Wednesday, September 2, 2026
spot_img
More
    spot_img
    HomeTop Storyನಾಳೆ ದೆಹಲಿ ಚುನಾವಣೆ, ಇಂದೇ ವೋಟ್‌ ಹಾಕಿದ್ದೇನೆ, ನನ್ನ ಕೈ ಬೆರಳಿನಲ್ಲಿ ಇಂಕ್‌ ಇದೆ ಎನ್ನುತ್ತಾ...

    ನಾಳೆ ದೆಹಲಿ ಚುನಾವಣೆ, ಇಂದೇ ವೋಟ್‌ ಹಾಕಿದ್ದೇನೆ, ನನ್ನ ಕೈ ಬೆರಳಿನಲ್ಲಿ ಇಂಕ್‌ ಇದೆ ಎನ್ನುತ್ತಾ ರಸ್ತೆಯಲ್ಲೇ ಓಡಾಡಿದ ಭೂಪ!

    ನವದೆಹಲಿ: ನಾಳೆ (ಫೆಬ್ರವರಿ 5) ದೆಹಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ಹಾಗೂ ಪೊಲೀಸ್‌ ಇಲಾಖೆ ಯಾವುದೇ ಅಕ್ರಮ ಹಾಗೂ ಅಹಿತರಕ ಘಟನೆಗಳು ಜರುಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಸಜ್ಜಾಗಿವೆ.

    Advertisement

    ಅತ್ತ ಕಳೆದ ಕೆಲ ದಿನಗಳಿಂದ ಬಿರುಸಿನ ಪ್ರಚಾರ ಮಾಡಿರುವ ರಾಜಕೀಯ ನಾಯಕರು ಮತದಾನಕ್ಕಾಗಿ ಕಾತರರಾಗಿ ಕಾಯುತ್ತಿದ್ದಾರೆ. ಹೀಗೆ ನಾಳಿನ ಪ್ರಮಖ ದಿನಕ್ಕೆ ಕ್ಷಣಗಣನೆ ಆರಂಭವಾಗಿರುವಾಗ ಗಾಂಧಿನಗರದ ಪೊಲೀಸ್‌ ಠಾಣೆಯ ಕಂಟ್ರೋಲ್‌ ರೂಂಗೆ ಕರೆಯೊಂದು ಬಂದಿದ್ದು, ಇಲ್ಲೊಬ್ಬ ವ್ಯಕ್ತಿಯ ಕೈಬೆರಳಿನಲ್ಲಿ ಇಂಕ್‌ ಇದೆ ಎಂದು ಹೇಳಿಕೊಳ್ಳುತ್ತಿದ್ದಾನೆ ಎಂದು ತಿಳಿಸಿದರು.

    ಕೂಡಲೇ ಗಾಬರಿಯಾಗಿ ಸ್ಥಳಕ್ಕಾಗಮಿಸಿ ವ್ಯಕ್ತಿಯ ವಿಚಾರಣೆ ನಡೆಸಿದಾಗ ಆತ 15 ಕ್ರಿಮಿನಲ್‌ ಕೇಸ್‌ ಹೊಂದಿರುವ ಕ್ರಿಮಿನಲ್‌ ಎಂಬುದು ತಿಳಿದು ಬಂದಿದೆ. ಹೌದು, 40 ವರ್ಷದ ಫಿರೋಜ್‌ ಖಾನ್‌ ಎಂಬಾತನೇ ಕೈ ಬೆರಳಿನಲ್ಲಿ ಇಂಕ್‌ ಇದೆ, ಮತ ಹಾಕಿದ್ದೇನೆ ಎಂದು ಹೇಳಿಕೊಂಡಿದ್ದವ.

    ಇನ್ನು ಪೊಲೀಸರು ಸ್ಥಳಕ್ಕಾಗಮಿಸಿದಾಗ ಫಿರೋಜ್‌ ಖಾನ್‌ ಅಮಲೇರಿದ ಸ್ಥಿತಿಯಲ್ಲಿದ್ದು, ಆತನ ಕೈ ಬೆರಳಿನಲ್ಲಿ ಯಾವುದೇ ಇಂಕ್‌ ಇಲ್ಲದಿರುವುದು ಪತ್ತೆಯಾಗಿದೆ. ಸುದ್ದಿ ವಾಹಿನಿಗಳಲ್ಲಿ ವೈರಲ್‌ ಆಗುವುದಕ್ಕೋಸ್ಕರ ಈ ರೀತಿ ಮಾಡಿದೆ ಎಂದು ಹೇಳಿಕೊಂಡಿದ್ದಾನೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading