Friday, September 18, 2026
spot_img
More
    spot_img
    HomeLatest newsರವಿಕುಮಾರ್‌ಗೆ ಒಂದು ನ್ಯಾಯ, ಸಿದ್ದರಾಮಯ್ಯನವರಿಗೆ ಒಂದು ನೀತಿಯೇ; ವಿಜಯೇಂದ್ರ ಕಿಡಿ

    ರವಿಕುಮಾರ್‌ಗೆ ಒಂದು ನ್ಯಾಯ, ಸಿದ್ದರಾಮಯ್ಯನವರಿಗೆ ಒಂದು ನೀತಿಯೇ; ವಿಜಯೇಂದ್ರ ಕಿಡಿ

    ಬೆಂಗಳೂರು: ಬೆಳಗಾವಿಯ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಧಾರವಾಡ ಎಎಸ್‍ಪಿ ನಾರಾಯಣ ಬರಮನಿ ಅವರಿಗೆ ತುಂಬಿದ ಸಭೆಯಲ್ಲೇ ಸಿಎಂ ಸಿದ್ದರಾಮಯ್ಯ ಕೈ ಎತ್ತಿ ಹೊಡೆಯಲು ಹೋದಾಗ ಐಎಎಸ್ ಸಂಘ ಎಲ್ಲಿಗೆ ಹೋಗಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನೆ ಮಾಡಿದ್ದಾರೆ.

    Advertisement

    ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಆಕ್ಷೇಪಾರ್ಹ ಪದ ಬಳಸಿದ್ದಾರೆ ಎಂದು ಆರೋಪಿಸಿ ಕ್ರಮ ಜರುಗಿಸಲು ಸಿಎಂಗೆ ಐಎಎಸ್ ಸಂಘ ದೂರು ನೀಡಿರುವುದನ್ನು ತೀವ್ರವಾಗಿ ಆಕ್ಷೇಪಿಸಿದರು.

    ಧಾರವಾಡ ಎಎಸ್‍ಪಿ ನಾರಾಯಣ ಬರಮನಿಗೆ ಇದೇ ಸಿದ್ದರಾಮಯ್ಯನವರು ಸಭೆಯಲ್ಲೇ ಕೈ ಎತ್ತಿ ಹೊಡೆಯಲು ಹೋದಾಗ ಐಎಎಸ್ ಸಂಘದವರು ಏನು ಮಾಡುತ್ತಿದ್ದರು? ರವಿಕುಮಾರ್‌ಗೆ ಒಂದು ನ್ಯಾಯ, ಸಿದ್ದರಾಮಯ್ಯನವರಿಗೆ ಒಂದು ನೀತಿಯೇ ಎಂದು ತರಾಟೆಗೆ ತೆಗೆದುಕೊಂಡರು.

    ಎನ್.ರವಿಕುಮಾರ್ ಅವರ ಹೇಳಿಕೆ ಗಮನಿಸಿದ್ದೇನೆ. ಅದಕ್ಕೆ ಅವರು ಸ್ಪಷ್ಟನೆ ಕೂಡ ನೀಡಿದ್ದಾರೆ. ಅನಂತರ ಐಎಎಸ್ ಅಧಿಕಾರಿಗಳ ಸಂಘ ಸಿಎಂ ಭೇಟಿ ಮಾಡಿ ದೂರು ಕೊಟ್ಟಿರುವುದು, ಎಫ್‍ಐಆರ್ ದಾಖಲಾಗಿರುವುದು ಗಮನಕ್ಕೆ ಬಂದಿದೆ. ರವಿಕುಮಾರ್ ವಿಚಾರ ಒಂದು ಕಡೆ ಇರಲಿ, ಅದರ ಬಗ್ಗೆ ಮಾತಾಡಲು ನಾನು ಹೋಗುವುದಿಲ್ಲ ಎಂದರು.

    ಪ್ರಾರ್ಥನೆ ವಿಫಲವಾಗುವುದಿಲ್ಲ ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಬಹಳಷ್ಟು ಜನ ಪ್ರಯತ್ನ ಪ್ರಾರ್ಥನೆ ಮಾಡುತ್ತಿದ್ದಾರೆ. ಸುರ್ಜೆವಾಲ ಕರೆಸಿ ಗುದ್ದಲಿ ಪೂಜೆ ಕೂಡ ಮಾಡಿಸಿದ್ದಾರೆ. ಯಾರು ಮುಖ್ಯಮಂತ್ರಿ ಆಗುತ್ತಾರೆ ಎಂಬುದು ಮುಖ್ಯವಲ್ಲ. ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಎಂದು ಜನ ಛೀಮಾರಿ ಹಾಕುತ್ತಿದ್ದಾರೆ. ಸರ್ಕಾರಿ ನೌಕರರಿಗೂ ಸಂಬಳ ಕೊಡಲು ಆಗುತ್ತಿಲ್ಲ. ದರಿದ್ರ ಸರ್ಕಾರ ಜನಸಾಮಾನ್ಯರ ಪಾಲಿಗೆ ಬದುಕಿಲ್ಲ ಎಂದು ವಾಗ್ದಾಳಿ ನಡೆಸಿದರು.

    ಸಂಜೆ ತಿಂಡಿಗೆ ಸೂಪರ್ ಚಾಯ್ಸ್: ಬಾಯಲ್ಲಿ ಕರಗುವ ಆಲೂಗಡ್ಡೆ ಕಟ್ಲೆಟ್

    ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading