ಡೊನಾಲ್ಡ್ ಟ್ರಂಪ್ ಮತ್ತೆ ಅಧಿಕಾರಕ್ಕೆ ಬಂದಾಗಿನಿಂದ ವಲಸೆಗಾರರನ್ನು ಅಮೆರಿಕಾದಿಂದ ಹೊರ ಹಾಕಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಲೇ ಇದೆ.
ಅದರಲ್ಲೂ ಅಮೆರಿಕಾಗೆ ಹೋಗಿ ನೆಲೆಸಿರುವ ಭಾರತೀಯರನ್ನೂ ದೇಶದಿಂದ ಹೊರಹಾಕಲಿದ್ದಾರೆ, ಅವರೆಲ್ಲಾ ವಾಪಸ್ ತವರಿಗೆ ಮರಳಲಿದ್ದಾರೆ ಎಂದೂ ಸಹ ಮಾತುಗಳು ಕೇಳಿಬರುತ್ತಿವೆ.
ಹೀಗೆ ವಲಸಿಗರನ್ನು ಅಮೆರಿಕಾ ಹೊರಹಾಕಲಿದೆ ಎಂಬ ಮಾತುಗಳು ಕೇಳಿಬರುತ್ತಿದ್ದಂತೆ ಹಲವು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅಮೆರಿಕಾದ ಸೈನಿಕರೆದುರು ಮಾಸ್ಕ್ ಧರಿಸಿದ ಹಾಗೂ ಸರಪಳಿಯಿಂದ ಕೈಗಳನ್ನು ಕಟ್ಟಿಹಾಕಿದ ಜನರು ಸಾಲಾಗಿ ತೆರಳುತ್ತಿರುವ ವಿಡಿಯೊವೊಂದನ್ನು ಹಂಚಿಕೊಂಡಿರುವ ನೆಟ್ಟಿಗರೊಬ್ಬರು “ಕೈಗೆ ಸರಪಳಿ, ಮುಖಕ್ಕೆ ಮಾಸ್ಕ್ ಹಾಗೂ ಕಾಲುಗಳಿಗೂ ಸರಪಳಿ ಹಾಕಿ ಇಷ್ಟು ಕ್ರೂರ ರೀತಿಯಲ್ಲಿ ಭಾರತವನ್ನು ಅಮೆರಿಕಾ ಹೊರಹಾಕುತ್ತಿದೆ” ಎಂದು ಬರೆದುಕೊಂಡಿದ್ದಾರೆ.
ಆದರೆ ಈ ವಿಡಿಯೊ ನಕಲಿಯಾಗಿದೆ. ಇದರಲ್ಲಿ ಇರುವವರು ಯಾರೂ ಭಾರತೀಯರಲ್ಲ. ಜನವರಿ 27ರಂದು ಈ ವಿಡಿಯೊ ಚಿತ್ರೀಕರಣಗೊಂಡಿದ್ದು, ಕೊಲಂಬಿಯಾದಿಂದ ಅಕ್ರಮವಾಗಿ ವಲಸೆ ಬಂದವರು ಇವರಾಗಿದ್ದಾರೆ. ಹೀಗಾಗಿ ಈ ವಿಡಿಯೊ ಬಗ್ಗೆ ತಪ್ಪಾದ ಮಾಹಿತಿ ಹರಿದಾಡುತ್ತಿದ್ದು, ಕೊಲಂಬಿಯಾ ಜನರ ವಿಡಿಯೊವನ್ನು ಭಾರತೀಯರದ್ದು ಎಂದು ತಪ್ಪಾಗಿ ಹಂಚಲಾಗುತ್ತಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


