ಬೆಂಗಳೂರು;ಇಂದು ಬುಧವಾರ ಕರ್ನಾಟಕದ ವಿವಿಧ ಭಾಗಗಳಲ್ಲಿ ಬೆಳ್ಳಂ ಬೆಳಗೆ ಉದ್ಯಮಿಗಳು, ಬಿಲ್ಡರ್ ಗಳ ಮನೆ, ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ನಡೆಸಿದ್ದಾರೆ.ಬೆಂಗಳೂರ, ಮೈಸೂರು, ಮಂಡ್ಯ, ಆರ್.ಟಿ.ನಗರ, ಇಳವಾಲ, ರಾಮಕೃಷ್ಣ ಸೇರಿದಂತೆ 30 ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಉದ್ಯಮಿಗಳು ಮತ್ತು ಬಿಲ್ಡರ್‌ಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆದಿದ್ದು, ಅಲ್ಲಿನ ದಾಖಲೆಗಳನ್ನು ಪರಿಶೀಲನೆಗಾಗಿ ವಶಪಡಿಸಿಕೊಳ್ಳಲಾಗಿದೆ.ಆದಾಯ ತೆರಿಗೆ(Income tax) ವಂಚನೆ ಹಿನ್ನಲೆಯಲ್ಲಿ ಈ ದಾಳಿ ನಡೆಸಲಾಗಿದೆ. ದೆಹಲಿ, ಚೆನೈ, ಗೋವಾ,ಕೋಲ್ಕತ್ತಾದಿಂದ ಅಧಿಕಾರಿಗಳು ಬಂದಿದ್ದಾರೆ.ಐಟಿ ಅಧಿಕಾರಿಗಳು ಸುಮಾರು 90 ವಾಹನಗಳಲ್ಲಿ ಹೋಗಿ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಮನೆ, ಕಚೇರಿಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಬೆಳಗ್ಗೆ 5 ಗಂಟೆಗೆ ಐಟಿ ಅಧಿಕಾರಿಗಳ ದಾಳಿ ನಡೆಸಿದ್ದು ಭ್ರಷ್ಟರಿಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


