ನವದೆಹಲಿ ;ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ.ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ ನಿವಾಸ್ ನಿಧಿ ಹೆಸರಿನಲ್ಲಿ ಅಂದರೆ ಪಿಎಂ ಸ್ವನಿಧಿ ಯೋಜನೆ ಅಡಿಯಲ್ಲಿ ಒಂದು ಯೋಜನೆಯನ್ನು ಪರಿಚಯಿಸಲಾಗಿದೆ.ನಿಮ್ಮ ಬಳಿ ಆಧಾರ ಕಾರ್ಡ್ ಇದ್ದರೆ ನಿಮ್ಮ ಆಧಾರ ಕಾರ್ಡ್ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಕೇಂದ್ರದ ಪಿಎಂ ಸ್ವನಿಧಿ (PM SVANidhi ) ಯೋಜನೆಯಿಂದ ಸುಲಭವಾಗಿ ಸಾಲ ಪಡೆಯಲು ಸಾಧ್ಯವಿದೆ.ಈ ಯೋಜನೆಯನ್ನು ಜೂನ್ 1, 2020ರಂದು ಪ್ರಾರಂಭಿಸಲಾಗಿದೆ. ಇದರ ಮೂಲಕ ಮಾರಾಟಗಾರರು ಯಾವುದೇ ಆಧಾರ ನೀಡುವ ಅಗತ್ಯ ಇಲ್ಲದೆ ಸಾಲಕ್ಕೆ ಅರ್ಜಿ ಸಲ್ಲಿಸಬಹುದು Online ಮೂಲಕ ಸ್ವಲ್ಪ ಹಣದ ಸಾಲ ಬೇಕಾದಾಗ PM SVANidhi ಯೋಜನೆಯ ಮೂಲಕ ಅರ್ಜಿ ಸಲ್ಲಿಸಬಹುದು. PM SVANidhi ಯೋಜನೆ ಮೂಲಕ ಗರಿಷ್ಠ 2.5 ಲಕ್ಷ ರೂಪಾಯಿ ವರೆಗೆ ಸಾಲ ಸೌಲಭ್ಯ ಲಭ್ಯವಿದೆ.ಇದು ಹಲವರಿಗೆ ಪ್ರಯೋಜನವಾಗಲಿದೆ. ಕಡಿಮೆ ಬಡ್ಡಿದರ, ಸುಲಭ ಸಾಲಗಳಿಂದ ಜನರು ಸಂಕಷ್ಟಗಳಿಂದ ಹೊರಬರಲು ಸಾಧ್ಯವಾಗುತ್ತದೆ. ಸ್ವನಿಧಿ ಯೋಜನೆ ಸಾಲ ಸೌಲಭ್ಯದಲ್ಲಿ ಸೀಮಿತ ಮೊತ್ತವಿತ್ತು.
ಆರಂಭದಲ್ಲಿ 10,000 ರೂಪಾಯಿ ಸಾಲ ಸೌಲಭ್ಯ ನೀಡಲಾಗುತ್ತಿತ್ತು. ಆದರೆ ಬಳಿಕ ಸ್ವನಿಧಿ ಸಾಲ ಮೊತ್ತವನ್ನು ಹೆಚ್ಚಿಸಲಾಗಿದೆ. ಇದೀಗ 2.5 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ಹಂತ ಹಂತವಾಗಿ ಈ ಮೊತ್ತ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ರಸ್ತೆಬದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು ನೀಡುವ ಈ ಯೋಜನೆಗೆ ‘ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿ (ಪಿಎಂ ಸ್ವನಿಧಿ) ಎಂದು ಹೆಸರಿಸಲಾಗಿ. ಈ ಯೋಜನೆಯಡಿ ಅರ್ಹರಾಗಿರುವವರು ಯಾವುದೇ ಅಡಮಾನವಿಲ್ಲದೆ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು.ನಿಮ್ಮ ಆಧಾರ್ ಕಾರ್ಡ್ ಅನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ, ಈ ಯೋಜನೆಯಡಿಯಲ್ಲಿ ನೀವು ಕನಿಷ್ಟ ದಾಖಲೆಗಳು ಮತ್ತು ಕಡಿಮೆ-ಬಡ್ಡಿ ದರಗಳೊಂದಿಗೆ ತ್ವರಿತವಾಗಿ ಹಣಕಾಸಿನ ಸಹಾಯವನ್ನು ಪಡೆಯಬಹುದು. ಈಗಲೇ ಅರ್ಜಿ ಸಲ್ಲಿಸಿ ಮತ್ತು ಪ್ರಧಾನಮಂತ್ರಿ ಸ್ವನಿಧಿ ಸಾಲ ಯೋಜನೆಯ ಲಾಭ ಪಡೆಯಿರಿ!

ಯೋಜನೆಯ ವಿವರ
ಪಿಎಂ ಸ್ವನಿಧಿ ಯೋಜನೆ ಪೂರ್ಣ ಹೆಸರು: ಪ್ರಧಾನ ಮಂತ್ರಿ ಬೀದಿ ಬದಿ ಆತ್ಮನಿರ್ಭರ ನಿಧಿ
ಆರಂಭ ದಿನಾಂಕ: 2020 ರ ಜೂನ್ 1
ಯಾವ ಸಚಿವಾಲಯ?: ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ
ಫಲಾನುಭವಿಗಳು: ನಗರ ಪ್ರದೇಶಗಳಲ್ಲಿ ಬೀದಿ ವ್ಯಾಪಾರಿಗಳು, ಅರೆನಗರ ಪ್ರದೇಶಗಳ ಬೀದಿ ವ್ಯಾಪಾರಿಗಳು, ಗ್ರಾಮೀಣ ಪ್ರದೇಶದ ಬೀದಿ ವ್ಯಾಪಾರಿಗಳು
ಕಡ್ಡಾಯ ದಾಖಲೆಗಳು: ಆಧಾರ್ ಕಾರ್ಡ್, ವೋಟರ್ ಐಡಿ ಕಾರ್ಡ್
ಅಧಿಕೃತ ವೆಬ್‌ಸೈಟ್; https://pmsvanidhi.mohua.gov.in/
ಯೋಜನೆಯ ಉದ್ದೇಶಗಳು
- ಬೀದಿಬದಿ ವ್ಯಾಪಾರಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವುದು
- ಸಾಲ ಮರುಪಾವತಿ ಆಧಾರದಲ್ಲಿ ಹೆಚ್ಚುವರಿ ಸಾಲ ನೀಡುವುದು
- ಡಿಜಿಟಲ್ ಮರುಪಾವತಿ ಆಯ್ಕೆ ಮಾಡುವವರಿಗೆ ಬಹುಮಾನ ನೀಡುವ ಮೂಲಕ ಡಿಜಿಟಲೀಕರಣಕ್ಕೆ ಉತ್ತೇಜನ
ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
ಸಾಲದಾತರ ವೆಬ್‌ಸೈಟ್‌ಗೆ ಹೋಗಿ ಅಥವಾ ಅವರ ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.
ನೀವು ಸಾಲಕ್ಕಾಗಿ ನೇರವಾಗಿ ಅರ್ಜಿ ಸಲ್ಲಿಸಬಹುದು
ಲೋನ್‌ಗಾಗಿ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ. ಅರ್ಹತೆಯನ್ನು ನಿರ್ಧರಿಸಲು ನೀವು ಸಾಲದಾತರಿಂದ ಒದಗಿಸಲಾದ ಅರ್ಹತಾ ಕ್ಯಾಲ್ಕುಲೇಟರ್ ಅನ್ನು ಬಳಸಬಹುದು.
ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಆದಾಯ ಪುರಾವೆಗಳನ್ನು ಅಪ್‌ಲೋಡ್ ಮಾಡಿ. ಓಟಿಪಿ ಆಧಾರಿತ ದೃಢೀಕರಣಕ್ಕಾಗಿ ನಿಮ್ಮ ಮೊಬೈಲ್ ಸಂಖ್ಯೆಯೊಂದಿಗೆ ನಿಮ್ಮ ಆಧಾರ್ ಅನ್ನು ಲಿಂಕ್ ಮಾಡಿರುವುದನ್ನು ಖಚಿತಪಡಿಸಿಕೊಳ್ಳಿ.
ನಿಮ್ಮ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿದ ನಂತರ, ಸಾಲವನ್ನು ಅನುಮೋದಿಸಲಾಗುತ್ತದೆ. ಸಾಲದಾತರನ್ನು ಅವಲಂಬಿಸಿ ವಿತರಣೆಯು 24 ರಿಂದ 48 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.
ಪಿಎಂ ಸ್ವನಿಧಿ ಸಾಲ ನೀಡುವ ಸಂಸ್ಥೆಗಳು
ಸ್ವ ಸಹಾಯ ಗುಂಪುಗಳು ಬ್ಯಾಂಕುಗಳು
ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳು
ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು
ಮೈಕ್ರೋ-ಫೈನಾನ್ಸ್ ಸಂಸ್ಥೆಗಳು
ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು
ಸಹಕಾರಿ ಬ್ಯಾಂಕುಗಳು
2 ಲಕ್ಷ ಸಾಲಕ್ಕೆ ಅರ್ಹತೆಯ ಮಾನದಂಡಗಳು
21 ರಿಂದ 60 ವರ್ಷ ವಯಸ್ಸಿನವರಾಗಿರಬೇಕು
ಸಾಲದಾತರಿಗೆ 15,000 ಮತ್ತು 25,000 ರೂಪಾಯಿ ನಡುವೆ ಕನಿಷ್ಠ ಮಾಸಿಕ ಆದಾಯದ ಅಗತ್ಯವಿದೆ.
ಸಂಬಳ ಪಡೆಯುವ ಮತ್ತು ಸ್ವಯಂ ಉದ್ಯೋಗಿ ವ್ಯಕ್ತಿಗಳಿಗೆ ಲಭ್ಯ
ಆಧಾರ್ ಕಾರ್ಡ್ ಮಾತ್ರ ಕಡ್ಡಾಯ
ಸಾಲವನ್ನು 12 ತಿಂಗಳೊಳಗೆ ಕಂತುಗಳಲ್ಲಿ ಮರುಪಾವತಿ ಮಾಡಬೇಕು
ಉತ್ತಮ ಕ್ರೆಡಿಟ್ ಸ್ಕೋರ್ ಇರಬೇಕು
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


