Tuesday, November 3, 2026
spot_img
More
    spot_img
    HomeLatest newsವಿಡಿಯೋ: ಕೆರೆಗೆ ಹಾರಿದ ರಾಹುಲ್ ಗಾಂಧಿ, ಬೆಚ್ಚಿಬಿದ್ದ ಭದ್ರತಾ ಸಿಬ್ಬಂದಿ!

    ವಿಡಿಯೋ: ಕೆರೆಗೆ ಹಾರಿದ ರಾಹುಲ್ ಗಾಂಧಿ, ಬೆಚ್ಚಿಬಿದ್ದ ಭದ್ರತಾ ಸಿಬ್ಬಂದಿ!

    ಬಿಹಾರ ವಿಧಾನಸಭೆ ಚುನಾವಣೆ-2025ರ ಪ್ರಚಾರ ನಡೆಸುತ್ತಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಏಕಾಏಕಿ ಕೆರೆಗೆ ಹಾರಿದರು. ಇದರಿಂದಾಗಿ ಒಂದು ಕ್ಷಣ ರಾಹುಲ್ ಭದ್ರತಾ ಸಿಬ್ಬಂದಿ ಗಾಬರಿಗೊಂಡರು.

    ಭಾನುವಾರ ಬಿಹಾರದ ಬೇಗುಸರೈ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ನಡೆಸುವಾಗ ರಾಹುಲ್ ಗಾಂಧಿ ದೋಣಿಯಿಂದ ಕೆರೆಗೆ ಹಾರಿದರು. ಸಾಂಪ್ರದಾಯಿಕ ಮೀನುಗಾರಿಕೆ ಕುರಿತು ತಿಳಿಯಲು ಬೆಸ್ತರ ಜೊತೆ ತೆರಳುತ್ತಿದ್ದ ರಾಹುಲ್ ಏಕಾಏಕಿ ಕೆರೆಗೆ ಜಂಪ್ ಮಾಡಿದರು.

    ಈ ಸಂದರ್ಭದಲ್ಲಿ ಮಹಾಘಟಬಂಧನ್ ಮೈತ್ರಿಕೂಟದ ಡಿಸಿಎಂ ಅಭ್ಯರ್ಥಿ ಮತ್ತು ವಿಕಶೀಲ್ ಇನ್ಸಾನ್ ಪಾರ್ಟಿ (ವಿಐಪಿ) ಮುಖ್ಯಸ್ಥ ಮುಕೇಶ್ ಸಹಾನಿ ಮತ್ತು ಕಾಂಗ್ರೆಸ್ ನಾಯಕರಾದ ಕನ್ಹಯ್ಯ ಕುಮಾರ್ ಮುಂತಾದವರು ರಾಹುಲ್ ಗಾಂಧಿ ಜೊತೆಗಿದ್ದರು.

    ಕೆರೆಗೆ ಹಾರಿದ ರಾಹುಲ್ ವಿಡಿಯೋ

    ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಏಕಾಏಕಿ ಕೆರೆಗೆ ಹಾರಿ ಈಜಿಕೊಂಡು ಬೆಸ್ತರ ದೋಣಿಯನ್ನು ಹತ್ತಿದರು. ರಾಹುಲ್ ಏಕಾಏಕಿ ಕೆರೆಗೆ ಹಾರಿದ್ದರಿಂದ ಅವರ ಭದ್ರತಾ ಸಿಬ್ಬಂದಿ ಕ್ಷಣಕಾಲ ಗಾಬರಿಗೊಂಡರು. ಅವರಲ್ಲಿ ಕೆಲವರು ಸಹ ನೀರಿಗೆ ಹಾರಿದರು.

    ಚುನಾವಣಾ ಪ್ರಚಾರದ ವೇಳೆ ದೋಣಿಯಲ್ಲಿ ಬೆಸ್ತರ ಜೊತೆ ಕೆರೆಯ ಮಧ್ಯಕ್ಕೆ ರಾಹುಲ್ ಗಾಂಧಿ ತೆರಳಿದರು. ಆಗ ವಿಐಪಿ ಪಕ್ಷದ ಮುಖ್ಯಸ್ಥ ಮುಕೇಶ್ ಸಹಾನಿ ಶರ್ಟ್, ಪ್ಯಾಂಟ್ ತೆಗೆದು ನೀರಿಗೆ ಹಾರಿದರು.

    ಆದರೆ ರಾಹುಲ್ ಗಾಂಧಿ ಬಿಳಿ ಟೀ ಶರ್ಟ್, ಕಾರ್ಗೋ ಪ್ಯಾಂಟ್‌ನಲ್ಲಿಯೇ ನೀರಿಗೆ ಹಾರಿದರು. ಬಳಿಕ ರಾಹುಲ್ ಅಲ್ಲಿದ್ದ ಬೆಸ್ತರ ಜೊತೆ ಸೇರಿ ಮೀನು ಹಿಡಿದರು. ನಂತರ ಕ್ಷಣ ಹೊತ್ತು ಈಜಾಡಿದರು. ಬೆಸ್ತರ ಜೊತೆ ಫೋಟೋ ತೆಗೆಸಿಕೊಂಡರು.

    ಬಿಹಾರದಲ್ಲಿ ಬೆಸ್ತ ಸಮುದಾಯವನ್ನು ನಿಷಾದ್ ಎಂದು ಕರೆಯಲಾಗುತ್ತದೆ. ಶೇ 10ರಷ್ಟು ಮತಗಳನ್ನು ರಾಜ್ಯದಲ್ಲಿ ಸಮುದಾಯ ಹೊಂದಿದೆ. ಬಿಹಾರ ಚುನಾವಣೆಯಲ್ಲಿ ಸಮುದಾಯದ ಬೆಂಬಲ ಪಡೆಲು ರಾಹುಲ್ ಗಾಂಧಿ ಭಾನುವಾರ ಪ್ರಚಾರ ಕೈಗೊಂಡಿದ್ದರು.

    ಬಿಹಾರ ರಾಜ್ಯದ 243 ಸದಸ್ಯ ಬಲದ ವಿಧಾನಸಭೆ ಚುನಾವಣೆಗೆ ಮತದಾನ ನವೆಂಬರ್ 6, 11ರಂದು ನಡೆಯಲಿದೆ. ನವೆಂಬರ್ 14ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಮತ್ತು ಮಹಾಘಟಬಂಧನ್ ಎದುರಾಳಿಗಳು.

    ಕಾಂಗ್ರೆಸ್ ಮತ್ತು ಆರ್‌ಜೆಡಿ ನೇತೃತ್ವದಲ್ಲಿ ರಾಜ್ಯದಲ್ಲಿ ವಿರೋಧ ಪಕ್ಷಗಳ ಮಹಾಘಟಬಂಧನ್ ರಚನೆ ಮಾಡಿಕೊಂಡು ಚುನಾವಣೆ ಎದುರಿಸಲಾಗುತ್ತಿದೆ. ಆರ್‌ಜೆಡಿ 143, ಕಾಂಗ್ರೆಸ್ 61, ಸಿಪಿಐ(ಎಂಎಲ್‌) 20 ಕ್ಷೇತ್ರಗಳಲ್ಲಿ ಕಣಕ್ಕಿಳಿದಿವೆ. ಉಳಿದ ಕ್ಷೇತ್ರವನ್ನು ವಿಐಪಿ, ಸಿಪಿಐ(ಎಂ) ಪಕ್ಷಕ್ಕೆ ಬಿಟ್ಟುಕೊಡಲಾಗಿದೆ. ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಮುಖ್ಯಮಂತ್ರಿ ಅಭ್ಯರ್ಥಿ ಮತ್ತು ವಿಕಶೀಲ್ ಇನ್ಸಾನ್ ಪಾರ್ಟಿ (ವಿಐಪಿ) ಮುಖ್ಯಸ್ಥ ಮುಕೇಶ್ ಸಹಾನಿ ಅವರನ್ನು ಡಿಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ.

    ಬಿಹರ ವಿಧಾನಸಭೆ ಚುನಾವಣೆ ಪ್ರಚಾರ ಬಿರುಸಿನಿಂದ ಸಾಗಿದೆ. ಭಾನುವಾರ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರು ಬಿಜೆಪಿ ಮತ್ತು ಎನ್‌ಡಿಎ ಅಭ್ಯರ್ಥಿಗಳ ಪರವಾಗಿ ಪ್ರಚಾರವನ್ನು ನಡೆಸಿದ್ದಾರೆ. ಮಹಾಘಬಂಧನ್ ನಾಯಕರು ಸಹ ಚುನಾವಣಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.

    ಕಾಂಗ್ರೆಸ್ ಪಕ್ಷ ಬಿಜೆಪಿ ವಿರುದ್ಧ ಮತಗಳ್ಳತನ ಆರೋಪ ಮಾಡಿದ ಬಳಿಕ ನಡೆಯುತ್ತಿರುವ ಹಾಗೂ ಈ ವರ್ಷ ನಡೆಯಲಿರುವ ಕೊನೆಯ ರಾಜ್ಯದ ವಿಧಾನಸಭೆ ಚುನಾವಣೆ ಬಿಹಾರದ್ದು. ಆದ್ದರಿಂದ ಚುನಾವಣಾ ಫಲಿತಾಂಶದ ಮೇಲೆ ದೇಶವೇ ಕಣ್ಣಿಟ್ಟು ಕುಳಿತಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search