ಕನ್ನಡದ ಪ್ರತಿಭಾವಂತ ನಟ ಧನಂಜಯ್ ಇದೇ ತಿಂಗಳ 16ರಂದು ವೈವಾಹಿಕ ಜೀವಕ್ಕೆ ಕಾಲಿಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಪರಿಚಯವಿರುವ ಗೆಳತಿ, ವೈದ್ಯೆ ಧನ್ಯತಾ ಜತೆ ಧನಂಜತ್ ಮೈಸೂರಿನಲ್ಲಿ ಸಪ್ತಪದಿ ತುಳಿಯಲಿದ್ದಾರೆ.
ಸ್ನೇಹದಲ್ಲಿ ಶುರುವಾದ ಬಂಧ ಪ್ರೀತಿಗೆ ತಿರುಗಿ ಇದೀಗ ಈ ಜೋಡಿ ವಿವಾಹವಾಗುತ್ತಿದ್ದು, ಕಳೆದೆರಡು ತಿಂಗಳಿನಿಂದ ಸಿನಿಮಾ ಸ್ಟಾರ್ಗಳು, ರಾಜಕಾರಣಿಗಳು ಹಾಗೂ ಇತರೆ ಗಣ್ಯ ವ್ಯಕ್ತಿಗಳಿಗೆ ಮದುವೆ ಆಮಂತ್ರಣ ನೀಡುತ್ತಾ ಬಂದಿದ್ದಾರೆ.
ಹೀಗೆ ಬಹುತೇಕ ಚಿತ್ರರಂಗದ ಎಲ್ಲರನ್ನು ಮದುವೆಗೆ ಆಹ್ವಾನಿಸಿದ ಧನಂಜಯ್ ಕೊಲೆ ಆರೋಪದ ಮೇಲೆ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಬಂದಿರುವ ನಟ ದರ್ಶನ್ ಅವರನ್ನು ಇನ್ನೂ ಮದುವೆಗೆ ಕರೆಯದೇ ಇರುವುದು ಪ್ರಶ್ನೆಯನ್ನು ಹುಟ್ಟುಹಾಕಿತ್ತು.
ಈ ಪ್ರಶ್ನೆ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿಯೂ ಸಹ ಧನಂಜಯ್ ಅವರಿಗೆ ಎದುರಾಯಿತು. ಈ ಕುರಿತು ಪ್ರತಿಕ್ರಿಯಿಸಿದ ಧನಂಜಯ್ “ನಾನು ಎಲ್ಲರನ್ನೂ ಕರೆಯತ್ತಿದ್ದೇನೆ ಎಂದಮೇಲೆ ಅವರನ್ನೂ ಸಹ ಕರೆಯುವ ಪ್ರಯತ್ನ ಮಾಡಿರುತ್ತೇನೆ. ನನಗೆ ಅವರನ್ನು ತಲುಪಲಾಗಲಿಲ್ಲ ಅಷ್ಟೇ. ಈ ಸುದ್ದಿಗೋಷ್ಠಿಯ ಮೂಲಕವೂ ಸಹ ನಾನು ಅವರನ್ನು ಮದುವೆಗೆ ಆಹ್ವಾನಿಸುತ್ತಿದ್ದೇನೆ” ಎಂದು ಹೇಳಿ ಬಹಿರಂಗವಾಗಿಯೇ ದರ್ಶನ್ ಅವರನ್ನು ಮದುವೆಗೆ ಆಹ್ವಾನಿಸಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


