Thursday, September 3, 2026
spot_img
More
    spot_img
    HomeTop Storyಹೈಕಮಾಂಡ್‌ ಸೂಚನೆ ಬೆನ್ನಲ್ಲೂ ಸಿಎಂ ಬದಲಾವಣೆ ಚರ್ಚೆ ಸರಿಯಲ್ಲ: ಹರಿಪ್ರಸಾದ್‌

    ಹೈಕಮಾಂಡ್‌ ಸೂಚನೆ ಬೆನ್ನಲ್ಲೂ ಸಿಎಂ ಬದಲಾವಣೆ ಚರ್ಚೆ ಸರಿಯಲ್ಲ: ಹರಿಪ್ರಸಾದ್‌

    ಬೆಂಗಳೂರು: ಹೈಕಮಾಂಡ್‌ ಹೇಳಿದ ಮೇಲೂ ಸಿಎಂ ಬದಲಾವಣೆ ಚರ್ಚೆ ಸರಿಯಲ್ಲ ಎಂದು ಕಾಂಗ್ರೆಸ್‌ ನಾಯಕ ಹರಿಪ್ರಸಾದ್‌ ತಿಳಿಸಿದ್ದಾರೆ.

    Advertisement

    ಈ ಬಗ್ಗೆ ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲ ಶಾಸಕರು ಡಿಕೆಶಿ ಸಿಎಂ ಆಗಬೇಕು ಎಂದು ಹೇಳುತ್ತಿದ್ದಾರೆ. ಶಾಸಕರು ಹೇಳಿರುವ ಬಗ್ಗೆ ನಾನು ಕಮೆಂಟ್‌ ಮಾಡೋಕೆ ಆಗಲ್ಲ. ಎಐಸಿಸಿ ಅಧ್ಯಕ್ಷರು ಹೇಳಿದ ಮೇಲೆ ಎಲ್ಲರೂ ಫಾಲೋ ಮಾಡಬೇಕು. ಹೀಗಿದ್ದರೂ ಮಾತನಾಡುತ್ತಿದ್ದಾರೆ ಅಂದರೆ ಈ ಬಗ್ಗೆ ನಾಯಕರೇ ತೀರ್ಮಾನ ಮಾಡಬೇಕು ಎಂದರು.

    ಇನ್ನು ಮುಂದುವರಿದು ಮಾತನಾಡಿದ ಅವರು, ಪಕ್ಷದ ಶಿಸ್ತು ಅನ್ನೋದು ಸಿದ್ದರಾಮಯ್ಯ, ಡಿಕೆಶಿ, ಹರಿಪ್ರಸಾದ್‌ ಎಂದು ಬರಲ್ಲ. ಅಶಿಸ್ತು ಅಂದ್ರೆ ಅದು ಅಶಿಸ್ತೇ. ಯಾರೇ ಅಶಿಸ್ತು ತೋರಿಸಿದ್ರೆ ಪಕ್ಷದಲ್ಲಿ ಶಿಸ್ತು ಸಮಿತಿ ಇದೆ. ಆ ಸಮಿತಿ ಅವರು ಯಾವುದು ಶಿಸ್ತು, ಯಾವುದು ಅಶಿಸ್ತು ಎಂದು ತೀರ್ಮಾನ ಮಾಡಬೇಕು. ಪಕ್ಷದಲ್ಲಿ ಅಶಿಸ್ತು ತೋರುವವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹಿಸಿದರು.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading