ಮೊಮೊಸ್ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ ಮಕ್ಕಳಿಂದ ದೊಡ್ಡವರ ತನಕ ಇಷ್ಟ ಪಡುವ ತಿನಿಸಾಗಿದೆ .ಮೊಮೊಸ್ ತಿಂಡಿ ಪ್ರಿಯರ ಅಚ್ಚುಮೆಚ್ಚಿನ ಸ್ನ್ಯಾಕ್ಸ್ ಆಗಿದೆ.ಇದರಲ್ಲಿ ವೆಜ್ ಹಾಗೂ ನಾನ್ ವೆಜ್ ಕೂಡ ಮಾಡಬಹುದಾಗಿದೆ .ಮೊಮೊಸ್ ಉತ್ತರ ಭಾರತದ ಜನಪ್ರಿಯ ಆಹಾರವಾಗಿದೆ.ಮೊಮೊಸ್ ಡಿಶ್ ಹತ್ತಿರದ ನೇಪಾಳ ಮತ್ತು ಟಿಬೆಟ್ನಿಂದ ಬಂದ ಖಾದ್ಯವಾಗಿದೆ. ಸದ್ಯ ನಗರ ಪ್ರದೇಶ ಮತ್ತು ರೆಸ್ಟೋರೆಂಟ್ಗಳಲ್ಲಿ ಈ ಡಿಶ್ ಸಿಗುತ್ತದೆ.ವಿಶೇಷವಾಗಿ ರೆಸ್ಟೋರೆಂಟ್ ಮತ್ತು ಸ್ಟ್ರೀಟ್ ಫುಡ್ ಸ್ಟಾಲ್‌ಗಳಲ್ಲಿ ಸುಲಭವಾಗಿ ಲಭ್ಯ.ಈಗ ಮೊಮೊಸ್ ಅನೇಕ ಮಂದಿಯ ಫೇವರೆಟ್ ಫುಡ್ ಆಗಿದೆ.ಮಕ್ಕಳಿಗೂ ಮೋಮೋಸ್ ತಿನ್ನಲು ಇಷ್ಟವಾಗುತ್ತದೆ. ಸಂಜೆ ಟೈಂನಲ್ಲಿ ಮೋಮೋಸ್ ತಿನ್ನುವುದಕ್ಕೆ ತುಂಬಾನೇ ಚೆನ್ನಾಗಿರುತ್ತದೆ. ಸುಲಭವಾಗಿ ಮನೆಯಲ್ಲಿ ವೆಜ್ ಮೋಮೋಸ್ ಮಾಡಬಹುದು. ಯಾವಾಗಲೂ ಕರಿದ ತಿಂಡಿ ತಿನ್ನುವ ಬದಲು ವಾರಕ್ಕೊಮ್ಮೆ ಮೋಮೋಸ್ ಸವಿದರೆ ಡಿಫರೆಂಟ್ ಸ್ನ್ಯಾಕ್ಸ್ ಆಗಿರುತ್ತದೆ. ಹಬೆಯಲ್ಲಿ ಮಾಡಿದ ಆಹಾರ ಆರೋಗ್ಯಕ್ಕೂ ಒಳ್ಳೆಯದು. ಸಂಜೆಯ ಸಮಯಕ್ಕೆ ಪರ್ಫೆಕ್ಟ್ ಸ್ನ್ಯಾಕ್ ಆಗಿರುವ ಮೊಮೊಸ್ ಮನೆಯಲ್ಲಿ ಮಾಡೋದು ತುಂಬಾ ಸುಲಭ! ಯಾವಾಗಲೂ ಕರಿದ ತಿಂಡಿಗಳ ಬದಲು ಇದನ್ನು ವಾರಕ್ಕೊಮ್ಮೆ ಟ್ರೈ ಮಾಡಿದರೆ ಬೇರೆ ರುಚಿಯ ಸ್ನ್ಯಾಕ್ ಆಗಿರುತ್ತದೆ. ಅದನ್ನು ಹೇಗೆ ತಯಾರಿಸಬಹುದು ಎಂಬುದನ್ನು ನೋಡೋಣ.

ವೆಜ್ ಮೋಮೋಸ್ ಮಾಡಲು ಬೇಕಾಗುವ ಸಾಮಾಗ್ರಿಗಳು
ಮೈದಾಹಿಟ್ಟು – 1 ಕಪ್
ಕ್ಯಾರೆಟ್ ತುರಿ – 1 ಕಪ್
ಕ್ಯಾಬೇಜ್ (ಎಲೆಕೋಸು) – 1 ಕಪ್
ಈರುಳ್ಳಿ – 1
ತುರಿದ ಶುಂಠಿ – ಅರ್ಧ ಟೀ ಸ್ಪೂನ್
ಕ್ಯಾಪ್ಸಿಕಂ – 1 ಕಪ್
ಕರಿಮೆಣಸಿನಪುಡಿ – ಅರ್ಧ ಟೀ ಸ್ಪೂನ್
ಕೊತ್ತಂಬರಿಸೊಪ್ಪು – ಸ್ವಲ್ಪ
ಹಸಿಮೆಣಸಿನಕಾಯಿ – 5
ಎಣ್ಣೆ – ಅಗತ್ಯವಿರುವಷ್ಟು
ಉಪ್ಪು – ರುಚಿಗೆ ತಕ್ಕಷ್ಟು

ವೆಜ್ ಮೋಮೋಸ್ ತಯಾರಿಸುವ ವಿಧಾನ:
ಮೊದಲು ಮೈದಾ ಹಿಟ್ಟನ್ನು ಉಪ್ಪಿನೊಂದಿಗೆ ಬೆರೆಸಿ ನಂತರ ನೀರು ಸೇರಿಸಿ ಪರಾಟಾ ಹಿಟ್ಟಿನ ಹದಕ್ಕೆ ಕಲಸಿ. ನಂತರ, ಅದಕ್ಕೆ ಎಣ್ಣೆಯನ್ನು ಹಾಕಿ, 5 ನಿಮಿಷಗಳ ಕಾಲ ಚೆನ್ನಾಗಿ ಬೆರೆಸಿಕೊಳ್ಳಿ, ಜೊತೆಗೆ 30 ನಿಮಿಷಗಳ ಕಾಲ ನೆನೆಸಿ.
ಈಗ ಬಾಣಲೆಯಲ್ಲಿ ಹುರಿದು ತಣ್ಣಗಾಗಿಸಿ, ಪಕ್ಕಕ್ಕೆ ಇಡಿ. ಈಗ ಒಂದು ಬೌಲ್ನಲ್ಲಿ ಕತ್ತರಿಸಿದ ವಾಲ್ನಟ್ಸ್, ಹಸಿರು ಮೆಣಸಿನಕಾಯಿ, ಬೆಳ್ಳುಳ್ಳಿ, ಶುಂಠಿ, ಸ್ಪ್ರಿಂಗ್ ಆನಿಯನ್, ಸ್ಪ್ರಿಂಗ್ ಆನಿಯನ್,,ಕ್ಯಾಬೇಜ್, ಕ್ಯಾಪ್ಸಿಕಂ,ಕ್ಯಾರೆಟ್ ತುರಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಮೈದಾಹಿಟ್ಟಿನ ಮಿಶ್ರಣವನ್ನು ತೆಗೆದುಕೊಂಡು ಚಿಕ್ಕ ಚಿಕ್ಕ ಉಂಡೆ ಮಾಡಿಕೊಂಡು, ಪೂರಿ ಆಕಾರದಲ್ಲಿ ಲಟ್ಟಿಸಿಕೊಳ್ಳಬೇಕು. ಹಿಟ್ಟಿನ ಮಧ್ಯೆ ತರಕಾರಿ ಮಿಶ್ರಣ ಸ್ವಲ್ಪ ಹಾಕಿ ಹಿಟ್ಟಿನ ಅಂಚಿನಲ್ಲಿ ಎಣ್ಣೆ ಸವರಿಕೊಳ್ಳಬೇಕು. ನಂತರ ಇದನ್ನು ಮೋಮೋಸ್ ಆಕಾರಕ್ಕೆ ಫೋಲ್ಡ್ ಮಾಡಿಕೊಳ್ಳಬೇಕು.
ಸ್ಟೌವ್ ಮೇಲೆ ಇಡ್ಲಿ ಪಾತ್ರೆ ಇಟ್ಟು, ಇಡ್ಲಿ ತಟ್ಟೆಗೆ ಎಣ್ಣೆ ಸವರಿಕೊಂಡು ಎಲ್ಲಾ ಮೋಮೋಸ್ ಗಳನ್ನು ಹಬೆಯಲ್ಲಿ ಬೇಯಲು ಇಡಬೇಕು. ಸ್ಟೌವ್ ಮೀಡಿಯಂ ಫ್ಲೇಮ್ ನಲ್ಲಿಟ್ಟು ಸುಮಾರು 10 ನಿಮಿಷಗಳ ಕಾಲ ಬೇಯಿಸಿಕೊಳ್ಳಬೇಕು. 10 ನಿಮಿಷ ಬೆಂದ ನಂತರ ಮೋಮೋಸ್ ಅನ್ನು ಸರ್ವಿಂಗ್ ಪ್ಲೇಟ್ ಗೆ ಹಾಕಿಕೊಳ್ಳಬೇಕು. ಮೊಮೊಸ್ ಅನ್ನು ಟೊಮೆಟೋ ಕೆಚಪ್, ಸ್ಪೈಸಿ ಚಟ್ನಿ ಅಥವಾ ಚಿಲ್ಲಿ ಸಾಸ್ ಜೊತೆಗೆ ಸವಿಯಬಹುದು
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


