ತುಮಕೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಸ್ತಾಂತರದ ಕುರಿತ ಚರ್ಚೆಗಳು ಜೋರಾಗಿವೆ. ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಬಣಗಳ ನಡುವಿನ ಹೇಳಿಕೆಗಳ ಸಮರಕ್ಕೆ ಹೈಕಮಾಂಡ್ ಮಧ್ಯ ಪ್ರವೇಶ ಮಾಡಿ ಇಬ್ಬರೂ ನಾಯಕರನ್ನು ಭೇಟಿಯಾಗಿ ಚರ್ಚಿಸಿ ಎಂದು ನಿರ್ದೇಶಿಸಿತ್ತು.
ಅದರಂತೆ ಎರಡು ಬಾರಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಉಪಹಾರ ಸಭೆಯನ್ನು ನಡೆಸಿ ನಾವಿಬ್ಬರೂ ಯಾವತ್ತಿದ್ದರೂ ಒಂದೇ ಎಂಬ ಹೇಳಿಕೆ ನೀಡಿದ್ದಾರೆ. ಇಬ್ಬರೂ ಎಷ್ಟೇ ಒಗ್ಗಟ್ಟಿನಿಂದ ಇದ್ದೇವೆ ಎಂದರೂ ಹೈಕಮಾಂಡ್ ಕಡೆಯಿಂದ ಉಳಿದ ಅವಧಿಗೆ ಯಾರು ಮುಖ್ಯಮಂತ್ರಿ ಎಂಬ ಸ್ಪಷ್ಟನೆ ಸಿಗುವವರೆಗೂ ಈ ಮುಖ್ಯಮಂತ್ರಿ ಬದಲಾವಣೆ ಚರ್ಚೆ ನಿಲ್ಲುವಂತೆ ಕಾಣುತ್ತಿಲ್ಲ.
ಒಂದುವೇಳೆ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರೆ ಡಿಕೆ ಶಿವಕುಮಾರ್ ಮಾತ್ರವಲ್ಲದೇ ಕಾಂಗ್ರೆಸ್‌ನ ಸತೀಶ್ ಜಾರಕಿಹೊಳಿ ಹಾಗೂ ಪರಮೇಶ್ವರ್ ಸಹ ಸಿಎಂ ಆಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದವರಿದ್ದಾರೆ.
ಈ ಪೈಕಿ ಮಾಜಿ ಸಚಿವ ಕೆಎನ್ ರಾಜಣ್ಣ ಸಹ ಒಬ್ಬರಾಗಿದ್ದು, ನವೆಂಬರ್‌ನಲ್ಲಿ ಕ್ರಾಂತಿಯಾಗಲಿದೆ ಎಂದು ಮೊದಲಿಗೆ ಹೇಳಿದ್ದರು. ಮುಖ್ಯಮಂತ್ರಿ ಬದಲಾವಣೆ ಚರ್ಚೆಗಳ ಬಗ್ಗೆ ಅನೇಕ ಬಾರಿ ಮಾತನಾಡಿರುವ ಕೆಎನ್ ರಾಜಣ್ಣ ಇದೀಗ ಮತ್ತೊಮ್ಮೆ ಅದರ ಕುರಿತು ಪ್ರತಿಕ್ರಿಯಿಸಿದ್ದು , ಅನಿವಾರ್ಯವಾಗಿ ಏನಾದರೂ ಸಿದ್ದರಾಮಯ್ಯನವರ ಪದಚ್ಯುತಿ ಆದಾಗ ದಲಿತ ಮುಖ್ಯಮಂತ್ರಿ ಪರಮೇಶ್ವರ್ ಆಗಬೇಕು ಎನ್ನುವುದು ನನ್ನ ವಾದ ಎಂದರು.
ಇನ್ನು ತಮ್ಮ ಪುತ್ರ ರಾಜೇಂದ್ರ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರನ್ನು ಭೇಟಿಯಾಗಿದ್ದರ ಬಗ್ಗೆ ಮಾತನಾಡಿದ ರಾಜಣ್ಣ ಅದು ರಾಜಕೀಯ ಉದ್ದೇಶದ ಭೇಟಿಯಲ್ಲ, ಅವರು ಸಹಕಾರ ಸಚಿವರಾದ ಕಾರಣ ಆತನ ಸಂಸ್ಥೆಗಳ ಕುರಿತಾಗಿ ಏನಾದರೂ ಕೆಲಸವಿದ್ದಾಗ ಈ ರೀತಿ ಭೇಟಿ ಸಹಜ ಎಂದರು.
ಡಿಕೆ ಶಿವಕುಮಾರ್ ಇವತ್ತೇ ಮುಖ್ಯಮಂತ್ರಿಯಾಗಬೇಕು ಎಂದ ಕಾಂಗ್ರೆಸ್ ಮುಖಂಡ ಮಿಥುನ್ ರೈ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


