Wednesday, November 4, 2026
spot_img
More
    spot_img
    HomeLatest newsಕರ್ನಾಟಕದ ರೈಲು ಯೋಜನೆಗಳಿಗೆ ವೇಗ: ವಂದೇ ಭಾರತ್ ಸ್ಲೀಪರ್ ರೈಲಿಗೆ ಬೇಡಿಕೆ

    ಕರ್ನಾಟಕದ ರೈಲು ಯೋಜನೆಗಳಿಗೆ ವೇಗ: ವಂದೇ ಭಾರತ್ ಸ್ಲೀಪರ್ ರೈಲಿಗೆ ಬೇಡಿಕೆ

    ಕರ್ನಾಟಕದ ವಿವಿಧ ರೈಲು ಯೋಜನೆಗಳನ್ನು ಪೂರ್ಣಗೊಳಿಸಲು ರಾಜ್ಯ ಸರ್ಕಾರ ಕ್ರಮಗಳನ್ನು ಕೈಗೊಂಡಿದೆ. ಯಾವ ಯೋಜನೆ ಯಾವಾಗ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳ ಜೊತೆ ಸಚಿವರು ಸಭೆಯನ್ನು ನಡೆಸಿದ್ದಾರ.

    ಮೂಲಸೌಕರ್ಯ ಅಭಿವೃದ್ಧಿ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ ಸಚಿವ ಎಂ.ಬಿ.ಪಾಟೀಲ್ ರಾಜ್ಯದ ರೈಲು ಯೋಜನೆಗಳ ಕುರಿತು ಸಭೆಯನ್ನು ನಡೆಸಿದರು.ಸಭೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ. ಎನ್.ಮಂಜುಳಾ, ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ, ನೈರುತ್ಯ ರೈಲ್ವೆ ಮುಖ್ಯ ಆಡಳಿತಾಧಿಕಾರಿ ಅಜಯ್ ಸಿಂಗ್ ಮುಂತಾದವರು ಉಪಸ್ಥಿತರಿದ್ದರು.

    ಈ ಸಭೆಯಲ್ಲಿ ರಾಜ್ಯದಲ್ಲಿ ರೈಲು ಸಂಪರ್ಕಕ್ಕೆ ಮತ್ತಷ್ಟು ಬಲ ತುಂಬುವ ಕುರಿತು ಚರ್ಚಿಸಲಾಯಿತು. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಒಟ್ಟಾರೆ ಅಭಿವೃದ್ಧಿಗೆ ಪೂರಕವಾದ ಯೋಜನೆಗಳ ಕುರಿತು ಸಚಿವರು ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು.

    ವಿಜಯಪುರ-ಬೆಂಗಳೂರು ರೈಲು: ಬೆಂಗಳೂರಿನ ಖನಿಜ ಭವನದಲ್ಲಿ ನಡೆದ ಸಭೆಯಲ್ಲಿ ರಾಜ್ಯದ ವಿವಿಧ ಯೋಜನೆಗಳ ವೆಚ್ಚ ಹಂಚಿಕೆ, ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಯಿತು. ನೈರುತ್ಯ ರೈಲ್ವೆ ಅಧಿಕಾರಿಗಳು ಸಚಿವರಿಗೆ ವಿವರಗಳನ್ನು ನೀಡಿದರು.

    ವಿಜಯಪುರ-ಬೆಂಗಳೂರು ನಡುವೆ ಈಗ ರೈಲು ಪ್ರಯಾಣಕ್ಕೆ 15 ಗಂಟೆ ಬೇಕಾಗುತ್ತಿದೆ. ಇದನ್ನು 10 ಗಂಟೆಗಳಿಗೆ ಇಳಿಸಲು ಪ್ರಯತ್ನಗಳು ನಡೆಯುತ್ತಿದ್ದು, ಈಗಾಗಲೇ ಹಲವು ಸಭೆಗಳನ್ನು ನಡೆಸಲಾಗಿದೆ. ಈಗ ರೈಲ್ವೇ ಅಧಿಕಾರಿಗಳು ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ಮಾರ್ಗಗಳ ಮೂಲಕ ರೈಲು ಓಡಿಸಲು ಅಭ್ಯಂತರವಿಲ್ಲ ಎಂದಿದ್ದಾರೆ ಎಂದು ಸಚಿವರು ಪೋಸ್ಟ್ ಹಾಕಿದ್ದಾರೆ.

    ಇದು ಸಕಾರಾತ್ಮಕ ಬೆಳವಣಿಗೆಯಾಗಿದೆ. ಬೆಂಗಳೂರಿನಿಂದ ಹುಬ್ಬಳ್ಳಿಯವರೆಗೆ ನಿಯಮಿತ ನಿಲುಗಡೆಗಳನ್ನು ಮಾತ್ರ ಕೊಟ್ಟು, ಅಲ್ಲಿಂದ ಮುಂದಕ್ಕೆ ವಿಜಯಪುರದವರೆಗೆ ಸ್ಥಳೀಯ ಜನರಿಗೆ ಅನುಕೂಲವಾಗುವಂತೆ ರೈಲು ಸೇವೆ ಆರಂಭಿಸಿದರೆ ಹೆಚ್ಚು ಪರಿಣಾಮಕಾರಿ ಆಗಲಿದೆ ಈ ಸಂಬಂಧ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ವಿ.ಸೋಮಣ್ಣ ಅವರಿಗೆ ತಕ್ಷಣವೇ ಪತ್ರ ಬರೆಯಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

    ಪ್ರತಿದಿನ ನೂರಾರು ಜನರು ವಿಜಯಪುರ ಜಿಲ್ಲೆಯಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತಾರೆ. ಆದ್ದರಿಂದ ಉಭಯ ನಗರದ ನಡುವಿನ ರೈಲು ಸಂಚಾರದ ಅವಧಿ ಕಡಿಮೆ ಮಾಡುವ ಕುರಿತು ಈ ಹಿಂದೆಯೂ ಸಚಿವರು ಸಭೆಯನ್ನು ನಡೆಸಿದ್ದರು. ಬೆಂಗಳೂರು-ವಿಜಯಪುರ ನಡುವೆ ಸೂಪರ್ ಫಾಸ್ಟ್ ರೈಲು ಅಗತ್ಯವಾಗಿದೆ ಎಂದು ಈ ಹಿಂದೆ ಬೇಡಿಕೆ ಇಡಲಾಗಿತ್ತು.

    ಸಭೆಯಲ್ಲಿ ಚರ್ಚಿಸಿದ ಇತರ ಅಂಶಗಳು

    • ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬದಲು ವಂದೇ ಭಾರತ್ ಸ್ಲೀಪರ್ ಸೇವೆಗೆ ಪ್ರಸ್ತಾಪ
    • ಬೆಂಗಳೂರು–ತುಮಕೂರು & ಬೆಂಗಳೂರು–ಮೈಸೂರು ಚತುಷ್ಪಥ ರೈಲು ಮಾರ್ಗ ಸಮೀಕ್ಷೆ ಅಂತಿಮ ಹಂತ
    • ವಂಡಾಲ–ಆಲಮಟ್ಟಿ ಜೋಡಿ ಹಳಿ 2026ರ ಫೆಬ್ರವರಿಯಲ್ಲಿ ಪೂರ್ಣ
    • ರೈಲುಗಳ ವೇಗ ಹೆಚ್ಚಳಕ್ಕಾಗಿ ವಿದ್ಯುದೀಕರಣ ಪೂರ್ಣಗೊಳಿಸುವುದು
    • ಚಿತ್ರದುರ್ಗ–ಆಲಮಟ್ಟಿ, ಯಾದಗಿರಿ–ಆಲಮಟ್ಟಿ ಸೇರಿ ಹಲವು ಹೊಸ ಮಾರ್ಗಗಳು ಪ್ರಗತಿ
    • ತುಮಕೂರು–ಊರುಕೆರೆ ರೈಲು ಈ ವರ್ಷವೇ ಆರಂಭ
    • ದೊಡ್ಡಹಳ್ಳಿ–ಪಾವಗಡ ಸಂಪರ್ಕ ಮಾರ್ಗ 2026 ಜನವರಿಯಲ್ಲಿ ಆರಂಭ
    • ಮಧುಗಿರಿ–ಪಾವಗಡ ಮಾರ್ಗ 2028 ಫೆಬ್ರವರಿ ಪೂರ್ಣ
    • ಬೆಂಗಳೂರು-ಹಾಸನ-ಮಂಗಳೂರು ಮಾರ್ಗ ಜೋಡಿ ಹಳಿಗೇರಿಸುವ ಬಗ್ಗೆ ಚರ್ಚೆ
    • ಕರಾವಳಿಗೆ ನೇರ ಸಂಪರ್ಕ ಕೊಡಲಿರುವ ಹುಬ್ಬಳ್ಳಿ–ಅಂಕೋಲಾ ಯೋಜನೆಗೆ ಹಸಿರು ನಿಶಾನೆ ನೀಡುವ ಸಲುವಾಗಿ ಈಗಿರುವ ತೊಡಕುಗಳ ನಿವಾರಣೆಗಿರುವ ಕ್ರಮ ಕೈಗೊಳ್ಳುವ ಕುರಿತು ಚರ್ಚಿಸಲಾಗಿದೆ.

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search