ಬೆಂಗಳೂರು: ಮೆಸೇಜ್ ಮೂಲಕ ಲಿಂಕ್‌ಗಳು ಹಾಗೂ ಎಪಿಕೆ ಫೈಲ್‌ಗಳನ್ನು ಶೇರ್ ಮಾಡಿ ಅದರಿಂದ ಹಣ ದೋಚಿದ ಹಲವಾರು ಉದಾಹರಣೆಗಳನ್ನು ಕಂಡಿದ್ದೇವೆ. ಆದರೆ ಈ ಪ್ರಕರಣದಲ್ಲಿ ಖದೀಮರು ಸಹಾಯವಾಣಿಯ ಸೋಗಿನಲ್ಲಿ ಕರೆ ಮಾಡಿ ಹಣ ಲಪಟಾಯಿಸಿದ್ದಾರೆ.
ವಂಚಕ ಬೆಂಗಳೂರಿನ ಗಿರಿನಗರದ ಮಹಿಳೆಯೊಬ್ಬರಿಗೆ ಕರೆ ಮಾಡಿ ತಾನು ಬ್ಯಾಂಕ್ ಸಹಾಯವಾಣಿಯಿಂದ ಕರೆ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾನೆ. ಇದನ್ನು ಮಹಿಳೆ ಪೂರ್ತಿ ನಂಬಿದ್ದನ್ನು ಅರಿತ ಆತ ʼನಿಮ್ಮ ಖಾತೆಯಿಂದ ಬೇರೆ ಖಾತೆಗೆ ಹಣ ವರ್ಗಾವಣೆಯಾಗಿದೆ. ಈ ವರ್ಗಾವಣೆಯನ್ನು ನೀವೇ ವರ್ಗಾಯಿಸಿದ್ದರೆ ಮೂರನ್ನು ಒತ್ತಿ, ಇಲ್ಲವಾದರೆ ಒಂದನ್ನು ಒತ್ತಿʼ ಎಂದು ಹೇಳಿದ್ದಾನೆ.
ಈ ರೀತಿಯ ಮಾತುಗಳನ್ನು ಕೇಳಿದ ಕೂಡಲೇ ಗಾಬರಿಗೊಂಡ 58 ವರ್ಷದ ಮಹಿಳೆ ಕೂಡಲೇ ಒಂದನ್ನು ಒತ್ತಿದ್ದಾರೆ. ಬಳಿಕ ನಿಮ್ಮ ಬ್ಯಾಂಕ್ ಮ್ಯಾನೇಜರ್ ಅನ್ನು ಸಂಪರ್ಕಿಸಿ ಎಂದು ಕರೆ ಕಟ್ ಮಾಡಿದ್ದಾನೆ. ಈ ಕರೆಯಿಂದ ಅನುಮಾನಗೊಂಡ ಮಹಿಳೆ ಬ್ಯಾಂಕ್‌ಗೆ ತೆರಳಿ ಚೆಕ್ ಮಾಡಿದಾಗ 2 ಲಕ್ಷ ಹಣ ಮಾಯವಾಗಿರುವುದು ತಿಳಿದುಬಂದಿದೆ. ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಘಟನೆಯ ಮೂಲಕ ಎಚ್ಚೆತ್ತುಕೊಳ್ಳಬೇಕಾದ ಗ್ರಾಹಕರು ಯಾರಾದರೂ ಸಹಾಯವಾಣಿಯಿಂದ ಕರೆ ಮಾಡಿ ಈ ರೀತಿ ಹಣ ಕಟ್ ಆಗಿದೆ ಎಂದರೆ ಮೊದಲು ಅಕೌಂಟ್‌ಗೆ ತೆರಳಿ ಬ್ಯಾಲೆನ್ಸ್ ಚೆಕ್ ಮಾಡಿ. ಇದರಿಂದ ಮೋಸಕ್ಕೆ ಸಿಲುಕದೇ ಪಾರಾಗಬಹುದಾಗಿದೆ. ಇನ್ನು ಬ್ಯಾಂಕ್ ಸಹಾಯವಾಣಿಯವರು ತಾವಾಗಿಯೇ ಯಾರಿಗೂ ಕರೆ ಮಾಡುವುದಿಲ್ಲ. ಹೀಗಾಗಿ ಸಹಾಯವಾಣಿ ಎಂದು ಹೇಳಿಕೊಂಡು ಕರೆ ಮಾಡಿದರೆ ಎಚ್ಚರವಹಿಸಿ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


