ದಿನಸಿ ವಸ್ತುಗಳಿಂದ ಹಿಡಿದು ಬಟ್ಟೆಗಳವರೆಗೆ ಎಲ್ಲವನ್ನೂ ಒಂದೇ ಸೂರಿನಡಿ ನೀಡುತ್ತದೆ ಡಿಮಾರ್ಟ್. ಇಲ್ಲಿ ಎಲ್ಲಾ ವಸ್ತುಗಳು MRPಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಅನೇಕ ಜನರು ಡಿ-ಮಾರ್ಟ್ ನಲ್ಲಿ ಶಾಪಿಂಗ್ ಮಾಡಲು ಇಷ್ಟಪಡುತ್ತಾರೆ. ಏಕೆಂದರೆ ಇದು ಬಜೆಟ್ ಸ್ನೇಹಿ. ಆದರೆ ನಿಮವೆ ಡಿ ಮಾರ್ಟ್ ಮಾಲೀಕ ಯಾರು ಗೊತ್ತೆ ?
ಡಿಮಾರ್ಟ್‌ನ ಮಾಲೀಕ ರಾಧಾಕಿಶನ್ ದಮಾನಿ. ಆರಂಭದಲ್ಲಿ, ದಮಾನಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರಾಗಿದ್ದರು. ಅವರು 1999 ರಲ್ಲಿ ತಮ್ಮದೇ ಆದ ವ್ಯವಹಾರವನ್ನು ಪ್ರಾರಂಭಿಸಿದರು. ಅವರ ಮೊದಲ ಫ್ರಾಂಚೈಸಿ ಮತ್ತು ನಂತರ ಬೋರ್‌ವೆಲ್ ವ್ಯವಹಾರ ವಿಫಲವಾಯಿತು, ಆದರೆ ಬಿಟ್ಟುಕೊಡದೆ, ಅವರು 2002 ರಲ್ಲಿ ಮುಂಬೈನಲ್ಲಿ ತಮ್ಮ ಮೊದಲ ಡಿಮಾರ್ಟ್ ಅಂಗಡಿಯನ್ನು ತೆರೆದರು.
ಅವರು ಕೇವಲ 12 ನೇ ತರಗತಿಯವರೆಗೆ ಓದಿದ್ದರೂ, ಅವರು ತಮ್ಮ ಬುದ್ಧಿವಂತಿಕೆ, ಕಠಿಣ ಪರಿಶ್ರಮ ಮತ್ತು ದೃಢನಿಶ್ಚಯದ ಮೂಲಕ ಡಿಮಾರ್ಟ್ ಅನ್ನು ಭಾರತದ ಅತಿದೊಡ್ಡ ಮತ್ತು ಅತ್ಯಂತ ಯಶಸ್ವಿ ಚಿಲ್ಲರೆ ವ್ಯಾಪಾರ ಬ್ರಾಂಡ್ ಆಗಿ ಮಾಡಿದರು.
DMart ಅಲ್ಲಿ ಸಾಮಾನುಗಳು ಸಿಗುತ್ತವೆ. MRP ಗಿಂತ ಕಡಿಮೆ ಬೆಲೆಗೆ ಸಿಗುತ್ತವೆ. ಅದಕ್ಕಾಗಿಯೇ ಜನರು DMart ಗೆ ಮುಗಿಬೀಳುತ್ತಾರೆ. ಡಿಮಾರ್ಟ್ 11 ರಾಜ್ಯಗಳಲ್ಲಿ 300 ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದೆ. ವಿಶೇಷವೆಂದರೆ, ಡಿಮಾರ್ಟ್ ಎಂದಿಗೂ ಬಾಡಿಗೆ ಜಾಗದಲ್ಲಿ ಅಂಗಡಿಯನ್ನು ತೆರೆಯುವುದಿಲ್ಲ. ಎಲ್ಲಾ ಮಳಿಗೆಗಳು ದಮಾನಿ ಅವರ ಸ್ವಂತ ಭೂಮಿಯಲ್ಲಿವೆ. ಇದು ಬಾಡಿಗೆ ವೆಚ್ಚವನ್ನು ಉಳಿಸುತ್ತದೆ ಮತ್ತು ಉಳಿತಾಯವು ರಿಯಾಯಿತಿಗಳ ರೂಪದಲ್ಲಿ ಗ್ರಾಹಕರಿಗೆ ನೇರವಾಗಿ ಹೋಗುತ್ತದೆ.
,ಕಾಮಿಡಿ ಕಿಲಾಡಿ ಚಂದ್ರಶೇಖರ ಸಿದ್ದಿ ಸಾವಿನ ಬಗ್ಗೆ ಪತ್ನಿ ಹೇಳಿದ್ದೇನು ?
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


