Monday, November 2, 2026
spot_img
More
    spot_img
    HomeLatest newsಬಾಡಿಗೆದಾರರಿಗೆ ಬಿಗ್ ರಿಲೀಫ್! ಇನ್ಮುಂದೆ 10 ತಿಂಗಳ ಠೇವಣಿ ಇಲ್ಲ, 2 ತಿಂಗಳ ಅಡ್ವಾನ್ಸ್ ಮಾತ್ರ:...

    ಬಾಡಿಗೆದಾರರಿಗೆ ಬಿಗ್ ರಿಲೀಫ್! ಇನ್ಮುಂದೆ 10 ತಿಂಗಳ ಠೇವಣಿ ಇಲ್ಲ, 2 ತಿಂಗಳ ಅಡ್ವಾನ್ಸ್ ಮಾತ್ರ: ಹೊಸ ನಿಯಮಗಳು ಜಾರಿ

    ಭಾರತದ ಬಾಡಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳಾಗುತ್ತಿದ್ದು, ಇದು ಬೆಂಗಳೂರು ಮತ್ತು ಮುಂಬೈನಂತಹ ನಗರಗಳಲ್ಲಿ ಹೆಚ್ಚು ಪರಿಣಾಮ ಬೀರಲಿದೆ. ಈ ನಗರಗಳಲ್ಲಿ ಬಾಡಿಗೆದಾರರು ಅತಿ ಹೆಚ್ಚಿನ ಭದ್ರತಾ ಠೇವಣಿಗಳ (Security Deposits) ಕಾರಣದಿಂದ ತೀವ್ರವಾಗಿ ಪರದಾಡುತ್ತಿದ್ದರು.

    ಹೊಸ ‘ಹೋಮ್ ರೆಂಟಿಂಗ್ ರೂಲ್ಸ್ 2025’ (Home Rent Rules 2025) ಬಾಡಿಗೆದಾರರು ಮತ್ತು ಮನೆ ಮಾಲೀಕರಿಗಾಗಿ ಕಾಯುತ್ತಿದ್ದ ಪಾರದರ್ಶಕತೆ ಮತ್ತು ಸ್ಪಷ್ಟತೆಯನ್ನು ತಂದಿದೆ.ಈ ಹೊಸ ನಿಯಮಗಳು ಹಿಂದಿನ ‘ಮಾದರಿ ಬಾಡಿಗೆ ಕಾಯಿದೆ’ (Model Tenancy Act) ಯನ್ನು ಆಧರಿಸಿದ್ದು, ದೊಡ್ಡ ಮುಂಗಡ ಪಾವತಿಗಳನ್ನು ಕಡಿಮೆ ಮಾಡಲು ಮತ್ತು ಎಲ್ಲರಿಗೂ ಒಂದೇ ಸ್ಪಷ್ಟವಾದ ಸ್ವರೂಪವನ್ನು ತರಲು ಉದ್ದೇಶಿಸಿವೆ.

    ಮಾಲೀಕರು ಮತ್ತು ಬಾಡಿಗೆದಾರರ ಕರ್ತವ್ಯಗಳನ್ನು ನಿರ್ದಿಷ್ಟಪಡಿಸುವ ಈ ನಿಯಮಗಳಲ್ಲಿನ ಪ್ರಮುಖ ಬದಲಾವಣೆಗಳು ಇಲ್ಲಿವೆ:

    1. ಠೇವಣಿಗೆ ಕಟ್ಟುನಿಟ್ಟು: 2 ತಿಂಗಳ ಬಾಡಿಗೆ ಮಾತ್ರ!

    ಹಳೆಯ ನಿಯಮ: 10 ತಿಂಗಳ ಬಾಡಿಗೆಯಷ್ಟು ಅಡ್ವಾನ್ಸ್ ಪಡೆಯುವ ಪದ್ಧತಿ ಇತ್ತು.ಇನ್ಮುಂದೆ, ಮನೆ ಮಾಲೀಕರು ಗರಿಷ್ಠ 2 ತಿಂಗಳ ಬಾಡಿಗೆಯ ಹಣವನ್ನು ಮಾತ್ರ ಮುಂಗಡವಾಗಿ (ಸೆಕ್ಯೂರಿಟಿ ಡೆಪಾಸಿಟ್) ಪಡೆಯಲು ಅವಕಾಶವಿದೆ.

    1. ಕರಾರು ಕಡ್ಡಾಯವಾಗಿ ನೊಂದಣಿಗೊಂಡಿರಬೇಕು

    ಮನೆ ಬಾಡಿಗೆಗೆ ಕೊಡುವಾಗ ಮಾಡಿಕೊಳ್ಳುವ ರೆಂಟಲ್ ಅಗ್ರೀಮೆಂಟ್ ಅನ್ನು ಕಡ್ಡಾಯವಾಗಿ ಅಧಿಕೃತವಾಗಿ ನೋಂದಾಯಿಸಬೇಕು.ಇದನ್ನು ನೋಂದಣಿ ಕಚೇರಿಯಲ್ಲಿ ಅಥವಾ ಆನ್‌ಲೈನ್‌ನಲ್ಲೇ ಮಾಡಬಹುದು.

    ಅಗ್ರೀಮೆಂಟ್ ಅನ್ನು ರಿಜಿಸ್ಟರ್ ಮಾಡದಿದ್ದರೆ, ₹5,000 ದಂಡ ಕಟ್ಟಬೇಕಾಗುತ್ತದೆ.

    ಏಕರೂಪದ ಕರಾರು: ಒಪ್ಪಂದದಲ್ಲಿ ಯಾವ ಅಂಶಗಳಿರಬೇಕು, ಇರಬಾರದು ಎಂಬುದಕ್ಕೆ ಸರ್ಕಾರವೇ ಸ್ಟ್ಯಾಂಡರ್ಡ್ ಟೆಂಪ್ಲೇಟ್ ನೀಡಿದೆ. ಇದರಿಂದ ಮಾಲೀಕರು ಅನಗತ್ಯ ಷರತ್ತುಗಳನ್ನು ಸೇರಿಸಲು ಸಾಧ್ಯವಿಲ್ಲ.

    1. ಬಾಡಿಗೆ ಏರಿಕೆ ನಿಯಮಗಳು,ಮಾಲೀಕರು ಮುಂದಿನ ತಿಂಗಳಿನಿಂದಲೇ ಬಾಡಿಗೆ ಹೆಚ್ಚು ಮಾಡಿ ಎಂದು ದಿಢೀರ್ ಡಿಮ್ಯಾಂಡ್ ಮಾಡುವಂತಿಲ್ಲ.

    ನೋಟೀಸ್ ಕಡ್ಡಾಯ: ಬಾಡಿಗೆ ಹೆಚ್ಚಿಸುವುದಿದ್ದರೆ, 3 ತಿಂಗಳು ಮುಂಚಿತವಾಗಿಯೇ ಬಾಡಿಗೆದಾರರಿಗೆ ನೋಟಿಸ್ ನೀಡಿ ತಿಳಿಸಬೇಕು. ಒಂದು ವರ್ಷದಲ್ಲಿ ಒಂದು ಬಾರಿ ಮಾತ್ರ ಬಾಡಿಗೆ ಹೆಚ್ಚಿಸಲು ಅವಕಾಶವಿದೆ.

    1. ಡಿಜಿಟಲ್ ಪಾವತಿ ಕಡ್ಡಾಯ
      ₹5,000 ಮೇಲ್ಪಟ್ಟರೆ: ಮನೆ ಬಾಡಿಗೆ ತಿಂಗಳಿಗೆ ₹5,000 ರೂಪಾಯಿಗಿಂತ ಹೆಚ್ಚಿದ್ದರೆ, ಅದನ್ನು ನಗದು (ಕ್ಯಾಷ್) ಬದಲಿಗೆ ಯುಪಿಐ (UPI) ಇತ್ಯಾದಿ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕವೇ ಪಾವತಿಸಬೇಕು.

    TDS ಕಡಿತ: ತಿಂಗಳಿಗೆ ಮನೆ ಬಾಡಿಗೆ ₹50,000 ಕ್ಕಿಂತ ಹೆಚ್ಚಿದ್ದರೆ, ತೆರಿಗೆ ನಿಯಮಗಳ ಪ್ರಕಾರ ಟಿಡಿಎಸ್ (TDS) ಕಡಿತ ಆಗುತ್ತದೆ.

    ಬಾಡಿಗೆ ವ್ಯಾಜ್ಯಕ್ಕೆ ಬೇಗ ಪರಿಹಾರ;ಬಾಡಿಗೆ ಸಂಬಂಧಿಸಿದ ಜಗಳಗಳು ಮತ್ತು ವ್ಯಾಜ್ಯಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಲು ಸರ್ಕಾರ ವ್ಯವಸ್ಥೆ ಮಾಡಿದೆ.

      ಇದಕ್ಕಾಗಿ ವಿಶೇಷ ರೆಂಟ್ ಕೋರ್ಟ್​ಗಳು ಮತ್ತು ಟ್ರಿಬ್ಯುನಲ್​ಗಳನ್ನು ನೇಮಿಸಲಾಗಿದೆ.ಇಲ್ಲಿ ಬಾಡಿಗೆ ವ್ಯಾಜ್ಯ ಪ್ರಕರಣವನ್ನು ಕೇವಲ 60 ದಿನಗಳೊಳಗೆ ಇತ್ಯರ್ಥಪಡಿಸಲಾಗುತ್ತದೆ.

      ರೈಲ್ವೆ ಪ್ರಯಾಣಿಕರಿಗೆ ಮಹತ್ವದ ಸುದ್ದಿ: ಕೌಂಟರ್‌ನಲ್ಲಿ ತತ್ಕಾಲ್‌ ಟಿಕೆಟ್‌ ಬುಕಿಂಗ್‌ಗೆ ಇನ್ನು ‘OTP’ ಕಡ್ಡಾಯ!


      Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

      Subscribe to get the latest posts sent to your email.

      LEAVE A REPLY

      Related News

      ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

      ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

      ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

      ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

      Most Popular

      Recent Comments

      Home
      Play
      Notification
      Search