Tuesday, November 3, 2026
spot_img
More
    spot_img
    HomeMoneyಇಂಡಿಗೋ ವಿಮಾನಗಳು ರದ್ದಾಗುತ್ತಿರುವುದು ಏಕೆ, ಪ್ರಯಾಣಿಕರ ಆಕ್ರೋಶಕ್ಕೆ ಕಾರಣವೇನು?

    ಇಂಡಿಗೋ ವಿಮಾನಗಳು ರದ್ದಾಗುತ್ತಿರುವುದು ಏಕೆ, ಪ್ರಯಾಣಿಕರ ಆಕ್ರೋಶಕ್ಕೆ ಕಾರಣವೇನು?

    ಭಾರತದ ಅತಿ ದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ಭಾರೀ ಸುದ್ದಿಯಲ್ಲಿದೆ. ಎರಡು ದಿನಗಳಿಂದ ಸಂಸ್ಥೆಯ 200ಕ್ಕೂ ಅಧಿಕ ವಿಮಾನಗಳ ಹಾರಾಟ ರದ್ದಾಗುತ್ತಿದೆ, ಇಲ್ಲವೇ ವಿಳಂಬವಾಗುತ್ತಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಸೇರಿದಂತೆ ದೇಶದ ವಿವಿಧ ಏರ್‌ಪೋರ್ಟ್‌ನಲ್ಲಿ ಇಂಡಿಗೋ ವಿರುದ್ಧ ಪ್ರಯಾಣಿಕರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಕಳೆದ ಕೆಲವು ವರ್ಷಗಳಲ್ಲಿಯೇ ಮೊದಲ ಬಾರಿಗೆ ಇಂಡಿಗೋ ಈ ಮಾದರಿಯ ವಿಮಾನ ಸೇವೆ ವ್ಯತ್ಯಯವನ್ನು ಎದುರಿಸುತ್ತಿದೆ. ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲಿ ಸಂಸ್ಥೆಯ ಸಿಬ್ಬಂದಿ ಜೊತೆ ವಾಗ್ವಾದ ನಡೆಸುತ್ತಿದ್ದಾರೆ.

    ಬುಧವಾರ ಮತ್ತು ಗುರುವಾರ ಸುಮಾರು 200 ವಿಮಾನಗಳು ರದ್ದುಗೊಂಡಿವೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿಯೇ 100 ವಿಮಾನಗಳು ಹಾರಾಟವನ್ನು ನಡೆಸಿಲ್ಲ, ಇದು ಪ್ರಯಾಣಿಕರ ಸಹನೆಯನ್ನು ಪರೀಕ್ಷಿಸುವಂತೆ ಮಾಡಿದೆ.

    ವಿಮಾನ ಹಾರಾಟ ರದ್ದು ಏಕೆ?: ಇಂಡಿಗೋ ವಿಮಾನಯಾನ ಸಂಸ್ಥೆ ಸಿಬ್ಬಂದಿಗಳ ಕೊರತೆ, ಹೊಸ ಉದ್ಯೋಗ ನೀತಿ, ತಾಂತ್ರಿಕ ಸಮಸ್ಯೆಗಳ ಕಾರಣಕ್ಕೆ ವಿಮಾನಗಳ ಹಾರಾಟವನ್ನು ರದ್ದುಗೊಳಿಸುತ್ತಿದೆ. ಇದರಿಂದಾಗಿ ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರು ಪರದಾಡುವಂತೆ ಆಗಿದೆ.

    ಸಿಬ್ಬಂದಿಗಳ ಕೊರತೆ ಪ್ರಮುಖ ಕಾರಣವಾಗಿದೆ. ನವೆಂಬರ್ 1ರಿಂದ ಜಾರಿಗೆ ಬಂದಿರುವ ಹೊಸ ಉದ್ಯೋಗ ನೀತಿಯ ಬಳಿಕ ಇಂಡಿಗೋ ಪೈಲೆಟ್ ಮತ್ತು ಸಿಬ್ಬಂದಿಗಳ ಕೊರತೆಯನ್ನು ಎದುರಿಸುತ್ತಿದೆ.

    ಹೊಸ ಮತ್ತು ಕಟ್ಟುನಿಟ್ಟಾದ ಉದ್ಯೋಗ ನೀತಿಯ ಕೆಲಸದ ಸಮಯದ ನಿಯಮಗಳ ಪ್ರಕಾರ ಪೈಲಟ್‌ಗಳ ಹಾರಟದ ಅವಧಿ ಕಡಿತಗೊಳಿಸಲಾಗಿದೆ ಮತ್ತು ಕಡ್ಡಾಯ ವಿಶ್ರಾಂತಿ ಅವಧಿಯನ್ನು ಹೆಚ್ಚಿಸಲಾಗಿದೆ. ಹಲವು ಇಂಡಿಗೋ ವಿಮಾನಗಳಿಗೆ ಕಾನೂನುಬದ್ಧವಾಗಿ ಲಭ್ಯವಿರುವ ಸಿಬ್ಬಂದಿ ಯಾರೂ ಇಲ್ಲದ ಕಾರಣ ವಿಮಾನ ಸೇವೆ ರದ್ದುಗೊಂಡಿದೆ.

    ಮೂಲಗಳ ಮಾಹಿತಿ ಪ್ರಕಾರ ಈ ಹಿಂದೆ ರೋಸ್ಟರ್ ಮಾಡಲಾಗಿದ್ದ ಪೈಲಟ್‌ಗಳು ಪರಿಷ್ಕೃತ ಮಿತಿಗಳಡಿ ಹಾರಟ ನಡೆಸಲು ಅರ್ಹರಾಗಿರದಿದ್ದ ಕಾರಣ ಪೂರ್ತಿ ರೊಟೇಷನ್‌ಗಳನ್ನೇ ರದ್ದುಗೊಳಿಸಬೇಕಾದ ಸ್ಥಿತಿ ಬಂತು. ಆದ್ದರಿಂದ ಇಂಡಿಗೋ ಈಗ ಪೈಲಟ್‌ಗಳು ಮತ್ತು ಕ್ಯಾಬಿನ್ ಸಿಬ್ಬಂದಿಯ ತೀವ್ರ ಕೊರತೆಯನ್ನು ಎದುರಿಸುತ್ತಿದೆ.

    ಕಳೆದ ತಿಂಗಳು ಪರಿಷ್ಕೃತ ವಿಮಾನ ಕರ್ತವ್ಯ ಸಮಯ ಮಿತಿ (ಎಫ್‌ಡಿಟಿಎಲ್) ಮಾನದಂಡಗಳನ್ನ ಪರಿಚಯಿಸಲಾಗಿದೆ. ಭಾರತದ ಪ್ರಮುಖ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಸುಮಾರು 2,200 ವಿಮಾನಗಳನ್ನು ಹೊಂದಿದೆ ಮತ್ತು ರಾತ್ರಿ ಸಮಯದಲ್ಲಿ ಸಂಚಾರ ನಡೆಸುವ ವಿಮಾನಗಳೇ ಅಧಿಕವಾಗಿದೆ. ಆದ್ದರಿಂದ ಸಿಬ್ಬಂದಿ ರೊಟೇಷನ್‌ಗಳನ್ನು ಸಿದ್ಧಪಡಿಸುವುದು ಸವಾಲಿನ ಕೆಲಸವಾಗುತ್ತಿದೆ.

    ಹೆಚ್ಚುವರಿ ಕೆಲಸದ ಅವಧಿ ಕಡಿತ, ರಾತ್ರಿ ಹಾರಾಟದ ವಿಮಾನಗಳ ಸಂಚಾರ ರದ್ದುಗೊಳಿಸುವುದು, ವಾರದ ವಿಶ್ರಾಂತಿ ಚಾರ್ಟ್ ಸಿದ್ಧಪಡಿಸಬೇಕಿದೆ. ಆದ್ದರಿಂದ ಸಿಬ್ಭಂದಿಗಳ ಕೊರತೆ ಉಂಟಾಗುತ್ತಿದ್ದು, ಬಹು ಬೇಡಿಕೆ ಮಾರ್ಗದಲ್ಲಿಯೂ ವಿಮಾನ ಹಾರಾಟ ನಡೆಸಲು ಸಿಬ್ಬಂದಿಗಳಿಲ್ಲ.

    ಮಂಗಳವಾರ ಪುಣೆ, ದೆಹಲಿ ವಿಮಾನ ನಿಲ್ದಾಣದಲ್ಲಿ ಚೆಕ್ ಇನ್‌ನ ತಾಂತ್ರಿಕ ಸಮಸ್ಯೆ ಕಾರಣಕ್ಕೆ ಹಲವು ವಿಮಾನಗಳು ವಿಳಂಬವಾದವು. ಹಲವು ವಿಮಾನಗಳು ರದ್ದುಗೊಂಡವು. ಇದರಿಂದಾಗಿ ಇರುವ ಸಿಬ್ಬಂದಿಗಳ ಕೆಲಸದ ಅವಧಿಯಲ್ಲಿಯೂ ಬದಲಾವಣೆ ಉಂಟಾಯಿತು. ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಯಿತು.

    ಅಲ್ಲದೇ ಚಳಿಗಾಲದ ಹವಾಮಾನ ವೈಫರಿತ್ಯ ಸಮಸ್ಯೆಗಳು, ಪ್ರಯಾಣಿಕರ ದಟ್ಟಣೆ, ಪೀಕ್ ಅವರ್‌ನ ಬೇಡಿಕೆ ಮುಂತಾದ ಕಾರಣಕ್ಕೆ ಸಮಯ ಪಾಲನೆ ಮಾಡಲು ಇಂಡಿಗೋ ಸಂಸ್ಥೆಗೆ ಸಾಧ್ಯವಾಗಲಿಲ್ಲ. ಆದ್ದರಿಂದ ವಿಮಾನ ಸಂಚಾರದಲ್ಲಿ ಅಡಚಣೆ ಉಂಟಾಗಿದೆ. ಮಂಗಳವಾರ ಒಂದೇ ದಿನ 1,400 ವಿಮಾನಗಳು ವಿಳಂಬವಾಗಿವೆ ಎಂದು ಸಂಸ್ಥೆಯೇ ಹೇಳಿದೆ. ಡಿಜಿಸಿಎ ಪ್ರಕಾರ ನವೆಂಬರ್‌ನಲ್ಲಿ ಸಂಸ್ಥೆಯ 1,232 ವಿಮಾನಗಳ ಸೇವೆ ರದ್ದಾಗಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search