Monday, August 3, 2026
spot_img
More
    spot_img
    HomeCrimeಶಿವಮೊಗ್ಗ: ವೃದ್ಧೆಯ ಭೀಕರ ಕೊಲೆಗೆ ಮಗನೇ ಕಾರಣ ಎಂದ ಅಳಿಯ; 45 ದಿನಗಳ ಬಳಿಕ ಅಸಲಿ...

    ಶಿವಮೊಗ್ಗ: ವೃದ್ಧೆಯ ಭೀಕರ ಕೊಲೆಗೆ ಮಗನೇ ಕಾರಣ ಎಂದ ಅಳಿಯ; 45 ದಿನಗಳ ಬಳಿಕ ಅಸಲಿ ಕಥೆ ತೆರೆದಿಟ್ಟ ಪೊಲೀಸರು

    ಶಿವಮೊಗ್ಗ: ತಾಲೂಕಿನ ಕುಂಸಿ ಗ್ರಾಮದಲ್ಲಿ ಅಕ್ಟೋಬರ್ 2ರಂದು ಶಾಂತಿಧೂತ ಮಹಾತ್ಮ ಗಾಂಧಿ ಜನ್ಮದಿನಾಚರಣೆಯಂದೇ ಅಹಿಂಸೆ ಮೆರೆದಿದ್ದ ಕೊಲೆಗಾರರು 70 ವರ್ಷ ವಯಸ್ಸಿನ ವೃದ್ಧೆಯನ್ನು ಭೀಕರವಾಗಿ ಇರಿದು ಕೊಂದಿದ್ದರು.

    Advertisement

    ಬಸಮ್ಮ ಎಂಬ ವೃದ್ಧೆ ಒಬ್ಬರೇ ಕುಂಸಿ ಗ್ರಾಮದಲ್ಲಿ ವಾಸವಿದ್ದರು. ಹೀಗೆ ಮನೆಯಲ್ಲಿದ್ದ ಒಂಟಿ ವೃದ್ಧೆ ಕೊಲೆಯಾದ ಪ್ರಕರಣವನ್ನು ದಾಖಲಿಸಿಕೊಂಡ ಕೊಲೆಗಾರರು ಯಾರು ಎಂದು ಹುಡುಕಲಾರಂಭಿಸಿದರು. ಕೊಲೆಯಾದ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಸವಾಲು ಎದುರಾಗಿತ್ತು. ಕೊಲೆ ಮಾಡಿದವರು ರಕ್ತದ ಕಲೆಗಳನ್ನು ಒರೆಸಿ ನೆಲವನ್ನು ಸ್ವಚ್ಛಗೊಳಿಸಿ ಕುರುಹು ಬಿಡದೇ ತೆರಳಿದ್ದರು.

    ಈ ಸಮಯದಲ್ಲಿ ವೃದ್ಧೆಯ ಅಳಿಯ ಹಾಗೂ ಸಂಬಂಧಿಯಾದ ಈಶ್ವರಪ್ಪ ಪೊಲೀಸರಿಗೆ ತನ್ನ ಅತ್ತೆ ಬಸಮ್ಮ ಕೊಲೆ ಕುರಿತು ಆಕೆಯ ಪುತ್ರ ರಮೇಶ್ ವಿರುದ್ಧ ಅನುಮಾನವಿದೆ ಎಂದು ತಿಳಿಸಿದ್ದರು. ಕೂಡಲೇ ಬಸಮ್ಮನ ಮಗ ರಮೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರಿಗೆ ಆತನ ಪಾತ್ರ ಏನೂ ಇಲ್ಲ ಎಂಬುದು ತಿಳಿದುಬಂತು.

    ಇನ್ನು ಮನೆಯಲ್ಲಿ ರಕ್ತದ ಕಲೆಯನ್ನು ಸ್ವಚ್ಛ ಮಾಡಿದ್ದ ಕಾರಣ ಬೆಂಗಳೂರಿನಿಂದ ಫಾರೆನ್ಸಿಕ್ ತಂಡವನ್ನು ಕರೆಸಿಕೊಂಡ ಪೊಲೀಸರು ರಕ್ತದ ಕಲೆ ಹಾಗೂ ಕೆಲವೊಂದಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದರು. ಹಾಗೆಯೇ ಪಕ್ಕದ ಮನೆಯ ಯುವಕರಾದ ಅಮಾನ್ ಸಿಂಗ್ ಹಾಗೂ ವಿಕಾಸ್ ಅದೇ ದಿನ ವೃದ್ಧೆಯ ಮನೆಗೆ ಹೋಗಿದ್ದ ಬಗ್ಗೆ ಸಹ ಮಾಹಿತಿ ದೊರೆತಿತ್ತು.

    ಅವರಿಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಅಜ್ಜಿಯ ಮೈ ಮೇಲೆ ಇದ್ದ ಚಿನ್ನಾಭರಣಕ್ಕಾಗಿ ಕೊಲೆ ಮಾಡಿದ್ದಾಗಿ ಬಾಯಿಬಿಟ್ಟಿದ್ದಾರೆ. ಈ ಮೂಲಕ ಅಪರಾಧಿ ಸ್ಥಾನದಲ್ಲಿದ್ದ ಮಗ ರಮೇಶ್‌ ನಿಟ್ಟುಸಿರು ಬಿಟ್ಟಿದ್ದು, ನಿಜವಾದ ಅಪರಾಧಿಗಳನ್ನು ಪತ್ತೆಹಚ್ಚಿದ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ.

    ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆಯ ಚರ್ಚೆಯೇ ನಡೆಯುತ್ತಿಲ್ಲ: ಪರಮೇಶ್ವರ್


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading