Saturday, September 5, 2026
spot_img
More
    spot_img
    HomeTop Storyಈ ವಿಚಾರದಲ್ಲಿ ಮೋದಿ ಅವಿದ್ಯಾವಂತ ಪಿಎಂ, ರಾಹುಲ್‌ ಬೆಸ್ಟ್;‌ ಚರ್ಚೆ ಹುಟ್ಟುಹಾಕಿದ 'AI' ಹೇಳಿಕೆಗಳು!

    ಈ ವಿಚಾರದಲ್ಲಿ ಮೋದಿ ಅವಿದ್ಯಾವಂತ ಪಿಎಂ, ರಾಹುಲ್‌ ಬೆಸ್ಟ್;‌ ಚರ್ಚೆ ಹುಟ್ಟುಹಾಕಿದ ‘AI’ ಹೇಳಿಕೆಗಳು!

    ಎಐ.. ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್..‌ ಪ್ರಸ್ತುತ ನಾವೆಲ್ಲಾ ಅನುಭವಿಸುತ್ತಿರುವ ಒಂದು ತಂತ್ರಜ್ಞಾನ ಕ್ರಾಂತಿ. ವಿಜ್ಞಾನ ಕ್ಷೇತ್ರದಲ್ಲಿ ಹಲವು ದಶಕಗಳಿಗೊಮ್ಮೆ ಆಗುವ ಬೃಹತ್‌ ಮಾರ್ಪಾಡು ಅಥವಾ ಬೆಳವಣಿಗೆಯೇ ಈ ಎಐ.

    Advertisement

    ಎಐ ಎಷ್ಟು ಮಹತ್ವದ್ದಾಗಿದೆ ಎಂದರೆ ಮೊನ್ನೆ ಮೊನ್ನೆಯಷ್ಟೇ ಚೀನಾದ ಡೀಪ್‌ಸೀಕ್‌ ಹಾಗೂ ಅಮೆರಿಕಾದ ಚಾಟ್‌ಜಿಪಿಟಿ ಹೋಲಿಸಿ ಇಡೀ ವಿಶ್ವವೇ ಚರ್ಚಿಸಿದ್ದು. ಈ ಎಐ ಪರಾಕ್ರಮ ಎಷ್ಟರ ಮಟ್ಟಿಗೆ ಇದೆ ಎಂದರೆ ಇದೇ ಚೀನಾದ ಹಲವು ಅಪ್ಲಿಕೇಶನ್‌ಗಳನ್ನು ಬ್ಯಾನ್‌ ಮಾಡಿ ಎಂದು ಈ ಹಿಂದೆ ಆಕ್ರೋಶ ಹೊರಹಾಕಿದ್ದವರೇ ಡೀಪ್‌ಸೀಕ್‌ ನಿಖರತೆ ಕಂಡು ದಂಗಾಗಿ ಹೋಗಿದ್ದರು.

    ಇದೇ ವೇಳೆ ವಿಶ್ವದ ದೊಡ್ಡ ದೇಶಗಳಾದ ಚೀನಾ ಡೀಪ್‌ಸೀಕ್‌ ರಚಿಸಿದರೆ, ಯುಎಸ್‌ ಚಾಟ್‌ಜಿಪಿಟಿ ರಚಿಸಿದೆ. ಅದೇ ರೀತಿ ಭಾರತ ಯಾವ ಎಐ ರಚಿಸಿದೆ ಎಂದು ಕಾಲೆಳೆದವರೂ ಉಂಟು.

    ಇಷ್ಟು ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿರುವ ಎಐಯನ್ನು ರಾಹುಲ್‌ ಗಾಂಧಿ ಸಹ ಸದನದಲ್ಲಿ ಉಲ್ಲೇಖಿಸಿದ್ದು, ಎಐ ಮಹತ್ವವನ್ನು ತಿಳಿಸಿದ್ದಾರೆ. ಎಐಗೆ ಸ್ಥಳೀಯ ದತ್ತಾಂಶಗಳೇ ಆಧಾರವಾಗಿದ್ದು, ಭಾರತ ಅದರ ಕಡೆ ಸರಿಯಾಗಿ ಗಮನ ಹರಿಸಬೇಕಿದೆ ಎಂದು ಹೇಳಿದರು. ಅಲ್ಲದೇ ಹಿಂದುಳಿದವರ ಪ್ರಗತಿಗೂ ಸಹ ಎಐ ಸಹಕಾರಿಯಾಗಲಿದೆ ಎಂದು ತಿಳಿಸಿದರು.

    ಹೀಗೆ ರಾಹುಲ್‌ ಗಾಂಧಿ ಎಐ ಕುರಿತು ಆಡಿದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದೇ ವೇಳೆ ಇದಕ್ಕೆ ಮೋದಿ ಎಐ ಕುರಿತು ನೀಡಿದ ಹೇಳಿಕೆಯ ವಿಡಿಯೊವನ್ನು ಎಡಿಟ್‌ ಮಾಡಿ ಟ್ರೋಲ್‌ ಅನ್ನೂ ಸಹ ಮಾಡಲಾಗುತ್ತಿದೆ.

    ಹೌದು, ಈ ಹಿಂದೆ ಮೋದಿ ಎಐ ಎಂದರೆ ನನಗೆ ʼಅಮೆರಿಕಾ – ಇಂಡಿಯಾʼ ಎಂದಿದ್ದು ಹಾಗೂ ಎಐ ಎಂದರೆ ʼಆಯಿʼ ಎಂದು ಹೇಳಿದ ವಿಡಿಯೊಗಳನ್ನು ಹಂಚಿಕೊಂಡು ಅದನ್ನು ರಾಹುಲ್‌ ಗಾಂಧಿ ಅವರು ಎಐ ಕುರಿತು ಆಡಿದ ಮಾತುಗಳ ಜತೆ ಎಡಿಟ್‌ ಮಾಡಿ ಒಂದು ಪ್ರಸ್ತುತ ಅವಶ್ಯ ತಂತ್ರಜ್ಞಾನದ ಕುರಿತು ಈ ಇಬ್ಬರಿಗೂ ಇರುವ ವಿಭಿನ್ನ ಜ್ಞಾನ ಹಾಗೂ ತಿಳುವಳಿಕೆ ನೋಡಿ ಎಂದು ಮೋದಿ ಕಾಲೆಳೆದಿದ್ದಾರೆ.

    ಇನ್ನೂ ಕೆಲವರು ಎಐ ಎಂದರೆ ವಿದ್ಯಾವಂತರ ಪ್ರಕಾರ ಏನು, ಅವಿದ್ಯಾವಂತರ ಪ್ರಕಾರ ಏನು ಎಂದು ಎರಡೂ ವಿಡಿಯೊಗಳನ್ನೂ ಶೇರ್‌ ಮಾಡಿದ್ದಾರೆ. ಅಲ್ಲದೇ ತಂತ್ರಜ್ಞಾನದ ಬಗ್ಗೆ ಅರಿತಿರುವ ವ್ಯಕ್ತಿ ವಿರೋಧ ಪಕ್ಷದಲ್ಲಿ ಕುಳಿತಿದ್ದಾರೆ, ಏನೂ ಅರಿಯದವರು ಪ್ರಧಾನಮಂತ್ರಿಯಾಗಿದ್ದಾರೆ ಎಂದು ಟ್ರೋಲ್‌ ಮಾಡಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading