಬಕೆಟ್ ಕೊಡುವುದಿಲ್ಲವಾ ಎಂದು ಕೇಳಿದ್ದು, ಇದಕ್ಕೆ ಪ್ರತಿಕ್ರಿಯಿಸದ ರಿಷಾಗೆ ನನಗೆ ಏನು ಮಾಡಬೇಕು ಗೊತ್ತಿದೆ ಎಂದು ಹೇಳಿ ಆಕೆಯ ಬಟ್ಟೆಯನ್ನು ತೆಗೆದುಕೊಂಡು ಸ್ನಾನದ ಮನೆ ವಿಭಾಗದ ಆವರಣದಲ್ಲಿ ಹಾಕಿದ್ದಾರೆ.
ಇದನ್ನು ಕಂಡು ರೊಚ್ಚಿಗೆದ್ದ ರಿಷಾ ಗಿಲ್ಲಿ ವಿರುದ್ಧ ಚೀಪ್ ಚೀಪ್ ತಮಾಷೆ ಮಾಡಬೇಡ ಎಂದು ಕಿಡಿಕಾರಿದ್ದು, ಆತನ ಮೇಲೆ ಎರಡು ಬಾರಿ ಕೈನಿಂದ ಹೊಡೆದಿದ್ದಾರೆ. ಅಲ್ಲದೇ ಗಿಲ್ಲಿಯ ಬಟ್ಟೆಗಳನ್ನು ಹೊರಚೆಲ್ಲಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


