Friday, November 6, 2026
spot_img
More
    spot_img
    HomeSportsCricketಆರ್‌ಸಿಬಿ ಫೈನಲ್‌ಗಾಗಿ ಭಾರತಕ್ಕೆ ಓಡೋಡಿ ಬಂದಿದ್ದ ಎಬಿಡಿಗೆ ನಾಚಿಕೆಯಾಗಬೇಕು, ರೋಹಿತ್‌ ನೋಡಿ ಕಲಿ ಎಂದ ಆಫ್ರಿಕಾ...

    ಆರ್‌ಸಿಬಿ ಫೈನಲ್‌ಗಾಗಿ ಭಾರತಕ್ಕೆ ಓಡೋಡಿ ಬಂದಿದ್ದ ಎಬಿಡಿಗೆ ನಾಚಿಕೆಯಾಗಬೇಕು, ರೋಹಿತ್‌ ನೋಡಿ ಕಲಿ ಎಂದ ಆಫ್ರಿಕಾ ಮಹಿಳೆ; ವಿಡಿಯೊ

    ಬೆಂಗಳೂರು: ಮೊನ್ನೆ ( ನವೆಂಬರ್‌ 2 ) ನವಿಮುಂಬೈನ ಡಿವೈ ಪಾಟೀಲ್‌ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಐಸಿಸಿ ವನಿತೆಯರ ವಿಶ್ವಕಪ್‌ 2025ರ ಫೈನಲ್‌ ಪಂದ್ಯದಲ್ಲಿ ಭಾರತ 52 ರನ್‌ಗಳ ಭರ್ಜರಿ ಗೆಲುವನ್ನು ಕಾಣುವ ಮೂಲಕ ಇದೇ ಮೊದಲ ಬಾರಿಗೆ ವಿಶ್ವಕಪ್‌ ಟ್ರೋಫಿಯನ್ನು ತನ್ನದಾಗಿಸಿಕೊಂಡು ಐತಿಹಾಸಿಕ ದಾಖಲೆಯನ್ನು ಬರೆಯಿತು.

    ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 298 ರನ್‌ ಕಲೆಹಾಕಿ ದಕ್ಷಿಣ ಆಫ್ರಿಕಾಗೆ 299 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ದಕ್ಷಿಣ ಆಫ್ರಿಕಾ ದೀಪ್ತಿ ಶರ್ಮಾ ಬೌಲಿಂಗ್‌ ದಾಳಿಗೆ ತತ್ತರಿಸಿ 45.3 ಓವರ್‌ಗಳಲ್ಲಿ 246 ರನ್‌ಗಳಿಗೆ ಆಲ್‌ಔಟ್‌ ಆಯಿತು.

    ಹೀಗೆ ಭಾರತ ವನಿತೆಯರು ಇದೇ ಮೊದಲ ಬಾರಿಗೆ ಚೊಚ್ಚಲ ಏಕದಿನ ವಿಶ್ವಕಪ್‌ ಗೆದ್ದು ದಾಖಲೆ ಬರೆದರೆ, ಮತ್ತೊಂದೆಡೆ ಇದೇ ಮೊದಲ ಬಾರಿಗೆ ಫೈನಲ್‌ ತಲುಪಿ ಚೊಚ್ಚಲ ಟ್ರೋಫಿಯ ಕನಸು ಕಾಣುತ್ತಿದ್ದ ದಕ್ಷಿಣ ಆಫ್ರಿಕಾ ಸೋತು ನಿರಾಸೆ ಅನುಭವಿಸಿದೆ. ಹೀಗೆ ದಕ್ಷಿಣ ಆಫ್ರಿಕಾ ಸೋಲುತ್ತಿದ್ದಂತೆ ದಕ್ಷಿಣ ಆಫ್ರಿಕಾದ ಸೋಷಿಯಲ್‌ ಮೀಡಿಯಾ ಇನ್ಫ್ಲ್ಯುಯೆನ್ಸರ್‌ ಹಾಗೂ ಕ್ರಿಕೆಟ್‌ ಆಸಕ್ತೆ ವಿಡಿಯೊವೊಂದನ್ನು ಹಂಚಿಕೊಂಡು ದಕ್ಷಿಣ ಆಫ್ರಿಕಾ ಪುರುಷ ಕ್ರಿಕೆಟಿಗರು ಹಾಗೂ ಕ್ರೀಡಾ ಇಲಾಖೆ ವಿರುದ್ಧ ಕೆಂಡಕಾರಿದ್ದಾರೆ.

    ಹೌದು, ಇಂತಹ ಮಹಾನ್‌ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಮಹಿಳೆಯರು ಫೈನಲ್‌ ತಲುಪಿದರೂ ತಂಡದ ಯಾವೊಬ್ಬ ಪುರುಷ ಆಟಗಾರನೂ ಸಹ ಬೆಂಬಲವನ್ನು ವ್ಯಕ್ತಪಡಿಸಲಿಲ್ಲ. ಅದೇ ಭಾರತದ ತಂಡಕ್ಕೆ ರೋಹಿತ್‌ ಶರ್ಮಾ ಕ್ರೀಡಾಂಗಣಕ್ಕೆ ಬಂದು ಬೆಂಬಲಿಸಿದರು, ಸಚಿನ್‌ ಪಂದ್ಯ ಆರಂಭಕ್ಕೂ ಮುನ್ನ ಆಟಗಾರ್ತಿಯರಿಗೆ ಕೈಕುಲುಕಿ ಶುಭ ಕೋರಿದರು. ವಿವಿಎಸ್‌ ಲಕ್ಷ್ಮಣ್‌ ರೀತಿಯ ಆಟಗಾರರು ಶುಭ ಹಾರೈಸಿದರು.

    ಆದರೆ ದಕ್ಷಿಣ ಆಫ್ರಿಕಾದ ಆಟಗಾರರು ಮಾತ್ರ ಸೈಲೆಂಟ್‌ ಆಗಿದ್ದು, ನಿಮ್ಮ ಈ ನಡೆ ಆಟಗಾರ್ತಿಯರ ಆತ್ಮಸ್ಥೈರ್ಯವನ್ನು ಕುಗ್ಗಿಸಿದೆ ಎಂದು ಕಿಡಿಕಾರಿದ್ದಾರೆ. ಈ ಮೂಲಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಈ ಬಾರಿಯ ಐಪಿಎಲ್‌ ಫೈನಲ್ ಆಡುವುದನ್ನು ವೀಕ್ಷಿಸಲು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಓಡೋಡಿ ಬಂದಿದ್ದ ಎಬಿ ಡಿವಿಲಿಯರ್ಸ್‌ಗೆ ಈ ಮಹಿಳೆ ಬುದ್ದಿವಾದ ಹೇಳಿದ್ದು, ದೇಶಪ್ರೇಮ ಹಾಗೂ ಮಹಿಳಾ ಕ್ರೀಡಾ ಪ್ರಾಮುಖ್ಯತೆಯ ಪಾಠ ಮಾಡಿದ್ದಾರೆ.

    ಸವಿತಾ ಸಮಾಜದ ಬಗ್ಗೆ ನಾಲಿಗೆಹರಿಬಿಟ್ಟ ಸಿಟಿ ರವಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search