ನವದೆಹಲಿ: ಇಂದು ( ಫೆಬ್ರವರಿ 5 ) ದೆಹಲಿಯ 70 ಕ್ಷೇತ್ರಗಳಗೆ ಚುನಾವಣೆ ನಡೆಯುತ್ತಿದ್ದು, ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. ಬೆಳಗ್ಗೆ 7ರಿಂದ ಸಂಜೆ 6.30ರವರೆಗೆ ಮತದಾನ ಪ್ರಕ್ರಿಯೆ ನಡೆಯಲಿದ್ದು, 699 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ದಾಖಲಾಗಲಿದೆ.
ಇನ್ನು ಬೆಳ್ಳಂಬೆಳಗ್ಗೆ ಚಳಿಯನ್ನೂ ಲೆಕ್ಕಿಸದೇ ಉತ್ಸುಕತೆಯಿಂದ ಬಂದು ಹಲವಾರು ಮಂದಿ ತಮ್ಮ ಹಕ್ಕನ್ನು ಚಲಾಯಿಸಿದ್ದು, ಇದೀಗ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ಎಂಪಿ ರಾಹುಲ್ ಗಾಂಧಿ ಸಹ ಮತದಾನ ಮಾಡಿದ್ದಾರೆ.
ನಿರ್ಮಾಣ್ ಭವನದಲ್ಲಿ ರಾಹುಲ್ ಗಾಂಧಿ ಮತ ಚಲಾಯಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


