Monday, November 2, 2026
spot_img
More
    spot_img
    HomeSportsCricketಸಚಿನ್ ಏಕದಿನ ಶತಕ ದಾಖಲೆ ಕೊಹ್ಲಿಯಿಂದ ಉಡೀಸ್; ಈಗ ಟೆಸ್ಟ್ ಶತಕ ದಾಖಲೆ ಮುರಿಯಲು 'ವೇಗದೂತ'...

    ಸಚಿನ್ ಏಕದಿನ ಶತಕ ದಾಖಲೆ ಕೊಹ್ಲಿಯಿಂದ ಉಡೀಸ್; ಈಗ ಟೆಸ್ಟ್ ಶತಕ ದಾಖಲೆ ಮುರಿಯಲು ‘ವೇಗದೂತ’ ರೆಡಿ!

    ಕ್ರಿಕೆಟ್ ದೇವರು ಎಂದೇ ಹೆಸರನ್ನು ಮಾಡಿರುವ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿ ಅಪಾರ ದಾಖಲೆಗಳಿವೆ. ಅವುಗಳಲ್ಲಿ ಈಗಾಗಲೇ ಹಲವು ಮುರಿಯಲ್ಪಟ್ಟಿದ್ದು, ಇನ್ನೂ ಕೆಲವು ಕಷ್ಟಸಾಧ್ಯ ಎನ್ನುವ ಹಂತದಲ್ಲಿವೆ. ಇನ್ನು ಸಚಿನ್ ತೆಂಡೂಲ್ಕರ್ ಅನೇಕ ದಾಖಲೆಗಳ ಪಿತೃವಾಗಿದ್ದು, ಅಂತಹ ದಾಖಲೆಗಳನ್ನು ಮುರಿಯಬೇಕೆಂದರೆ ಆ ಆಟಗಾರರು ಗೋಟ್‌ (goat) ಗಳಾಗಿರಬೇಕು.

    ಅಂತಹ ಗೋಟ್ ( ಗ್ರೇಟೆಸ್ಟ್ ಆಫ್ ಆಲ್‌ ಟೈಮ್ ) ಗಳ ಪೈಕಿ ಓರ್ವರು ವಿರಾಟ್ ಕೊಹ್ಲಿ. ವಿರಾಟ್ ಕೊಹ್ಲಿ ತನ್ನ ಆರಂಭದ ದಿನಗಳಲ್ಲೇ ಅಬ್ಬರಿಸಿ ಅಸಾಧ್ಯವೆನಿಸಿದ್ದ ಸಚಿನ್ ತೆಂಡೂಲ್ಕರ್ ಅವರ ದಾಖಲೆಗಳನ್ನು ಈತ ಮುರಿಯಬಲ್ಲ ಎಂಬ ದೊಡ್ಡ ಭರವಸೆ ಹುಟ್ಟುಹಾಕಿದ ಆಟಗಾರ. ಅದರಂತೆ ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶತಕ ಬಾರಿಸಿದ ದಾಖಲೆ ಹೊಂದಿದ್ದ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿ ಮುಂದೆ ಮುರಿಯಲಸಾಧ್ಯ ಎನ್ನುವಂತಹ ದಾಖಲೆ ಬರೆಯಹೊರಟಿದ್ದಾರೆ.

    ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್‌ನಲ್ಲಿ 49 ಶತಕಗಳನ್ನು ಬಾರಿಸಿದ್ದರು. ವಿರಾಟ್ ಕೊಹ್ಲಿ ಇದನ್ನು ಹಿಂದಿಕ್ಕಿದ್ದು, ಪ್ರಸ್ತುತ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳಲ್ಲೂ ಶತಕ ಬಾರಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 52 ಶತಕಗಳನ್ನು ಪೂರೈಸಿದ್ದಾರೆ.

    ಹೀಗೆ ಸಚಿನ್ ಹೆಸರಿನಲ್ಲಿ ಮುರಿಯಲಸಾಧ್ಯ ಎನ್ನುವಂತಿದ್ದ ಈ ದಾಖಲೆಯನ್ನು ಕೊಹ್ಲಿ ಮುರಿದುಹಾಕಿದ್ದು, ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಬಾರಿಸಿದ ಆಟಗಾರ ಎಂಬ ಸಚಿನ್ ಹೆಸರಿನಲ್ಲಿರುವ ಇನ್ನೊಂದು ದಾಖಲೆ ಸಹ ಇದೀಗ ಮುರಿದುಬೀಳುವ ಹಂತದಲ್ಲಿದೆ.

    ಈ ಭರವಸೆಯನ್ನು ಹುಟ್ಟುಹಾಕಿರುವುದು ಇಂಗ್ಲೆಂಡ್‌ನ ಜೋ ರೂಟ್. ಈ ಕ್ರಿಕೆಟ್ ತಲೆಮಾರಿನ ಫ್ಯಾಬ್ 4 ಆಟಗಾರರಲ್ಲಿ ಓರ್ವ ಎನಿಸಿಕೊಂಡಿರುವ ಜೋ ರೂಟ್ ಪ್ರಸ್ತುತ ನಡೆಯುತ್ತಿರುವ ಆಶಸ್ ಸರಣಿಯ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾದಲ್ಲಿ ಶತಕ ಬಾರಿಸಿದ್ದಾರೆ.

    ಇದು ಇವರ 40ನೇ ಟೆಸ್ಟ್ ಶತಕವಾಗಿದ್ದು, ಸಚಿನ್ ತೆಂಡೂಲ್ಕರ್ ಅವರ ಅತಿಹೆಚ್ಚು ಟೆಸ್ಟ್ ಶತಕ ಬಾರಿಸಿದ ಆಟಗಾರ ಎಂಬ ಬೃಹತ್ ದಾಖಲೆ ಮುರಿಯಲು ಇನ್ನೂ 12 ಶತಕಗಳನ್ನು ಬಾರಿಸಬೇಕಿದೆ. ಸಚಿನ್ ಟೆಸ್ಟ್‌ ಕ್ರಿಕೆಟ್‌ನಲ್ಲಿ ಒಟ್ಟು 51 ಶತಕಗಳನ್ನು ಬಾರಿಸಿದ್ದಾರೆ.

    ಅಂದಹಾಗೆ 2020ರಲ್ಲಿ ಕೇವಲ 17 ಟೆಸ್ಟ್ ಶತಕಗಳನ್ನು ಬಾರಿಸಿದ್ದ ಜೋ ರೂಟ್ ಈ ಸಮಯಕ್ಕೆ 40 ಶತಕಗಳನ್ನು ಪೂರೈಸಿದ್ದು, ಕೇವಲ 4 ವರ್ಷಗಳ ಅವಧಿಯಲ್ಲಿ 23 ಶತಕಗಳನ್ನು ಬಾರಿಸಿದ್ದಾರೆ. ಹೀಗೆ ವೇಗದೂತನಾಗಿರುವ ರೂಟ್ ಸಚಿನ್ ಟೆಸ್ಟ್ ಶತಕ ದಾಖಲೆ ಮುರಿಯುವ ಎಲ್ಲ ಸಾಧ್ಯತೆಗಳಿವೆ.

    ಬಾಡಿಗೆದಾರರಿಗೆ ಬಿಗ್ ರಿಲೀಫ್! ಇನ್ಮುಂದೆ 10 ತಿಂಗಳ ಠೇವಣಿ ಇಲ್ಲ, 2 ತಿಂಗಳ ಅಡ್ವಾನ್ಸ್ ಮಾತ್ರ: ಹೊಸ ನಿಯಮಗಳು ಜಾರಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search