ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಕಾಲ್ತುಳಿತ ಸಂಭವಿಸಿ ಮೂವತ್ತಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಮೌನಿ ಅಮಾವಾಸ್ಯೆಯ ಪ್ರಯುಕ್ತ ನದಿಯಲ್ಲಿ ಪವಿತ್ರ ಸ್ನಾನ ಮಾಡಲು ದೊಡ್ಡ ಪ್ರಮಾಣದಲ್ಲಿ ಜನರು ನೆರೆದಿದ್ದಾಗ ಈ ಘಟನೆ ಸಂಭವಿಸಿತ್ತು.
ಇನ್ನು ಈ ಕಾಲ್ತುಳಿತ ದಿನ ಕಳೆದಂತೆ ರಾಜಕೀಯ ಕಿತ್ತಾಟಕ್ಕೂ ಕಾರಣವಾಗಿದ್ದು, ಅನೇಕರು ವಿಐಪಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿ ಜನಸಾಮಾನ್ಯರಿಗೆ ನೂಕು ನುಗ್ಗಲು ಉಂಟಾಗುವಂತೆ ಮಾಡಿದ್ದೇ ಇದಕ್ಕೆ ಕಾರಣ ಎಂದು ಯೋಗಿ ಸರ್ಕಾರವನ್ನು ಟೀಕಿಸಿದ್ದಾರೆ.
ಹೀಗೆ ಹಲವು ವಿಷಯಗಳಿಂದಾಗಿ ಚರ್ಚೆಗೆ ಒಳಗಾಗಿರುವ ಮಹಾಕುಂಭ ಮೇಳದ ಕಾಲ್ತುಳಿತ ಸಂದರ್ಭದಲ್ಲಿ ಸ್ಥಳದಲ್ಲೇ ಎರಡು ಪ್ರತಿಷ್ಠಿತ ನ್ಯೂಸ್ ಚಾನೆಲ್‌ಗಳು ಇದ್ದರೂ ಸಹ ಅವರು ಕಾಲ್ತುಳಿತದ ಕುರಿತು ಲೈವ್ ಕವರೇಜ್ ಮಾಡಲು ಮುಂದಾಗಲಿಲ್ಲ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ ಈ ಎರಡೂ ಚಾನೆಲ್‌ಗಳ ಒಬಿ (ಔಡ್‌ಡೋರ್ ಬ್ರಾಡ್‌ಕಾಸ್ಟ್) ವಾಹನಗಳು ಆ ಸಮಯಕ್ಕೆ ಸ್ಥಳದಲ್ಲೇ ಇದ್ದವು ಎಂದು ಫೋಟೊಗಳನ್ನೂ ಸಹ ಹಂಚಿಕೊಂಡಿದ್ದಾರೆ. ಹಾಗೂ ಇದೇ ಕಾರಣಕ್ಕೆ ಪ್ರೆಸ್ ಫ್ರೀಡಂ ಇಂಡೆಕ್ಸ್‌ನಲ್ಲಿ ಭಾರತ 180 ಸ್ಥಾನಗಳ ಪೈಕಿ ಕೇವಲ 159ನೇ ಸ್ಥಾನದಲ್ಲಿದೆ ಎಂದುಬರೆದುಕೊಂಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


