Sunday, November 8, 2026
spot_img
More
    spot_img
    HomeStateDistrictಬೆಂಗಳೂರು: ಕಸ ಎಸೆದು ಡಾನ್ಸ್‌ ಮಾಡಿದ್ದ ಯುವತಿ; ಸಿಸಿಟಿವಿಯಲ್ಲಿ ದೃಶ್ಯ ಸೆರೆ, ಸಿಕ್ಕಿತು ತಕ್ಕ ಪಾಠ

    ಬೆಂಗಳೂರು: ಕಸ ಎಸೆದು ಡಾನ್ಸ್‌ ಮಾಡಿದ್ದ ಯುವತಿ; ಸಿಸಿಟಿವಿಯಲ್ಲಿ ದೃಶ್ಯ ಸೆರೆ, ಸಿಕ್ಕಿತು ತಕ್ಕ ಪಾಠ

    ಬೆಂಗಳೂರು: ನಗರದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದವರನ್ನು ತಡೆದು ಸ್ವಚ್ಛತಾ ಕಾರ್ಯವನ್ನು ಮತ್ತಷ್ಟು ಸುಧಾರಿಸಲು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಹೊಸ ನಿಯಮವನ್ನು ಪರಿಚಯಿಸಿದ್ದು, ಕಸ ಎಸೆದವರ ಮನೆಗೆ ವಾಪಸ್‌ ಕಸ ತಂದು ಸುರಿಯಲಾಗುತ್ತಿದೆ.

    ಹೀಗಿದ್ದರೂ ಸಹ ಎಚ್ಚೆತ್ತುಕೊಳ್ಳದ ಕೆಲ ಕಿಡಿಗೇಡಿಗಳು ತಮ್ಮ ನೀಚ ಬುದ್ದಿಯನ್ನು ಮುಂದುವರಿಸಿದ್ದು, ಎಲ್ಲೆಂದರಲ್ಲಿ ಕಸ ಬಿಸಾಡಿ ಉದ್ಧಟತನ ಪ್ರದರ್ಶಿಸುತ್ತಿದ್ದಾರೆ.

    ಅದರಂತೆ ನಗರದ ಮೈಕೋ ಲೇಔಟ್‌ನ ಯುವತಿಯೊಬ್ಬಳು ತನ್ನ ಸ್ನೇಹಿತರ ಜತೆಗೂಡಿ ರಾಶಿ ರಾಶಿ ಕಸ ತಂದು ರಸ್ತೆ ಬದಿಗೆ ಹಾಕಿದ್ದಾಳೆ. ಇನ್ನು ಆ ಜಾಗದಲ್ಲಿ ಹೆಚ್ಚಾಗಿ ಕಸ ಸುರಿಯುತ್ತಿದ್ದ ಕಾರಣ ಸ್ಥಳೀಯರು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಜತೆ ಕೈಜೋಡಿಸಿ ಸಿಸಿಟಿವಿ ಅಳವಡಿಸಿದ್ದರು. ಈ ಸಿಸಿಟಿವಿಯಲ್ಲಿ ಯುವತಿಯ ಹುಚ್ಚಾಟ ಸೆರೆಯಾಗಿದ್ದು, ಕಸ ಎಸೆದ ಬಳಿಕ ರಸ್ತೆಯಲ್ಲಿಯೇ ಸ್ಟೆಪ್‌ ಹಾಕಿದ್ದಾಳೆ.

    ಈ ವಿಡಿಯೊ ವೀಕ್ಷಿಸಿದ ಮಾರ್ಷಲ್ಸ್‌ ಯುವತಿಯನ್ನು ಪತ್ತೆಹಚ್ಚಿ ಆಕೆಯ ಕೈಗೆ ದಂಡದ ರಸೀದಿ ನೀಡಿದ್ದಾರೆ. ಆಕೆಗೆ 1 ಸಾವಿರ ದಂಡ ವಿಧಿಸಿದ್ದಾರೆ. ಹೀಗೆ ಇರಲಾರದೇ ಕಸ ಹಾಕಿ ಡಾನ್ಸ್‌ ಮಾಡಿದ ಯುವತಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬೇಡವಾದ ರೀತಿ ಫೇಮಸ್‌ ಆಗುತ್ತಿದ್ದಾಳೆ. ಇದು ಜಿಬಿಎ ಮಾಡಿರುವ ನಿಯಮವನ್ನು ಗಂಭೀರವಾಗಿ ತೆಗೆದುಕೊಳ್ಳದ ಜನರಿಗೆ ಪಾಠವಾಗಿದೆ.

    ಶಿವ ನನ್ನ ಕೈನಲ್ಲಿ ಮಾಡಿಸಿದ್ದಾನೆ ಎಂದು ಚನ್ನಪಟ್ಟಣದಲ್ಲಿ ಸಂಪೂರ್ಣ ಹಣ ಹಾಕಿ ಬೃಹತ್‌ ದೇವಸ್ಥಾನ ನಿರ್ಮಿಸಿದ ಮುಸ್ಲಿಂ ನಾಯಕ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search