Tuesday, August 4, 2026
spot_img
More
    spot_img
    HomeEntertainmentIMDb ಯಿಂದ ಟಾಪ್ 10 ಜನಪ್ರಿಯ ತಾರೆಯರ ಪಟ್ಟಿ ಪ್ರಕಟ: ರಶ್ಮಿಕಾ, ರಿಷಬ್ ಶೆಟ್ಟಿ ಸೇರಿ...

    IMDb ಯಿಂದ ಟಾಪ್ 10 ಜನಪ್ರಿಯ ತಾರೆಯರ ಪಟ್ಟಿ ಪ್ರಕಟ: ರಶ್ಮಿಕಾ, ರಿಷಬ್ ಶೆಟ್ಟಿ ಸೇರಿ ಕನ್ನಡದ ಮೂವರಿಗೆ ಸ್ಥಾನ!

    ಚಲನಚಿತ್ರ ಮತ್ತು ಮನರಂಜನಾ ವಿಷಯಗಳ ಕುರಿತು ಮಾಹಿತಿ ನೀಡುವ ಪ್ರಸಿದ್ಧ ವೇದಿಕೆ IMDb, 2025ರ ತನ್ನ ಅತ್ಯಂತ ಜನಪ್ರಿಯ ಭಾರತೀಯ ತಾರೆಗಳ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ರಣಬೀರ್ ಕಪೂರ್ ಅವರಂತಹ ಸೂಪರ್‌ಸ್ಟಾರ್‌ಗಳನ್ನು ಹಿಂದಿಕ್ಕಿ, ‘ಸಾಯರಾ’ ಚಿತ್ರದ ನಟರಾದ ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ ರಾತ್ರೋರಾತ್ರಿ ತಾರಾಪಟ್ಟಕ್ಕೆ ಏರಿ ಅಗ್ರಸ್ಥಾನ ಗಳಿಸಿದ್ದಾರೆ,

    Advertisement

    ನಿರ್ದೇಶಕ ಮೋಹಿತ್ ಸೂರಿ ಅವರ ಚಿತ್ರದ ಭಾರಿ ಯಶಸ್ಸು ಈ ಹೊಸ ತಾರೆಗಳನ್ನು ಲಿಸ್ಟ್‌ಗೆ ಸೇರ್ಪಡೆಗೊಳಿಸಿದೆ. 250 ಮಿಲಿಯನ್‌ಗಿಂತಲೂ ಹೆಚ್ಚು ಮಾಸಿಕ ಸಂದರ್ಶಕರ ವೀಕ್ಷಣೆಗಳ ಆಧಾರದ ಮೇಲೆ ತಯಾರಿಸಲಾದ ಈ ಪಟ್ಟಿಯಲ್ಲಿ ಕನ್ನಡದ ಸ್ಟಾರ್ ರಿಷಬ್ ಶೆಟ್ಟಿ ಅವರು ಯಾವ ಸ್ಥಾನದಲ್ಲಿದ್ದಾರೆ ಎಂಬ ಕುತೂಹಲವಿದೆ.ಈ ಬಾರಿ ತೆಲುಗು ಮತ್ತು ತಮಿಳು ಚಿತ್ರರಂಗದ ಯಾವುದೇ ಪ್ರಮುಖ ಕಲಾವಿದರು ಟಾಪ್ 10ರಲ್ಲಿ ಸ್ಥಾನ ಪಡೆದಿಲ್ಲ.

    ಈ ಪಟ್ಟಿಯ ಮತ್ತೊಂದು ವಿಶೇಷ ಎಂದರೆ, ಕನ್ನಡ ಚಿತ್ರರಂಗದ ಮೂವರು ಪ್ರತಿಭಾವಂತರು ಸ್ಥಾನ ಗಳಿಸಿದ್ದಾರೆ. ಅವರು,ರಶ್ಮಿಕಾ ಮಂದಣ್ಣ,ರುಕ್ಮಿಣಿ ವಸಂತ್,ರಿಷಬ್ ಶೆಟ್ಟಿ,ಟಾಪ್ 5ರಲ್ಲಿ ಹೊಸ ಸ್ಟಾರ್ಸ್IMDb ಪ್ರತಿ ವರ್ಷ ಪೂರ್ತಿ ಹೆಚ್ಚು ಟ್ರೆಂಡ್ ಆದ ಮತ್ತು ಜನಪ್ರಿಯರಾದ ಸೆಲೆಬ್ರಿಟಿಗಳ ಆಧಾರದ ಮೇಲೆ ಈ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ.

    ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ’ಸಯ್ಯಾರ’ ಸಿನಿಮಾ ಮೂಲಕ ಯಶಸ್ಸು ಕಂಡ ಈ ಜೋಡಿಗೆ ಮೊದಲ ಮತ್ತು ಎರಡನೇ ಸ್ಥಾನ.

    ಮೂರನೇ ಸ್ಥಾನ ಆಮಿರ್ ಖಾನ್ಹಿರಿಯ ನಟ ಆಮಿರ್ ಖಾನ್

    ನಾಲ್ಕನೇ ಸ್ಥಾನ ಇಶಾನ್ ಖಟ್ಟರ್ಯುವ ನಟ ಇಶಾನ್ ಖಟ್ಟರ್ ಪಡೆದಿದ್ದಾರೆ.

    ಐದನೇ ಸ್ಥಾನ.ಲಕ್ಷ್ಯ’ಬ್ಯಾಡ್ಸ್ ಆಫ್ ಬಾಲಿವುಡ್’ ಮೂಲಕ ಮಿಂಚಿದ ಲಕ್ಷ್ಯಗೆ ಐದನೇ ಸ್ಥಾನ.

    ಆರನೇ ಸ್ಥಾನ: ನಟಿ ರಶ್ಮಿಕಾ ಮಂದಣ್ಣ

    ಏಳನೇ ಸ್ಥಾನ: ‘ಲೋಕಃ’ ಸಿನಿಮಾ ಮೂಲಕ ಜನಪ್ರಿಯತೆ ಗಳಿಸಿದ ಕಲ್ಯಾಣಿ ಪ್ರಿಯದರ್ಶನ್.

    ಎಂಟನೆಯ ಸ್ಥಾನ: ಗ್ಲಾಮರ್ ಮೂಲಕ ಗಮನ ಸೆಳೆದ ನಟಿ ತೃಪ್ತಿ ದಿಮ್ರಿ.

    ಒಂಬತ್ತನೇ ಸ್ಥಾನ: ಇತ್ತೀಚೆಗೆ ಯಶಸ್ಸು ಕಂಡ ‘ಕಾಂತಾರ: ಚಾಪ್ಟರ್ 1’ ನಟಿ, ಕನ್ನಡದ ರುಕ್ಮಿಣಿ ವಸಂತ್.

    ಹತ್ತನೇ ಸ್ಥಾನ: ‘ಕಾಂತಾರ: ಚಾಪ್ಟರ್ 1’ ಚಿತ್ರದ ನಿರ್ದೇಶಕ, ನಟ ರಿಷಬ್ ಶೆಟ್ಟಿ

    IMDb ಟಾಪ್ 10 ಅತ್ಯಂತ ಜನಪ್ರಿಯ ಭಾರತೀಯ ನಿರ್ದೇಶಕರ ಪಟ್ಟಿ ಹೀಗಿದೆ:

    ಮೋಹಿತ್ ಸೂರಿ

    ಆರ್ಯನ್ ಖಾನ್

    ಲೋಕೇಶ್ ಕನಗರಾಜ್

    ಅನುರಾಗ್ ಕಶ್ಯಪ್

    ಪೃಥ್ವಿರಾಜ್ ಸುಕುಮಾರನ್

    ಆರ್.ಎಸ್. ಪ್ರಸನ್ನ

    ಅನುರಾಗ್ ಬಸು

    ಡಾಮಿನಿಕ್ ಅರುಣ್‌

    ಲಕ್ಷ್ಮಣ್ ಉಟೇಕರ್

    ನೀರಜ್ ಘಯ್ವಾನ್‌

    ಚಿನ್ನ, ಬೆಳ್ಳಿ ದರ ಏರಿಕೆ;ಬೆಳ್ಳಿ ಕೆಜಿಗೆ ₹3,000 ಏರಿಕೆ! ಇಂದಿನ ದರಗಳ ಪಟ್ಟಿ ಇಲ್ಲಿದೆ 


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading