Monday, November 2, 2026
spot_img
More
    spot_img
    HomeSportsCricketಆಶಸ್ 2ನೇ ಟೆಸ್ಟ್: ಪ್ರಥಮ ಶತಕ ಬಾರಿಸಿದ ರೂಟ್; ಆಸ್ಟ್ರೇಲಿಯನ್ನರ ಪ್ಲಾನ್ ಹಾಳುಮಾಡಿದ ಆ ಇಬ್ಬರ...

    ಆಶಸ್ 2ನೇ ಟೆಸ್ಟ್: ಪ್ರಥಮ ಶತಕ ಬಾರಿಸಿದ ರೂಟ್; ಆಸ್ಟ್ರೇಲಿಯನ್ನರ ಪ್ಲಾನ್ ಹಾಳುಮಾಡಿದ ಆ ಇಬ್ಬರ ಪಾರ್ಟ್ನರ್‌ಶಿಪ್

    ಬ್ರಿಸ್ಬೇನ್: ಗಬ್ಬಾದಲ್ಲಿ ಪ್ರತಿಷ್ಟಿತ ಆಶಸ್ ಟೆಸ್ಟ್ ಸರಣಿಯ ಎರಡನೇ ಪಂದ್ಯ ಆರಂಭವಾಗಿದ್ದು, ಮೊದಲ ದಿನದಾಟದಂತ್ಯಕ್ಕೆ ಇಂಗ್ಲೆಂಡ್ 9 ವಿಕೆಟ್ ನಷ್ಟಕ್ಕೆ 325 ರನ್ ಕಲೆಹಾಕಿ ಎರಡನೇ ದಿನದಾಟ ಆರಂಭಿಸಲು ಕಾದಿದೆ.

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ಕೇವಲ 5 ರನ್‌ಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಮಿಚೆಲ್ ಸ್ಟಾರ್ಕ್ ಬೆನ್ ಡಕೆಟ್ ಹಾಊ ಓಲಿ ಪೋಪ್ ಇಬ್ಬರನ್ನೂ ಶೂನ್ಯಕ್ಕೆ ಪೆವಿಲಿಯನ್ ಸೇರಿಸಿದರು. ಈ ಸಂದರ್ಭದಲ್ಲಿ ಒಂದಾದ ಆರಂಭಿಕ ಜಾಕ್ ಕ್ರಾವ್ಲಿ ಹಾಗೂ ಜೋ ರೂಟ್ 117 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಸುಧಾರಣೆ ತಂದರು. ಜೋ ರೂಟ್ ಆಸ್ಟ್ರೇಲಿಯಾದಲ್ಲಿ ಇದೇ ಮೊದಲ ಬಾರಿಗೆ ಆಶಸ್ ಟೆಸ್ಟ್ ಶತಕವನ್ನು ಸಹ ಬಾರಿಸಿದರು.

    ಕ್ವಾವ್ಲಿ ವಿಕೆಟ್ ಬಿದ್ದ ಬಳಿಕ ಕಣಕ್ಕಿಳಿದ ಹ್ಯಾರಿ ಬ್ರೂಕ್ ಸ್ವಲ್ಪ ಸಮಯದವರೆಗೆ ರೂಟ್‌ ಜತೆ ಕೈ ಜೋಡಿಸಿದ್ದು ಬಿಟ್ಟರೆ ಉಳಿದ ಯಾವ ಆಟಗಾರ ಸಹ ಹೆಚ್ಚು ಹೊತ್ತು ಕಣದಲ್ಲಿ ಉಳಿಯಲಿಲ್ಲ. ಹೀಗೆ 264 ರನ್‌ಗಳಿಗೆ ತನ್ನ 9 ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ ತಂಡವನ್ನು ಬೇಗನೆ ಆಲ್‌ಔಟ್ ಮಾಡಿ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಬೇಕು ಎಂಬ ಯೋಜನೆಯನ್ನು ಹೊಂದಿದ್ದ ಆಸ್ಟ್ರೇಲಿಯಾಗೆ ಅಂತಿಮ ವಿಕೆಟ್‌ಗೆ ಒಂದಾದ ರೂಟ್ ಹಾಗೂ ಜೋಫ್ರಾ ಆರ್ಚರ್ ಜೋಡಿ ತಣ್ಣೀರೆರಚಿದೆ. ದಿನದಾಟದಂತ್ಯಕ್ಕೆ ಅಜೇಯರಾಗಿ ಉಳಿದುಕೊಂಡ ಈ ಜೋಡಿ 61 ರನ್‌ಗಳ ಜತೆಯಾಟವನ್ನಾಡಿದೆ. ಹಗಲು ರಾತ್ರಿ ಟೆಸ್ಟ್ ಪಂದ್ಯದಲ್ಲಿ ಹತ್ತನೇ ವಿಕೆಟ್‌ನಲ್ಲಿ ದಾಖಲಾದ ಅತಿಹೆಚ್ಚು ರನ್ ಇದಾಗಿದೆ.

    ಇಂಗ್ಲೆಂಡ್ ಮೊದಲ ಇನ್ನಿಂಗ್ಸ್: ಬೆನ್ ಡಕೆಟ್ 0, ಓಲಿ ಪೋಪ್ 0, ಜಾಕ್ ಕ್ರಾವ್ಲಿ 76, ಹ್ಯಾರಿ ಬ್ರೂಕ್ 31, ನಾಯಕ ಬೆನ್ ಸ್ಟೋಕ್ಸ್ 19, ಜೆಮಿ ಸ್ಮಿತ್ ಡಕ್‌ಔಟ್, ವಿಲ್ ಜಾಕ್ಸ್ 19, ಗಸ್ ಆಟ್ಕಿನ್‌ಸನ್ 4, ಬ್ರೈಡನ್ ಕಾರ್ಸ್ ಡಕ್‌ಔಟ್, ಜೋಫ್ರಾ ಆರ್ಚರ್ ಅಜೇಯ 32 ರನ್ ಹಾಗೂ ಜೋ ರೂಟ್ ಅಜೇಯ 135 ರನ್ ಕಲೆಹಾಕಿದ್ದಾರೆ.

    ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ 6 ವಿಕೆಟ್, ಮೈಕೆಲ್ ನಸರ್ ಹಾಗೂ ಸ್ಕಾಟ್ ಬೋಲ್ಯಾಂಡ್ ತಲಾ ಒಂದೊಂದು ವಿಕೆಟ್ ಪಡೆದರು.

    ಬಾಡಿಗೆದಾರರಿಗೆ ಬಿಗ್ ರಿಲೀಫ್! ಇನ್ಮುಂದೆ 10 ತಿಂಗಳ ಠೇವಣಿ ಇಲ್ಲ, 2 ತಿಂಗಳ ಅಡ್ವಾನ್ಸ್ ಮಾತ್ರ: ಹೊಸ ನಿಯಮಗಳು ಜಾರಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search