ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಇತ್ತ ಹೊರಗೆ ಅವರ ನಟನೆಯ ದಿ ಡೆವಿಲ್ ಚಿತ್ರ ಬಿಡುಗಡೆಗೆ ದಿನಗಣನೆ ಆರಂಭಗೊಂಡಿದೆ.
ನೆಚ್ಚಿನ ನಟನಿಲ್ಲದೇ ಅಭಿಮಾನಿಗಳು ಚಿತ್ರ ನೋಡಲು ಸಜ್ಜಾಗಿದ್ದಾರೆ. ಅತ್ತ ತಮ್ಮ ಚಿತ್ರದ ಕಂಟೆಂಟ್ ಹಾಗೂ ದರ್ಶನ್ ಸ್ಟಾರ್‌ಡಂ ಮೇಲಿನ ನಂಬಿಕೆಯಿಂದ ಚಿತ್ರತಂಡ ಚಿತ್ರ ಬಿಡುಗಡೆಯ ಸಾಹಸಕ್ಕೆ ಮುಂದಾಗಿದೆ.
ಇನ್ನು ಮೊದಲಿಗೆ ಡಿಸೆಂಬರ್ 12ರಂದು ಬಿಡುಗಡೆ ಎಂದು ಘೋಷಿಸಿದ್ದ ಚಿತ್ರತಂಡ ನಂತರ ಅಭಿಮಾನಿಗಳ ಕ್ರೇಜ್ ಮೇರೆಗೆ ಒಂದು ದಿನ ಮುಂಚಿತವಾಗಿ ಅಂದರೆ ಡಿಸೆಂಬರ್ 11ರಂದೇ ಚಿತ್ರವನ್ನು ತೆರೆ ಮೇಲೆ ತರಲು ಮುಂದಾಗಿದೆ.
ಇನ್ನು ಈ ಹಿಂದೆ ಇದೇ ರೀತಿ ದರ್ಶನ್ ಸಾರಥಿ ಚಿತ್ರ ಬಿಡುಗಡೆ ಸಂದರ್ಭದಲ್ಲೂ ಸಹ ಜೈಲಿನಲ್ಲಿದ್ದರು. ಆ ಸಂದರ್ಭದಲ್ಲಿ ಸಾರಥಿ ಬೆಂಗಳೂರಿನ ಕೆಜಿ ರಸ್ತೆಯ ನರ್ತಕಿ ಚಿತ್ರಮಂದಿರದಲ್ಲಿ ಹಾಗೂ ರಾಜ್ಯಾದ್ಯಂತ ಬಿಡುಗಡೆಗೊಂಡಿತ್ತು. ಸಾರಥಿ ಬಿಡುಗಡೆಯಾಗಿದ್ದ ಅದೇ ನರ್ತಕಿ ಚಿತ್ರಮಂದಿರವೇ ಡೆವಿಲ್‌ಗೂ ಸಹ ಮುಖ್ಯಚಿತ್ರಮಂದಿರವಾಗಿದ್ದು, ಚಿತ್ರತಂಡ ಮೊದಲ ಹಂತದ ಚಿತ್ರಮಂದಿರಗಳ ಪಟ್ಟಿಯನ್ನು ಹಂಚಿಕೊಂಡಿದೆ.
ಇನ್ನು ಚಿತ್ರದ ಮುಂಗಡ ಬುಕಿಂಗ್ ಇದೇ ಶನಿವಾರ ( ಡಿಸೆಂಬರ್ 6 ) ಮಧ್ಯಾಹ್ನ 1 ಗಂಟೆ 5 ನಿಮಿಷಕ್ಕೆ ಬುಕ್‌ಮೈಶೋ ಹಾಗೂ ಡಿಸ್ಟ್ರಿಕ್ ಅಪ್ಲಿಕೇಶನ್‌ಗಳಲ್ಲಿ ಶುರುವಾಗಲಿದೆ.
ನಾಳೆ ( ಡಿಸೆಂಬರ್ 5 ) ಬೆಳಗ್ಗೆ 10.05ಕ್ಕೆ ಡೆವಿಲ್ ಚಿತ್ರತಂಡ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಿದ್ದು, ಚಿತ್ರದ ಮೇಲಿನ ಹೈಪ್ ಹೆಚ್ಚಿಸುವ ಕೆಲಸಕ್ಕೆ ಕೈಹಾಕಿದೆ.
ಬಾಡಿಗೆದಾರರಿಗೆ ಬಿಗ್ ರಿಲೀಫ್! ಇನ್ಮುಂದೆ 10 ತಿಂಗಳ ಠೇವಣಿ ಇಲ್ಲ, 2 ತಿಂಗಳ ಅಡ್ವಾನ್ಸ್ ಮಾತ್ರ: ಹೊಸ ನಿಯಮಗಳು ಜಾರಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


