ರಾಮನಗರ: ಕೋಮುಗಲಭೆ ಎಬ್ಬಿಸಿ ಹಿಂದೂ – ಮುಸ್ಲಿಂ ಸೌಹಾರ್ದತೆ ಹಾಗೂ ಸಾಮರಸ್ಯ ಒಡೆಯುವ ಜನರ ನಡುವೆ ನಾವೆಲ್ಲರೂ ಒಂದು ಎಂಬ ಮನೋಭಾವವುಳ್ಳ ಮುಸ್ಲಿಂ ನಾಯಕರೊಬ್ಬರು ಜಿಲ್ಲೆಯ ಚನ್ನಪಟ್ಣಣ ತಾಲೂಕಿನ ಮಂಗಳವಾರಪೇಟೆಯಲ್ಲಿ ಹಿಂದೂ ದೇವಾಲಯವನ್ನು ಸಂಪೂರ್ಣ ಹಣ ದೇಣಿಗೆ ನೀಡಿ ನಿರ್ಮಿಸಿ ಮಾದರಿಯಾಗಿದ್ದಾರೆ.
ಸೈಯದ್ ಸದಾತ್‌ವುಲ್ಲಾ ಸಖಾಫ್ ಎಂಬ ಮುಸ್ಲಿಂ ನಾಯಕ ಈ ಕೆಲಸವನ್ನು ಮಾಡಿದ್ದಾರೆ. ಮಂಗಳವಾರಪೇಟೆಯಲ್ಲಿ ತಾವೇ ಸ್ವತಃ ದೇವಾಲಯ ನಿರ್ಮಿಸಬೇಕೆಂದು ತೀರ್ಮಾನಿಸಿ ಹಿಂದೂ ನಾಯಕರನ್ನು ಕೇಳಿದ್ದು, ಇದಕ್ಕೆ ಗ್ರಾಮಸ್ಥರು ಒಪ್ಪಿಗೆ ಸೂಚಿಸಿದ ನಂತರ ಹಣ ನೀಡಿ ಆರು ವರ್ಷಗಳಿಂದ ದೇವಾಲಯದ ನಿರ್ಮಾಣ ಕಾರ್ಯವನ್ನು ನೋಡಿಕೊಂಡಿದ್ದಾರೆ.
ಸುಮಾರು 3 ಕೋಟಿ ವೆಚ್ಚದಲ್ಲಿ ಬಸವೇಶ್ವರ ದೇವಾಲಯವನ್ನು ನಿರ್ಮಿಸಿದ್ದು, ಗ್ರಾಮಸ್ಥರು ಅವರ ಸಮ್ಮುಖದಲ್ಲೇ ಉದ್ಘಾಟನೆಯನ್ನು ನೆರವೇರಿಸಿದ್ದಾರೆ. ಈ ವೇಳೆ ಮಾತನಾಡಿದ ಸೈಯದ್ ಸದಾತ್‌ವುಲ್ಲಾ ಸಖಾಫ್ ತಮ್ಮ ತಂದೆ ಹಾಗೂ ತಾಯಿ ಎಲ್ಲರೂ ಕೂಡಿ ಬಾಳಬೇಕು ಎಂಬುದನ್ನು ಕಲಿಸಿಕೊಟ್ಟಿದ್ದು, ಅದರಂತೆ ತನಗೆ ದೇವಾಲಯ ನಿರ್ಮಿಸಬೇಕೆಂಬ ಆಸೆ ಇತ್ತು, ಈ ಹಿಂದೆಯೂ ಒಂದು ದೇವಾಲಯವನ್ನು ನಿರ್ಮಿಸಿದ್ದು ಈಗ ಮಂಗಳವಾರಪೇಟೆಯಲ್ಲಿ ದೇವಾಲಯ ಮಾಡಿದ್ದೇನೆ ಎಂದಿದ್ದಾರೆ. ಅಲ್ಲದೇ ಶಿವ ತನ್ನ ಕೈನಲ್ಲಿ ಈ ಕೆಲಸ ಮಾಡಿಸಿದ್ದಾನೆ ಎಂದಿರುವ ಇವರು ಕೋಮುಗಲಭೆ ಮಾಡುವವರಿಗೂ ಆ ಶಿವ ಒಟ್ಟಿಗೆ ಬಾಳುವ ಬುದ್ದಿಯನ್ನು ಕೊಡಲಿ ಎಂದಿದ್ದಾರೆ.
ಮೂತ್ರಪಿಂಡಕ್ಕೆ ಡೈಪರ್ ಅಪಾಯ: ವೈರಲ್ ವೀಡಿಯೊ ಕೇವಲ ವದಂತಿ! ತಜ್ಞರ ಸ್ಪಷ್ಟನೆ: ನಿಜವಾದ ಕಂಟಕ ಕಳಪೆ ನೈರ್ಮಲ್ಯ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


