Monday, November 2, 2026
spot_img
More
    spot_img
    HomeInternationalಅಮೆರಿಕಾದ ವಾಯುಪಡೆಯ ಶಕ್ತಿಶಾಲಿ ಯುದ್ಧ ವಿಮಾನ ಥಂಡರ್‌ಬರ್ಡ್ ಪತನ

    ಅಮೆರಿಕಾದ ವಾಯುಪಡೆಯ ಶಕ್ತಿಶಾಲಿ ಯುದ್ಧ ವಿಮಾನ ಥಂಡರ್‌ಬರ್ಡ್ ಪತನ

    ವಾಷಿಂಗ್ಟನ್: ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ತರಬೇತಿ ನಡೆಸುತ್ತಿದ್ದ ವೇಳೆ ಅಮೆರಿಕ ವಾಯುಪಡೆಯ ಶಕ್ತಿಶಾಲಿ ಅಸ್ತ್ರ ಥಂಡರ್‍ಬರ್ಡ್ ಎಫ್-16ಸಿ ಯುದ್ಧವಿಮಾನ ಪತನಗೊಂಡಿದೆ.

    ಲಾಸ್ ಏಂಜಲೀಸ್‍ನ ಉತ್ತರಕ್ಕೆ ಸುಮಾರು 290 ಕಿಮೀ ದೂರದಲ್ಲಿರುವ ಮೊಜಾವೆ ಮರುಭೂಮಿ ಪ್ರದೇಶದಲ್ಲಿ ತರಬೇತಿ ನಡೆಸುತ್ತಿದ್ದ ವೇಳೆ ಎಫ್-16ಸಿ ಜೆಟ್ ಪತನಗೊಂಡಿದೆ. ಇಬ್ಬರು ಪೈಲಟ್‍ಗಳು ಸುರಕ್ಷಿತವಾಗಿ ಎಜೆಕ್ಟ್ ಆಗಿದ್ದಾರೆ ಎಂದು ಯುಎಸ್ ವಾಯುಪಡೆ ತಿಳಿಸಿದೆ.

    ಏರ್ ಚೀಫ್ ಮಾರ್ಷಲ್ ಅವರು ಬೆಳಗ್ಗೆ 10:45ರ ಸುಮಾರಿಗೆ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಮಾಹಿತಿ ನೀಡಿದ್ದಾರೆ.

    ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ತಾಂತ್ರಿಕ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲಿಸುತ್ತಿವೆ ಎಂದು ತಿಳಿಸಿದ್ದಾರೆ.

    ಯುದ್ಧವಿಮಾನ ಪತನಗೊಂಡ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. 24 ಸೆಕೆಂಡುಗಳ ವಿಡಿಯೋದಲ್ಲಿ ಒಂದೆಡೆ ಯುದ್ಧವಿಮಾನ ಪತನಗೊಂಡು ಸಂಪೂರ್ಣ ಬೆಂಕಿಗೆ ಆಹುತಿಯಾಗಿರುದು ಮತ್ತೊಂದು ಕಡೆ ಇಬ್ಬರು ಪೈಲಟ್ ಸುರಕ್ಷಿತವಾಗಿ ಎಜೆಕ್ಟ್ ಆಗಿರುವುದು ಕಂಡುಬಂದಿದೆ.

    ಮೂಲಗಳ ಪ್ರಕಾರ, ಪೈಲಟ್‍ಗಳು ಎಜೆಕ್ಟ್ ಆಗುವ ಸಂದರ್ಭದಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ.1953 ರಲ್ಲಿ ರಚನೆಯಾದ ಥಂಡರ್‍ಬರ್ಡ್ ಲಾಸ್ ವೇಗಾಸ್ ಬಳಿಯ ನೆಲ್ಲಿಸ್ ವಾಯುನೆಲೆಯಲ್ಲಿ ತರಬೇತಿ ನಡೆಸುತ್ತಾ ಬಂದಿವೆ.

    ಬಾಡಿಗೆದಾರರಿಗೆ ಬಿಗ್ ರಿಲೀಫ್! ಇನ್ಮುಂದೆ 10 ತಿಂಗಳ ಠೇವಣಿ ಇಲ್ಲ, 2 ತಿಂಗಳ ಅಡ್ವಾನ್ಸ್ ಮಾತ್ರ: ಹೊಸ ನಿಯಮಗಳು ಜಾರಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search