ಬೆಂಗಳೂರು: ಪುರುಷರ ಏಷ್ಯಾಕಪ್ ಬೆನ್ನಲ್ಲೇ ಯುವ ಕ್ರಿಕೆಟಿಗರ ಏಷ್ಯಾಕಪ್ ಟೂರ್ನಿಯೂ ಆಯೋಜನೆಗೊಂಡಿದ್ದು, ಇದೇ ನವೆಂಬರ್ 14ರಿಂದ ಟೂರ್ನಿ ಆರಂಭಗೊಳ್ಳಲಿದೆ. ಈ ಹಿಂದೆ ಎಸಿಸಿ ಎಮರ್ಜಿಂಗ್ ಪುರುಷರ ಏಷ್ಯಾಕಪ್ ಎಂದು ನಡೆಯುತ್ತಿದ್ದ ಟೂರ್ನಿಯನ್ನು ಈಗ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಎಂದು ಹೆಸರಿಸಲಾಗಿದ್ದು, ಟೂರ್ನಿಯಲ್ಲಿ ಪಾಲ್ಗೊಳ್ಳಲು ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿದೆ.
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ತನ್ನ ಅದ್ಭುತ ಆಟದಿಂದ ಎಲ್ಲರ ಗಮನ ಸೆಳೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಕೀಪರ್ ಜಿತೇಶ್ ಶರ್ಮಾ ನಾಯಕನ ಸ್ಥಾನವನ್ನು ಪಡೆದುಕೊಂಡಿದ್ದು, 14 ವರ್ಷದ ವೈಭವ್ ಸೂರ್ಯವಂಶಿ, ಕನ್ನಡಿಗ ವಿಜಯ್ಕುಮಾರ್ ವೈಶಾಖ್ ಸಹ ಸ್ಥಾನ ಪಡೆದುಕೊಂಡಿದ್ದಾರೆ.
ಪ್ರಕಟಗೊಂಡ ಭಾರತ ತಂಡ ಹೀಗಿದೆ: ಜಿತೇಶ್ (ನಾಯಕ), ಪ್ರಿಯಾಂಶ್ ಆರ್ಯ, ವೈಭವ್ ಸೂರ್ಯವಂಶಿ, ನೆಹಾಲ್, ನಮನ್ ಧೀರ್ (ಉಪನಾಯಕ), ಸೂರ್ಯನ್ಶ್ ಶೆಡ್ಗೆ, ರಾಮನ್ದೀಪ್, ಹರ್ಷ್ ದುಬೆ, ಅಶುತೋಷ್, ಯಶ್ ಠಾಕೂರ್, ಗುರ್ಜಾಪ್ನೀತ್, ವಿಜಯ್ ಕುಮಾರ್ ವೈಶಾಖ್, ಯುಧ್ವೀರ್ ಸಿಂಗ್, ಅಭಿಷೇಕ್ ಪೊರೇಲ್ (ವಿಕೆಟ್ ಕೀಪರ್), ಸುಯಶ್ ಶರ್ಮಾ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


