ಬೆಂಗಳೂರು: ನಗರದ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿ ರಾಹುಲ್ ದ್ರಾವಿಡ್ ಕಾರಿಗೆ ಗೂಡ್ಸ್ ಆಟೊ ಡಿಕ್ಕಿ ಹೊಡೆದಿದ್ದು, ರಾಹುಲ್ ದ್ರಾವಿಡ್ ಹಾಗೂ ಗೂಡ್ಸ್ ಆಟೊ ಡ್ರೈವರ್‌ನ ಹತ್ತು ಸೆಕೆಂಡುಗಳ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದ್ರಾವಿಡ್ ಇಂಡಿಯನ್ ಎಕ್ಸ್‌ಪ್ರೆಸ್ ಸಿಗ್ನಲ್‌ನಿಂದ ಹೈಗ್ರೌಂಡ್ ಕಡೆ ಹೋಗುತ್ತಿದ್ದಾಗ ಜಾಮ್ ಇದ್ದ ಕಾರಣ ಕಾರಿಗೆ ಹಿಂಬದಿಯಿಂದ ಗೂಡ್ಸ್ ಆಟೊ ಡಿಕ್ಕಿ ಹೊಡೆದಿದೆ. ಈ ವೇಳೆ ದ್ರಾವಿಡ್ ಕಾರಿಗೆ ಏನಾದರೂ ಆಗಿದೆಯಾ ಎಂದು ಚೆಕ್ ಮಾಡುತ್ತಾ ಗೂಡ್ಸ್ ಡ್ರೈವರ್‌ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಹತ್ತು ಸೆಕೆಂಡ್‌ನ ವಿಡಿಯೊದಲ್ಲಿ ಆಟೊ ಚಾಲಕ ʼಸರ್ ಅದು ಫಾರ್ಚುನರ್ ಕಾರು ಸರ್ʼ ಎಂದು ಡಿಕ್ಕಿಗೆ ಕಾರಣ ಏನೆಂಬುದನ್ನು ತಿಳಿಸಿ ದ್ರಾವಿಡ್ ಅವರನ್ನು ಸಮಾಧಾನಪಡಿಸಲು ಯತ್ನಿಸುತ್ತಿದ್ದು, ದ್ರಾವಿಡ್ ಬೇಸರದಿಂದಲೇ ʼನಂಗೂ ಗೊತ್ತು..ʼ ಎಂದು ಹೇಳಿದ್ದಾರೆ. ಇಷ್ಟು ಮಾತ್ರ ವಿಡಿಯೊದಲ್ಲಿದ್ದು, ಇಬ್ಬರ ನಡುವೆ ನಡೆದ ಸಂಪೂರ್ಣ ಸಂಭಾಷಣೆಯ ವಿಡಿಯೊ ಬರಬೇಕಿದೆ. ಇನ್ನು ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


