Saturday, November 7, 2026
spot_img
More
    spot_img
    HomeEntertainment2019ರ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ: ಸುದೀಪ್‌ಗೆ ಅತ್ಯುತ್ತಮ ನಟ ಪ್ರಶಸ್ತಿ; ಅತ್ಯುತ್ತಮ ಚಿತ್ರ ಯಾವುದು?...

    2019ರ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ: ಸುದೀಪ್‌ಗೆ ಅತ್ಯುತ್ತಮ ನಟ ಪ್ರಶಸ್ತಿ; ಅತ್ಯುತ್ತಮ ಚಿತ್ರ ಯಾವುದು? ಇಲ್ಲಿದೆ ಸಂಪೂರ್ಣ ಪಟ್ಟಿ

    ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಾಜ್ಯ ಸರ್ಕಾರ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ನಡೆಸಿದ್ದು, 2018 ಹಾಗೂ 2019ರಲ್ಲಿ ಬಿಡುಗಡೆಯಾದ ಚಿತ್ರಗಳಲ್ಲಿ ಅತ್ಯುತ್ತಮವಾದ ಚಿತ್ರಗಳು ಹಾಗೂ ಉತ್ತಮ ನಟನೆ ಮಾಡಿದ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಿದೆ.

    ಕಾರ್ಯಕ್ರಮ ಉದ್ಘಾಟನೆ ಮಾಡಿದ ಸಿದ್ದರಾಮಯ್ಯ ಇನ್ನುಮುಂದೆ ತಡವಾಗಿ ಪ್ರಶಸ್ತಿಗಳನ್ನು ನೀಡುವುದಿಲ್ಲ, ಆಯಾ ವರ್ಷಕ್ಕೆ ಆ ವರ್ಷವೇ ಪ್ರಶಸ್ತಿಗಳನ್ನು ನೀಡಲಿದ್ದೇವೆ ಎಂದು ಭರವಸೆಯನ್ನು ನೀಡಿದರು. ಅಲ್ಲದೇ ಈ ವೇಳೆ ತಮ್ಮ ನೆಚ್ಚಿನ ನಟ ರಾಜ್‌ಕುಮಾರ್‌ರನ್ನು ನೆನೆದ ಸಿದ್ದರಾಮಯ್ಯ ನಟನೆಂದರೆ ತೆರೆ ಮೇಲೆ ಹಾಗೂ ನಿಜ ಜೀವನದಲ್ಲಿ ಒಂದೇ ರೀತಿ ಇರಬೇಕು ಎಂದು ಅಣ್ಣಾವ್ರನ್ನು ಕೊಂಡಾಡಿದರು.

    ಇನ್ನು ಸಮಾರಂಭದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪೈಲ್ವಾನ್‌ ಚಿತ್ರದ ನಟನೆಗಾಗಿ ಸುದೀಪ್‌ ಪಾಲಾದರೆ, ತ್ರಯಂಬಕಂ ಚಿತ್ರದ ನಟನೆಗಾಗಿ ಅನುಪಮಾ ಗೌಡ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡರು. ಒಟ್ಟಾರೆ ಯಾವ ಕಲಾವಿದರು ಹಾಗೂ ಚಿತ್ರಗಳು ಪ್ರಶಸ್ತಿಯನ್ನು ಪಡೆದುಕೊಂಡವು ಎಂಬ ಪಟ್ಟಿ ಮುಂದಿದೆ.

    ಅತ್ಯುತ್ತಮ ನಟ: ಸುದೀಪ್ ( ಪೈಲ್ವಾನ್)

    ಅತ್ಯುತ್ತಮ ನಟಿ: ಅನುಪಮಾ ಗೌಡ ( ತ್ರಯಂಬಕಂ )

    ಪ್ರಥಮ ಅತ್ಯುತ್ತಮ ಚಿತ್ರ : ಮೋಹನದಾಸ

    ದ್ವಿತೀಯ ಅತ್ಯುತ್ತಮ ಚಿತ್ರ : ಲವ್‌ ಮಾಕ್ಟೇಲ್

    ತೃತೀಯ ಅತ್ಯುತ್ತಮ ಚಿತ್ರ : ಅರ್ಘ್ಯಂ

    ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ: ಕನ್ನೇರಿ

    ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ: ಇಂಡಿಯಾ v/s ಇಂಗ್ಲೆಂಡ್‌

    ಅತ್ಯುತ್ತಮ ಮಕ್ಕಳ ಚಿತ್ರ: ಎಲ್ಲಿ ಆಡೋದು ನಾವು ಎಲ್ಲಿ ಆಡೋದು

    ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ: ಗೋಪಾಲಗಾಂಧಿ

    ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ: ಟ್ರಿಬಲ್‌ ತಲಾರ್‌ (ಬ್ಯಾರಿ ಭಾಷೆ)

    ಅತ್ಯುತ್ತಮ ಪೋಷಕ ನಟ: ತಬಲಾ ನಾಣಿ (ಕೆಮಿಸ್ಟ್ರಿ ಆಫ್ ಕರಿಯಪ್ಪ)

    ಅತ್ಯುತ್ತಮ ಪೋಷಕ ನಟಿ: ಅನೂಷಾ ಕೃಷ್ಣ (ಬ್ರಾಹ್ಮಿಂ)

    ಅತ್ಯುತ್ತಮ ಚಿತ್ರಕತೆ: ಡಾರ್ಲಿಂಗ್‌ ಕೃಷ್ಣ- ಲವ್‌ ಮಾಕ್ಟೇಲ್

    ಅತ್ಯುತ್ತಮ ಸಂಭಾಷಣೆ: ಬರಗೂರು ರಾಮಚಂದ್ರಪ್ಪ (ಅಮೃತಮತಿ ಚಿತ್ರ)

    ಅತ್ಯುತ್ತಮ ಛಾಯಾಗ್ರಹಣ: ಜಿ.ಎಸ್‌ ಭಾಸ್ಕರ್‌

    ಅತ್ಯುತ್ತಮ ಸಂಗೀತ ನಿರ್ದೇಶನ: ವಿ. ಹರಿಕೃಷ್ಣ (ಯಜಮಾನ)

    ಅತ್ಯುತ್ತಮ ಸಂಕಲನ: ಜಿ. ಬಸವರಾಜ್‌ ಅರಸ್‌

    ಅತ್ಯುತ್ತಮ ಬಾಲ ನಟ: ಮಾಸ್ಟರ್‌ ಪ್ರೀತಂ ( ಮಿಂಚುಹುಳು)

    ಅತ್ಯುತ್ತಮ ಬಾಲ ನಟಿ: ಬೇಬಿ ವೈಷ್ಣವಿ ಅಡಿಗ (ಸುಗಂಧಿ)

    ಅತ್ಯುತ್ತಮ ಕಲಾ ನಿರ್ದೇಶನ: ಹೊಸ್ಮನೆ ಮೂರ್ತಿ (ಮೋಹನದಾಸ)

    ಅತ್ಯುತ್ತಮ ಗೀತ ರಚನೆ: ರಝಾಕ್‌ ಪುತ್ತೂರು (ಪೆನ್ಸಿಲ್‌ ಬಾಕ್ಸ್)‌

    ಅತ್ಯುತ್ತಮ ಹಿನ್ನೆಲೆ ಗಾಯಕ: ರಘು ದೀಕ್ಷಿತ್‌ ( ಲವ್‌ ಮಾಕ್ಟೇಲ್)‌

    ಅತ್ಯುತ್ತಮ ಹಿನ್ನೆಲೆ ಗಾಯಕಿ: ಜಯದೇವಿ ಜಿಂಗಮ ಶೆಟ್ಟಿ ( ರಾಗಭೈರವಿ ಚಿತ್ರ)

    ತೀರ್ಪುಗಾರರ ವಿಶೇಷ ಪ್ರಶಸ್ತಿ: ಅಮೃತಮತಿ ಚಿತ್ರ ಹಾಗೂ ತಮಟೆ ನರಸಿಂಹಯ್ಯ ಸಿನಿಮಾ

    ಅತ್ಯುತ್ತಮ ನಿರ್ವಾಹಕ: ಆರ್‌. ಗಂಗಾಧರ್‌ (ಮಕ್ಕಡ್‌ ಮನಸ್)

    ‌ಮೈಸೂರಿನ ಸಂಸ್ಕೃತಿಗೆ ಧಕ್ಕೆ ಆಗದಂತೆ ಗ್ರೇಟರ್‌ ಮೈಸೂರು ರಚನೆ: ಸಿದ್ದರಾಮಯ್ಯ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search